ಎಂಪಿ ಅಡಿಗೆಮನೆ ; ?ಬಿಸಿ ಬಿಸಿ ಮೃದುವಾದ ಎರಿಯಪ್ಪ?

652
Share

?ಬಿಸಿ ಬಿಸಿ ಮೃದುವಾದ ಎರಿಯಪ್ಪ?

ದಸರಾಚರಣೆಯ 5ನೆ ದಿನ ಪಂಚಮಿ ವಿದ್ಯಾದೇವೀ ಸರಸ್ವತಿ ದೇವಿಯ ಆವಾಹನೆ. ನಾವು ಅಧ್ಯಯನ ಮಾಡುವ ಪುಸ್ತಕಗಳನ್ನು ಒಟ್ಟುಗೂಡಿಸಿ ಪೂಜಿಸುವುದು ಮತ್ತು ಹುಗ್ಗಿ ಹಾಗೂ ಎರಿಯಪ್ಪ ನೈವೇದ್ಯ ಮಾಡುವುದು ವಾಡಿಕೆ.
ಅದಲ್ಲದೆ ಯಾವಾಗ ಬೇಕಾದರೂ ಸುಲಭವಾಗಿ ಎರಿಯಪ್ಪ ಮಾಡಬಹುದು.
⤵️
ಹೀಗೆ ಮಾಡಿ : 1ಪಾವು ದೋಸೆ ಅಕ್ಕಿಯನ್ನು ಸುಮಾರು 3ಗಂಟೆ ಕಾಲ ನೆನೆಸಿ…3/4ಲೋಟ ಬೆಲ್ಲದಪುಡಿ 1/2ಲೋಟ ತೆಂಗಿನತುರಿ,4-5ಎಲಕ್ಕಿ ಸೇರಿಸಿ ನೆನೆಸಿದ ಅಕ್ಕಿಯೊಂದಿಗೆ ನುಣ್ಣಗೆ ರುಬ್ಬಿ ಸುಮಾರು 2-3ಗಂಟೆ ನೆನೆಯಲು ಅವಕಾಶ ಮಾಡಿ….ನಂತರ ಶುದ್ದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟನ್ನು ಸಣ್ಣ ಸೌಟಿನಿಂದ ನಿಧಾನವಾಗಿ ಇಳಿಸಿ….ಕುಣಿ ಕುಣಿಯುತ್ತ ಎರಿಯಪ್ಪ ದುಂಡಗೆ ಉಬ್ಬುತ್ತ ಕಂದು ಬಣ್ಣಕ್ಕೆ ತಿರುಗುತ್ತೆ…ಎರಡೂ ಕಡೆ ಕಂದು ಬಣ್ಣಕ್ಕೆ ಕರಿಯಿರಿ…ಈಚೆ ತೆಗೆದು 2ಹಲ್ಲೆಗಳ ಮದ್ಯೆ ಹಿಂಡಿ ಎಣ್ಣೆ ತೆಗೆಯಿರಿ….ಸ್ವಲ್ಪ ಆರಲು ಬಿಡಿ…ಬಿಸಿ ಬಿಸಿ ಮೃದುವಾದ ಎರಿಯಪ್ಪ ರೆಡಿ….ರುಚಿ ನೋಡಿ…ಕಾಮೆಂಟ್ ಸಲ್ಲಿಸಿ


Share