ಎಂಪಿ ಅಡಿಗೆಮನೆ ಶ್ಯಾವಿಗೆ ರವಾ ಇಡ್ಲಿ

701
Share

ಶ್ರೀ ಪ್ರಭಾಕರ ಮೂರ್ತಿ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು
*ಬಹಳ ಬೇಗ ಮಾಡಬಹುದಾದ ಇಡ್ಲಿ,ಬಹಲ ಋಚಿ ಕೂಡ ಹೌದು
*1:3 ಸಣ್ಣ ಬಾಂಬೆ ರವೆ ಮತ್ತು ಶ್ಯಾವಿಗೆ ಬೆಚ್ಚಗೆ ಹುರಿದು , ಗಟ್ಟಿ ಹುಳಿ ಮೊಸರಿನಲ್ಲಿ ನೆನೆಸಿ …ಸುಮಾರು ಒಂದು ಗಂಟೆ ನೆನೆಯಲಿ …ಸ್ವಲ್ಪ ಸಾಸವೆ, ಕಡಲೆಬೇಳೆ ,ಉದ್ದಿನಬೇಳೆ ಒಗ್ಗರಣೆ ಮಾಡಿ, ಮಿಶ್ರಣಕ್ಕೆ ಬೆರಸಿ…*ಸಣ್ಣದಾಗೆ ಹೆಚ್ಚಿದ ಹಸಿ ಮೆಣಸು,ಶುಂಟಿ,ತೆಂಗಿನ ಚೂರು ಹಾಕಿ … *ರುಚಿಗೆ ಉಪ್ಪು ಹಾಕಿ …ರವೇ,ಶ್ಯಾವಿಗೆ ಮೊಸರಿನಲ್ಲಿ ಉನಿದು , ಕಲಸಿದ ಮಿಶ್ರಣ ಮಂದವಾಗುತ್ತೆ…ತುಂಬಾ ಗಟ್ಟಿ ಆದರೆ ಸ್ವಲ್ಪ ಮಜ್ಜಿಗೆ/ನೀರು ಬೆರಸಿ..ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ , ಮಿಶ್ರಣ ಹಾಕಿ , ಇಡ್ಲಿ ಪಾತ್ರೆಯಲ್ಲಿ , ಹಬೆಯಲ್ಲಿ 15 ನಿಮಿಷ ಬೇಯಿಸಿ ….ಒಂದು ತೆಳುವಾದ ಚಾಕುವಿನಿಂದ ,ಇಡ್ಲಿಯನ್ನು ಚುಚ್ಚಿ , ಚಾಕು ಸಲೀಸಾಗಿ ನುಗ್ಗಿದಲ್ಲಿ, ಬೆಂದಿದೆ ಎಂಬ ಅರ್ಥ…ಮೃದುವಾದ ರುಚಿ ರುಚಿ ಶ್ಯಾವಿಗೆ ಇಡ್ಲಿ ರೆಡಿ…ತೆಂಗಿನ ಚಟ್ನಿ ಅಥವ ತರಕಾರಿ ಸಾಗು ಒಟ್ಟಿಗೆ ತಿನ್ನಿ ….ನಿಮ್ಮ ಅನುಭವ ಹಂಚಿಕೊಳ್ಲಿ


Share