ಎಂಪಿ, ಅಡಿಗೆಮನೆ:??ಹಲಸು ಹಣ್ಣಿನ ಮುಳ್ಕ??

750
Share

Reward is for preparation of⬇️
ಈ ಭಾನುವಾರದ ಥೀಮ್: ಹಲಸಿನ ಹಣ್ಣಿನಿಂದ ತಯಾರಿಸುವ ತಿನಿಸು…ಹಂತ ಹಂತ ವಾಗಿ

. ??ಹಲಸು ಹಣ್ಣಿನ ಮುಳ್ಕ??
ಇದು ದಕ್ಷಿಣ ಕನ್ನಡ/ ಕೇರಳದ ಸಾಯಂಕಾಲದ ಸಿಹಿ ಲಘು ಖಾದ್ಯ ..
*ಇದಕ್ಕೆ ಬೇಕಾಗುವ ಪಧಾರ್ಥ/ ಮಾಡುವ ಬಗೆ :
ಎರಡು ಬಟ್ಟಲು ದೋಸೆ ಅಕ್ಕಿ ೫ ಗಂಟೆ ಕಾಲ ನೆನೆಸಿ , ಬಸಿದು ನುಣ್ಣಗೆ ರುಬ್ಬಿ …
*೧೫ ರಿಂದ ೨೦ ಹಲಸಿನ ತೊಳೆ, ೧ ಬಟ್ಟಲು ಬೆಲ್ಲ ಮತ್ತು ೪/೫ ಏಲಕ್ಕಿ ರುಬ್ಬಿ ….
*೧ ಚಿಟುಗೆ ಉಪ್ಪು ಸೇರಿಸಿ ಎರಡನ್ನೂ ಸೇರಿಸಿ ಒಂದು ಸುತ್ತು ರುಬ್ಬಿ ಇಡ್ಲಿ ಹಿಟ್ಟಿನ ಹದ ಮಾಡಿ ನೆನೆಯಲು ಬಿಡಿ …..
*೩ ಗಂಟೆಯ ನಂತರ ಸಣ್ಣ ಸೌಟಿನಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದು, ಅಡುಗೆ ಎಣ್ಣೆಯಲ್ಲಿ ನಿಧಾನವಾಗಿ ಬಿಟ್ಟು , ಮಂದ ಉರಿಯಲ್ಲಿ ಕಂದು ಬಣ್ಣ ತಿರುಗುವ ತನಕ ಕರಿಯಿರಿ …
*ಮೇಲ್ಬಾಗ ಗರಿಯಾಗಿಯೂ , ಒಳ ಭಾಗ ಮೃದುವಾಗಿಯೂ ಇರುವ ಸಿಹಿ ಮುಳ್ಕ ರೆಡಿ …
?ಬಿಸಿ ಬಿಸಿಯಾಗಿ ತಿಂದರೆ ಬಲು ರುಚಿ …
?ಮಾಡಿ …. ತಿನ್ನಿ …ಅನುಭವ ಹಂಚಿಕೊಳ್ಳಿ ?

ಶ್ರೀಯುತ ಪ್ರಭಾಕರ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು.

ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ಹಾಕಬಹುದು

ಯಾರಾದರೂ ಅಡಿಗೆ ತಿಳಿಸುವ ಇಚ್ಛೆಯಿದ್ದಲ್ಲಿ ವಾಟ್ಸಪ್ ಮೂಲಕ ಮೇಲೆ ಹಾಕುತ್ತಿರುವ ಹಾಗೆ ಈ 9901398398 ನಂಬರ್ ಗೆ ತಿಂಡಿತಿನಿಸುಗಳನ್ನು ಕಳಿಸಿದರೆ ಚೆನ್ನಾಗಿದ್ದರೆ ಮೈಸೂರು ಪತ್ರಿಕೆ ತಂಡ ಪರಿಶೀಲಿಸಿ ಪ್ರಕಟಿಸುತ್ತದೆ . (ಸಸ್ಯಹಾರಿ ಮಾತ್ರ)


Share