ಎಂಪಿ ಅಡಿಗೆಮನೆ,???ತವಾ ನಾನ್ ??? (LOCK DOWN SPECIAL)

546
Share

???ತವಾ ನಾನ್ ???
(LOCK DOWN SPECIAL )
ನಾನ್ ಉತ್ತರ ಭಾರತ ಶೈಲಿಯ ಊಟದ ಒಂದು ರೀತಿಯ ರೊಟ್ಟಿ. ಈ ರೊಟ್ಟಿ ಬಹಳ ಪ್ರಚಲಿತವಾಗಿದ್ದು, ಇದನ್ನು ಮಾಡಲು ವಿಶೇಷವಾದ ತಂದೂರಿ ಒಲೆ ಅಗತ್ಯ. ಇದನ್ನು ಮನೆಯಲ್ಲೆ ತವಾದಲ್ಲಿ ಮಾಡಬಹುದಾದ ವಿಧಾನ ಹೀಗಿದೆ :

ಪಧಾರ್ತಗಳು .. ವಿಧಾನ : #ಮೈದಾ 1/2 kg + ಒಂದು ಚಮಚ ಬೇಕಿಂಗ್ ಸೋಡ + 1 ಕಪ್ ಮೊಸರು + 1 ಟೇಬಲ್ ಚಮಚ ಅಡುಗೆ ಎಣ್ಣೆ + ಋಚಿಗೆ ಉಪ್ಪು ಎಲ್ಲವನ್ನೂ ಮಿಕ್ಸ್ ಮಾಡಿ , ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳ್ಳಗೆ ಮುದ್ದೆಮಾಡಿ …

ಸುಮಾರು 3 ಗಂಟು ಕಾಲ ನೆನೆಯಲು

ಬಿಡಿ ….

ನೆನೆಯುವ ಸಮಯದಲ್ಲಿ ನೆಂಚಲು ಪಾಲಕ್ ಪನೀರ್/ ಮಟ್ಟರ್ ಪನ್ನೀರ್ /ವೆಜಿಟಬಲ್ ಕರ್ರಿ /ಚೋಲೆ ಯಾವುದಾದರೂ ಒಂದು ಐಟಂ ತಯಾರಿಸಿ ….

ಹಿಟ್ಟಿನ ಮುದ್ದೆಯನ್ನು ಚೆನ್ನಾಗಿ ನಾದಿ ದಪ್ಪ ದಪ್ಪ ಉಂಡೆ ಮಾಡಿ ಲಟ್ಟಿಸಿ ….

ಲಟ್ಟಿಸಿದ ಹಾಳೆಗಳು ಚಪಾತಿ /ಪೂರಿ ಹಾಳೆಗಿಂತ ಮಂದವಾಗಿರಲಿ…..

ಈ ಹಾಳೆಗೆ ಒಂದು ಮಗ್ಗಲಿಗೆ ನೀರು ಸವರಿ , ಆ ಭಾಗವು ಹ ೆಚ್ಚಾಗಿ ಬಿಸಿಯಾಗಿ ಕಾದ ತವಾ ಮೇಲೆ ಬೇಯಿಸಿ …..

ಯಾವುದೇ ಕಾರಣಕ್ಕೆ ಎಣ್ಣೆ ಸವರಬಾರದು …

ರೊಟ್ಟಿಯಮೇಲೆ ಗುಳ್ಳೆಗಳು ಹೊಮ್ಮಿದಾಗ, ತವಾವನ್ನು ತಲೆಕೆಳಗೆ ಮಾಡಿ , ಇನ್ನೊಂದು ಬದಿಯ ರೊಟ್ಟಿಯನ್ನು ಅಲ್ಲಲ್ಲೇ ಕಂದು ಬಣ್ಣ ಬರುವ ವರೆಗೆ ಸುಡಬೇಕು …..

ತವಾದಿಂದ ಹೊರ ತೆಗೆದು ಬೆಣ್ಣೆ ತುಪ್ಪ ಸವರಬೇಕು ….

ತಂಡೂರಿ ( ಅಲ್ಲ) ತವಾ ನಾನ್ ರೋಟಿ ರೆಡಿ

ಯಾವುದೇ ಖಾದ್ಯದೊಂದಿಗೆ ತಿನ್ನಿ … ಮಾಡಿ…..ತಿನ್ನಿ ..ಅನುಭವ ಹಂಚಿಕೊಲ್ಲಿ ?


Share