ಎಂಪಿ ಫೋಕಸ್: ಬುಡಕಟ್ಟು ಸಂಸ್ಕøತಿ ರಕ್ಷಿಸಿ : ಪ್ರೊ.ಎಂ.ಆರ್.ಗಂಗಾಧರ

582
Share

ಬುಡಕಟ್ಟು ಸಂಸ್ಕøತಿ ರಕ್ಷಿಸಿ : ಪ್ರೊ.ಎಂ.ಆರ್.ಗಂಗಾಧರ

ಚಿತ್ರ ಸಾಂದರ್ಭಿಕ

ಮೈಸೂರು): ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿದ್ದು, ಅವರು ತಮ್ಮದೇ ಆದ ರೀತಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದು, ಬುಡಕಟ್ಟು ಜನರ ಸಂಸ್ಕøತಿಯನ್ನು ರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಆರ್.ಗಂಗಾಧರ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಸೋಮವಾರದಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಮತ್ತು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ನಡೆದ ರಾಜ್‍ಗೊಂಡ್ ಬುಡಕಟ್ಟು ಸಮುದಾಯದಲ್ಲಿ ಪಾರಂಪರಿಕ ಗಿಡಮೂಲಿಕೆ ಔಷಧಿ ಜ್ಞಾನ ಪದ್ಧತಿಯ ಸಂಶೋಧನಾ ಅಧ್ಯಯನ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬುಡಕಟ್ಟು ಜನರು ವಲಸೆ ಹೋಗುತ್ತಿರುವ ಪರಿಣಾಮ ಅವರ ಸಂಸ್ಕøತಿ, ಪದ್ಧತಿ, ಆಚಾರ-ವಿಚಾರಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿವೆ. ಅದರಂತೆ ಪಾರಂಪರಿಕ ಗಿಡಮೂಲಿಕೆ ಔಷಧಿಯಿಂದ ತುಂಬಾ ಉಪಯೋಗ ಇದ್ದು, ಆದರೆ ವೈಜ್ಞಾನಿಕವಾಗಿ ಇಲ್ಲದ ಕಾರಣ ವಿಫಲವಾಗುತ್ತಿದೆ ಎಂದರು.

ಬುಡಕಟ್ಟು ಸಮುದಾಯದಲ್ಲಿ ಕೇವಲ ಬೆರಳಣಿಕೆಯಷ್ಟು ಮಂದಿ ಮಾತ್ರ ವಿದ್ಯಾಭ್ಯಾಸ ಪಡೆದಿದ್ದಾರೆ. ಆದರೆ ಇವರಿಗೂ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಆದ್ದರಿಂದ ನಿಮ್ಮ ಮಕ್ಕಳಿಗೆ ಉನ್ನತ ಮಟ್ಟದ ವಿದ್ಯೆ ಕಲಿಸಲು ಮುಂದಾಗಿ ಎಂದು ನೆರೆದಿದ್ದ ಬುಡಕಟ್ಟು ಜನರಿಗೆ ತಿಳಿಸಿದರು.

ಈ ಸಮುದಾಯದ ಯುವಕರಿಗೆ ಮಾತೃಭಾಷೆಯೇ ಪ್ರಮುಖ ಸಾಧನವಾಗಿದ್ದು, ಇತರೆ ಭಾಷೆಗಳ ಜ್ಞಾನವಿಲ.್ಲ ಇದರಿಂದ ಮಾತೃಭಾಷೆ ಜೊತೆ, ಬೇರೆ ಭಾಷೆಗಳ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಡೆಲ್ಲಾ ನಾಶವಾಗುತ್ತಿರುವ ಸಂದರ್ಭದಲ್ಲಿ ಎಷ್ಟೋ ಸಂತತಿ ನಾಶವಾಗುತ್ತಿದೆ. ರಾಜ್ಯ ಸರ್ಕಾರವು ಇವರಿಗೆ ಕನಿಷ್ಠ 5 ಎಕರೆ ಭೂಮಿಯನ್ನು ಕೊಡಬೇಕು ಅದರಲ್ಲಿ ನಶಿಸಿಹೋಗುತ್ತಿರುವ ಗಿಡಮೂಲಿಕೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪ್ರೊ.ಟಿ.ಟಿ.ಬಸವನಗೌಡ ಅವರು, ಕೇಂದ್ರ ಸರ್ಕಾರದ ವೋಕಲ್ ಫಾರ್ ಲೋಕಲ್ ಎಂಬ ಕಲ್ಪನೆಯ ಪ್ರಕಾರ ಬುಡಕಟ್ಟು ಸಮುದಾಯದ ಪಾರಂಪರಿಕ ನಾಟಿ ಔಷದ ಪದ್ಧತಿಯನ್ನ ಪರಿಚಯ ಮಾಡಿಕೊಡುವ ಉದ್ದೇಶವೆ ನಮ್ಮ ಸಂಶೋಧನೆಯ ಮೂಲ ಉದ್ದೇಶವಾಗಿದ್ದು, ಇದಕ್ಕಾಗಿ 3 ದಿನಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಲ್ಲಿ ಬೀದರ್ ಜಿಲ್ಲೆಯ 6 ಜನ ಪರಿಣಿತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಪ್ರತಿಯೊಬ್ಬರು ತಮ್ಮದೆ ಆದ ವಿಶಿಷ್ಟ ಪಾರಂಪರಿಕ ಜ್ಞಾನವನ್ನು ಪಡೆದುಕೊಂಡಿದ್ದಾರೆ. ವಿಶಿಷ್ಟವಾಗಿರುವ ಈ ಔಷಧಿಯನ್ನು ತಯಾರಿಸುವುದು ಹೇಗೆ, ಯಾವ ಕಾಯಿಲಿಗೆ ನೀಡಬೇಕು ಎಂದು ವಿಸೃತವಾಗಿ ತಿಳಿದುಕೊಳ್ಳುವ ಸಲುವಾಗಿ 3 ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ರಾಜ್‍ಗೊಂಡ್ ಬುಡಕಟ್ಟು ಸಮುದಾಯದವರು ಬೀದರ್, ಬೆಂಗಳೂರು ಜಿಲ್ಲೆ ಮತ್ತು ದಾವಣಗೆರೆ ಕೇವಲ 5000 ಸಮುದಾಯವಷ್ಟೆ ವಾಸವಿದ್ದು, ಹಾಗಾಗಿ ಇವರನ್ನು ಕರೆಸಿ ಇವರಲ್ಲಿರುವ ಪಾರಂಪರಿಕವಾದ ನಾಟಿ ಔಷಧ ಪದ್ಧತಿಯನ್ನು ಅಧ್ಯಯನ ಮಾಡಿ ಕಾರ್ಯಾಗಾರದಲ್ಲಿ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿವಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್‍ಗೊಂಡ್ ಬುಡಕಟ್ಟು ಸಮುದಾಯದ ಮುಖಂಡರಾದ ರತನ್ ಮಹಾರಾಜ್ ಅವರು, ಈಗ ರಾಜ್‍ಗೊಂಡ್ ಆದಿವಾಸಿ ಸಮುದಾಯವನ್ನು ಹುಡುಕಿ ಸಂಶೋಧನೆ ನಡೆಸಬೇಕು ಎಂದಿದ್ದಾರೆ, ಆದರೆ ಇಂದು ಆ ಸಮುದಾಯ ಎಲ್ಲಿದೆ? ಈ ಸಮುದಾಯ ಇಂದು ಸಮಾಜದಿಂದ ಬೇರ್ಪಟ್ಟಿದ್ದೇವೆ. ತಮ್ಮ ಸಮುದಾಯ ನಶಿಸಿಹೋಗುತ್ತಿದೆ ಇಂಥ ಸಂದರ್ಭದಲ್ಲಿ ನಮ್ಮ ಸಮಾಜವನ್ನು ಗುರುತಿಸಿ ನಮ್ಮ ಕಸುಬಾದ ಗಿಡಮೂಲಿಕೆ ಪದ್ದತಿ ಕುರಿತು ಕಾರ್ಯಗಾರ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುವುದುದಕ್ಕೆ ಕಾರ್ಯಾಗಾರ ಮಾಡಿರುವುದಕ್ಕಾಗಿ ಶ್ಲಾಘನಿಯ ಎಂದು ತಿಳಿಸಿರು.


Share