ಎಂಪಿ ಅಡಿಗೆಮನೆ:?☘??ದೊಡ್ಡಪತ್ರೆ ತಂಬುಳಿ ?☘?? ದೊಡ್ಡಪತ್ರೆ ….

672
Share

ಪ್ರಭಾಕರ ಮೂರ್ತಿ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು

?☘??ದೊಡ್ಡಪತ್ರೆ ತಂಬುಳಿ ?☘??
ದೊಡ್ಡಪತ್ರೆ ….

ಹೆಸರಿಗೆ ತಕ್ಕಂತೆ ದೊಡ್ಡದಾಗಿ ದಪ್ಪವಾಗಿ ಇರುವ ಎಲೆ …. ಇದನ್ನು ಇನ್ನೂ ಬಹಳ ಹೆಸರಿನಿಂದ ಗುರುತಿಸಿರುತ್ತಾರೆ ….ಸಂಬರಬಳ್ಳಿ ; ಪತ್ಥರಚೂರು; ಕರ್ಪೂರವಳ್ಳಿ; ಮೆಕ್ಸಿಕನ್ ಪ್ಲಾಂಟ್ , ಓಮಪತ್ರ ಇನ್ನೂ ಹಲವಾರು. ಇದರ ಮೂಲ ಆಫ್ರಿಕಾ/ ಇಂಡಿಯ … ಉತ್ಕೃಷ್ಟವಾದ ಔಷದೀಯ ಗುಣವುಳ್ಳ ಸಸ್ಯ.. ಬಹಳ ಮೃದುವಾದ ಹೆಚ್ಚು ನೀರಿನ ಅಂಶ ಇರುವ ಎಲೆಗಳು. ವಿಟಮಿನ್ – ಕೆ’ ಹೊಂದಿರುವ ಸಸ್ಯ . ಪಿತ್ತದಿಂದ ಬಳಲುತ್ತಿದ್ದವರಿಗೆ ಮೈಮೇಲೆ ಗಂಧೆ ಆಗಿ , ತುರಿಕೆ ಆದವರಿಗೆ ಈ ಎಲೆಗಳು ರಾಮಬಾಣವಾಗುತ್ತದೆ . ಇದನ್ನು ಬೆಳೆಯುವುದೂ ಬಹಳ ಸುಲಭ.
ತಂಬುಳಿ ಮಾಡುವುದು ಹೇಗೆ: 2 ಟಿ ಚಮಚ ಜೀರಿಗೆ ಮತ್ತು 2 ಚಮಚ ಕಾಳು ಮೆಣಸು ಸ್ವಲ್ಪ ತುಪ್ಪದಲ್ಲಿ ಹುರಿದು ಪುಡಿ ಮಾಡಿ …. ಸುಮಾರು 200 ಗ್ರಾಂ ಎಲೆಗಳನ್ನು ಹಿಸುಕಿ ಸ್ವಲ್ಪ ತುಪ್ಪದಲ್ಲಿ , ನೀರಿನ ಅಂಶ ಇಂಗುವ ತನಕ ಹುರಿಯಿರಿ …. ತಣ್ಣಗಾದ ನಂತರ , ಸ್ವಲ್ಪ ತೆಂಗಿನ ತುರಿ ಮತ್ತು ಮೊಸರು ಸೇರಿಸಿ ನುಣ್ಣಗೆ ರುಬ್ಬಿ … ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ , ತುಪ್ಪದ ಒಗ್ಗರಣೆ ಕೊಡಿ…. ದೊಡ್ಡಪತ್ರೆ ತಂಬುಳಿ ರೆಡಿ …. ಅನ್ನದ ಜೊತೆ ತಿನ್ನಲು ಬಹಳ ರುಚಿ ; … ಮಾಡಿ :ತಿನ್ನಿ : ಅನುಭವ ಹಂಚಿಕೊಳ್ಳಿ.

ಔಷಧೀಯ ಮೌಲ್ಯ : ತುರಿಕೆ ( ಮೈ ಕೈ ಕಡಿತ ಆದವರಿಗೆ ಈ ಎಲ ಗಳಿಂದ ತಯಾರಿಸಿರುವ ತಂಬೂಳಿ ರಾಮಬಾಣವಾಗುತ್ತದೆ .


Share