ಎಂಪಿ ಅಡಿಗೆ, ಮಂದಿರ:ದೇವಸ್ಥಾನ (ಅಯ್ಯಂಗಾರ್ ) ಪ್ರಸಾದದ ಪೊಂಗಲ್.

953
Share

?ದೇವಸ್ಥಾನ (ಅಯ್ಯಂಗಾರ್ ) ಪ್ರಸಾದ ಪೊಂಗಲ್ ?️

ಈ ಸಿಹಿ ಪೊಂಗಲ್ ವಿಶೇಷ… ಸಾಮಾನ್ಯವಾಗಿ ವೈಷ್ಣವರ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಲಭ್ಯ . ತಿರುಮಲೈ ತಿಮ್ಮಪ್ಪನ ಪ್ರಾಕಾರ ಸೇವಾ ಸಂದರ್ಭದಲ್ಲಿ ಈ ವಿಶೇಷ ಪೊಂಗಲಿನ ಘಮ ಅಘ್ರಾಣಿಸಬಹುದು.

ತಯಾರಿಸುವ ವಿಧಾನ : ಒಂದು ಬಟ್ಟಲು ಬೆಚ್ಚಗೆ ಮಾಡಿದ ಹೆಸರುಬೇಳೆ , ಎರಡು ಬಟ್ಟಲು ದೋಸೆ ಅಕ್ಕಿ 7 ಬಟ್ಟಲು ನೀರು ಮತ್ತು 1 ಬಟ್ಟಲು ಹಾಲು ಒಟ್ಟು ಮಾಡಿ ಮೆತ್ತಗೆ ಬೇಯಿಸಿ..

4 ಪುಡಿ ಮಾಡಿದ ಏಲಕ್ಕಿ , ೪ ಲವಂಗ ಹಾಕಿ ಮತ್ತು ಗೋಡಂಬಿ , ಬಾದಾಮಿ ದ್ರಾಕ್ಷಿಯ ತುಪ್ಪದ ಒಗ್ಗರಣೆ ಕೊಡಿ….

{ಘಮ..ಘಮ.. ಬಿಸಿ ..ಬಿಸಿ ..ರುಚಿ ..ರುಚಿ … ದೇವಸ್ಥಾನ ಪೊಂಗಲ್ } ರೆಡಿ
?ತಯಾರಿಸಿ … ದೇವರಿಗೆ ನಿವೇದಿಸಿ…ರುಚಿ ನೋಡಿ…ಅನುಭವ ಹಂಚಿಕೊಳ್ಳಿ

ಇದಕ್ಕೆ ೨ ಬಟ್ಟಲು ಬೆಲ್ಲ , ಅರ್ಧ ಬಟ್ಟಲು ಕೊಬರಿ/ತೆಂಗಿನ ಕಾಯಿ ತುರಿ (ಐಚ್ಛಿಕ) , 5 ಚಮಚ ತುಪ್ಪ/ಬೆಣ್ಣೆ ಸೇರಿಸಿ ಎರಡು ಕುದಿ ಕುದಿಸಿ …

ಶ್ರೀ ಪ್ರಭಾಕರ.

ನಿವೃತ್ತ ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಬ್ಯಾಂಕ್ ಮೈಸೂರು


Share