ಎಂಪಿ ಅಡಿಗೆಮನೆ: ??ಸಬ್ಬಸಿಗೆ ಕೋಡುಬಳೆ??

643
Share

??ಸಬ್ಬಸಿಗೆ ಕೋಡುಬಳೆ??
ಕೋಡುಬಳೆಗೆ ಸಾಮಾನ್ಯವಾಗಿ ಯಾವುದೆ ಸೊಪ್ಪು ಹಾಕುವುದಿಲ್ಲ.
ಇದೊಂದು ಪ್ರಯೋಗ…ಸಬ್ಸಿಗೆ ಸೊಪ್ಪು ಸ್ವಲ್ಪ ಗಟ್ಟಿಯಾಗಿರುವ ಕಾರಣ ಕೋಡುಬಳೆ ಮೆದುವಾಗುವುದಿಲ್ಲ…..ಸಬ್ಸಿಗೆ ಹಾಕೋಣ ..

ಮಾಡುವ ಕ್ರಮ ಹೇಗೆ….?
ಒಂದು ಕಂತೆ ?ಸಬ್ಬಸಿಗೆ ಸೊಪ್ಪು ಸಣ್ಣಗೆ ಹೆಚ್ಚಿ ತೆಗೆದಿಡಿ …?️?️10 ರಿಂದ 12 ಬ್ಯಾಡಗಿ+?️2ಗುಂಟೂರು ಬೆಚ್ಚಗೆ ಮಾಡಿ ಪುಡಿ ಮಾಡಿ…1/4ಹೋಳು? ತೆಂಗಿನತುರಿ ಸೇರಿಸಿ ರುಬ್ಬಿಕೊಳ್ಲಿ …1/2kg ಅಕ್ಕಿಹಿಟ್ಟು +200gm ಮೈದಾ+ಒಂದು ಹಿಡಿ ಹುರಿಗಡಲೆ ಹಿಟ್ಟು+ 1ಚಮಚ ಓಂ ಕಾಳು +ರುಚಿಗೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ….ಈ ಹಿಟ್ಟಿಗೆ 2ಟೇಬಲ್ ಚಮಚ ಡಾಲ್ಡ ಕಾಯಿಸಿ ಹಾಕಿ ಚೆನ್ನಾಗಿ ಮಿಕ್ಷ್ ಮಾಡಿ…ಹೆಚ್ಚಿದ ಸಬ್ಸಿಗೆ ಸೊಪ್ಪು ,ರುಬ್ಬಿದ ಕಾರ ಸೇರಿಸಿ ಕಲಸಿ…(ಹಿಟ್ಟನ್ನು ಹಿಡಿ ಮಾಡಿ ಬಿಟ್ಟರೆ ಒಡೆಯಬಾರದು)… ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ…ನಿಂಬೆ ಗಾತ್ರದ ಹಿಟ್ಟು ತೆಗೆದು ಒಂದು ತಟ್ಟೆಯ ಮೇಲೆ ಹೊರಳಿಸಿ ಕೋಡುಬಳೆ ಆಕಾರಕ್ಕೆ ಸುತ್ತಿ ಕಾದ ಎಣ್ಣೆಯಲ್ಲಿ ಬಿಡಿ… ಮಂದ ಉರಿಯಲ್ಲಿ ಕೆಂಪಗೆ ಕರಿಯಿರಿ…
?ಕೋಡುಬಳೆ ರೆಡಿ?.
ವಿ ಸೂ: ಸ್ವಲ್ಪ ಆರಿದ ನಂತರ ತಿಂದರೆ ಗರಿ..ಗರಿ..ರುಚಿ..ರುಚಿ
ಮಾಡಿ …ತಿನ್ನಿ.. ರುಚಿ ಅನುಭವಿಸಿ

ಶ್ರೀಯುತ , ಪ್ರಭಾಕರ ಮೂರ್ತಿ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು


Share