ಗಡಿ ತಂಟೆಗೆ ಬಂದರೆ ಸುಮ್ಮನಿರಲ್ಲ -ಪ್ರಧಾನಿ

635
Share

ಗಡಿ ತಂಟೆಗೆ ಬಂದರೆ ಸುಮ್ಮನಿರಲ್ಲ -ಪ್ರಧಾನಿ
ದೇಶದ ಗಡಿ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ ಗಡಿಯಲ್ಲಿ ಶಾಂತಿ ಇರಲೇಬೇಕು ಅದನ್ನು ಮನವರಿಕೆ ಮಾಡಿಕೊಡಲು ತಯಾರಿದ್ದೇವೆ. ಭಾರತ ಸುರಕ್ಷಿತವಾಗಿದೆ ಗಡಿ ಯೋಧರ ಧೈರ್ಯ ಸ್ಥೈರ್ಯದಿಂದ ಇದು ಸಾಧ್ಯವಾಗಿದೆ ಎಂದು ರಾಜಸ್ಥಾನದ ಗಡಿ ಅಂಚಿನ ಜೈಸಲ್ಮೇರ್ ಪ್ರದೇಶದಲ್ಲಿ ಸೈನಿಕರನ್ನುದ್ದೇಶಿಸಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಧರಿಗೆ ಧೈರ್ಯ ತುಂಬಿದ್ದಾರೆ.

ದೀಪಾವಳಿಯ ಶುಭ ಸಂದರ್ಭದಲ್ಲಿ ಪ್ರಧಾನಿಗಳು ಯೋಧರೊಂದಿಗೆ ಹಬ್ಬ ಆಚರಿಸಲು ಇಲ್ಲಿಗೆ ಇಂದು ಬೆಳಿಗ್ಗೆ ಆಗಮಿಸಿದರು . ಇಂದು ಇಡೀ ದಿನ ಸೈನಿಕರೊಂದಿಗೆ ಕಾಲಕಳೆಯಬೇಕೆಂದು ತೀರ್ಮಾನಿಸಿರುವ ಪ್ರಧಾನಿಗಳು ಅವರುಗಳ ಕುಶಲೋಪರಿ ವಿಚಾರಿಸಿದರು . ಅಶಿಸ್ತಿನ ದೇಶದ ಸೈನಿಕರರನ್ನು ಸೆದೆಬಡಿ ಯಲು ನಾವು ಸರ್ವದಾ ತಯಾರಿದ್ದೇವೆ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನ ಮಾಡುತ್ತೇವೆ. ನಮಗೆ ಸಾಮರ್ಥ್ಯವಿದೆ, ಜಯದ ವಿಶ್ವಾಸವಿದೆ ದೇಶದ ಗಡಿ ತಂಟೆಗೆ ಬಂದ್ರೆ ಸುಮ್ಮನಿರೋಲ್ಲ ಎಂದು ಏರುಧ್ವನಿಯಲ್ಲಿ ಪ್ರಧಾನಿಗಳು ರಾಜಸ್ಥಾನ ಈ ಗಡಿಯಲ್ಲಿ ಅಬ್ಬರಿಸಿದರು.
ಪಾಕ್ ಚೀನಾ ದೇಶಗಳಿಗೆ ನೇರ ಎಚ್ಚರಿಕೆ ನೀಡಿದ ಪ್ರಧಾನಿಗಳು ಭಾರತ ಸುರಕ್ಷಿತವಾಗಿದೆ ಆ ಶಕ್ತಿ ನಮ್ಮಲ್ಲಿದೆ. ಅವಶ್ಯಕತೆಯಿದ್ದರೆ ಭಾರತ ಏನೆಂದು ತೋರಿಸುತ್ತೇವೆ. ಭಾರತ ತಾಕತ್ತು ಏನೆಂದು ಮನವರಿಕೆ ಮಾಡಿ ಕೊಡುತ್ತೇವೆ. ಪಾಕ್ ಚೀನಾ ಜತೆಗಿನ ಹಿಂದಿನ ಯುದ್ಧ ನಮಗೆ ನೆನಪಿದೆ .ನಮ್ಮ ಎಲ್ಲಾ ಪೀಳಿಗೆಗೂ ನೆನಪಿದೆ. ನಮ್ಮ ಸೇನೆ ಏನು ಬೇಕಾದ್ರೂ ನಿರ್ಧಾರ ಮಾಡುವ ಸ್ವಾತ್ಯಂತ್ರ ನೀಡಲಾಗಿದೆ.
ತಮ್ಮ ಸರ್ಕಾರ ಸೇನೆಗೆ ಬೇಕಾದ ಅವಶ್ಯಕತೆ ಪೂರೈಸುತ್ತಿದೆ, ಸೇನೆಯನ್ನು ಇನ್ನಷ್ಟು ಬಲಗೊಳಿಸಲು ಅನೇಕ ಸಂಶೋಧನೆಗಳು ನಡೆಯುತ್ತಿವೆ ಎಂದು ನರೇಂದ್ರ ಮೋದಿ ತಿಳಿಸಿದರು .
ತಮ್ಮ ಸರಕರ ನೆರೆಯ ದೇಶಗಳೊಂದಿಗೆ ಸದಾ ಮಾತುಕತೆಗೆ ಸಿದ್ಧವಾಗಿದೆ .ಆದರೂ ಆ ದೇಶಗಳು ಗಡಿ ಯೊಳಗೆ ನುಸುಳಲು ಪ್ರಯತ್ನಿಸುತ್ತಿದೆ . ಪಾಕ್ ಉಗ್ರರ ಕ್ಯಾಂಪ್ ಗಳನ್ನು ಭಾರತ ಸರ್ವನಾಶ ಮಾಡುತ್ತಿದೆ ಎಂದು ನಿನ್ನೆ ನಡೆದ ಘಟನೆಗೆ ಪರೋಕ್ಷವಾಗಿ ಉತ್ತರಿಸಿದರು.
ಧೈರ್ಯ ಸ್ಥೈರ್ಯದಿಂದ ನೀವು ನನ್ನ ನೆಲವನ್ನು ರಕ್ಷಿಸುತ್ತಿದ್ದೀರಿ. ಭಾರತ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿದೆ ,ನಮ್ಮ ಶತ್ರುಗಳು ಯಾವುದೇ ಕಾರಣಕ್ಕೂ ಪರಿಸ್ಥಿತಿ ಲಾಭ ಪಡೆಯಬಾರದು .ವೈದ್ಯರು ಅವಿರತ ಶ್ರಮ ಪಡುತ್ತಿದ್ದಾರೆ ಕರೋನಾ ವಾರಿಯರ್ಸ್ ಡೆಡ್ಲಿ ವೈರಸ್ ನಾಶಕ್ಕೆ ದುಡಿಯುತ್ತಿದ್ದಾರೆ. ಗಡಿಯಲ್ಲಿ ನೀವು ಶತ್ರು ವೈರಸ್ ಗಳನ್ನು ನಾಶ ಮಾಡುತ್ತಿದ್ದೀರಾ .ಸೇನೆ ಮತ್ತು ಉಗ್ರರ ಕ್ಯಾಂಪ್ ಗಳನ್ನು ಭಾರತ ಸರ್ವನಾಶ ಮಾಡುತ್ತಿದೆ ಯಾವುದೇ ಸವಾಲು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಸೇನೆಗೆ ಆತ್ಮಸ್ಥೈರ್ಯ ತುಂಬಿದರು.
ದೇಶದ ಜನರ ಪರವಾಗಿ ನಿಮ್ಮನ್ನು ಅಭಿನಂದಿಸಲು ಇಲ್ಲಿಗೆ ಬಂದಿದ್ದೇನೆ. ಅವರುಗಳ ಶುಭಾಶಯಗಳನ್ನು ತಂದಿದ್ದೇನೆ ಎಂದು ಹಲವು ಸೈನಿಕರಿಗೆ ಸ್ವತಃ ಅವರೇ ಸಿಹಿ ತಿನ್ನಿಸಿ ಉಡುಗೊರೆಗಳನ್ನು ನೀಡಿದರು.


Share