ಏಪ್ರಿಲ್ 2ರಿಂದ ಯುಗಾದಿ ಸಂಗೀತೋತ್ಸವ

133
Share

ಏಪ್ರಿಲ್ 2ರಿಂದ ಯುಗಾದಿ ಸಂಗೀತೋತ್ಸವ
ಮೈಸೂರು. :- ಮೈಸೂರು ಅರಮನೆ ಮಂಡಳಿ ವತಿಯಿಂದ ಯುಗಾದಿ ಸಂಗೀತೋತ್ಸವ ಶುಭಕೃತು ನಾಮ ಸಂವತ್ಸರ-2022 ಕಾರ್ಯಕ್ರಮದ ಉದ್ಘಾಟನೆಯನ್ನು 2022ರ ಏಪ್ರಿಲ್ 2ರ ಶನಿವಾರ ಸಂಜೆ 5:30ಕ್ಕೆ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದು, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣರಾಜ ಕ್ಷೇತ್ರದ ಎಸ್.ಎ ರಾಮದಾಸ್ ಅವರು ವಹಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಸುನಂದ ಪಾಲನೇತ್ರ, ಸಂಸದರಾದ ಪ್ರತಾಪ್ ಸಿಂಹ, ವಿ.ಶ್ರೀನಿವಾಸ್ ಪ್ರಸಾದ್, ಸುಮಲತಾ ಅಂಬರೀಶ್ ಹಾಗೂ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತಿತರಿರುವರು.
ವಿಶೇಷ ಆಹ್ವಾನಿತರಾಗಿ ಮೈಸೂರು ಅರಮನೆ ಮಂಡಳಿಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರಾದ ಪಿ. ರವಿಕುಮಾರ್ ಅವರು ಉಪಸ್ಥಿತಿತರಿರುವರು.
2022ರ ಏಪ್ರಿಲ್ 2ರ ಶನಿವಾರ ಸಂಜೆ 5.30ಕ್ಕೆ ಯದುಕುಮಾರ್ ಮತ್ತು ತಂಡದವರಿAದ ಮಂಗಳವಾದ್ಯ ಮತ್ತು ಸ್ಯಾಕ್ಸೋಫೋನ್ ವಾದನ, ಸಂಜೆ 6ರಿಂದ 6.30ರವರೆಗೆ ಪಂಚಾAಗ ಶ್ರವಣ, ಸಂಜೆ 6.30 ರಿಂದ 7.30ರವರೆಗೆ ಯುಗಾದಿ ಸಂಗೀತೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ, ಸಂಜೆ 7.30ರಿಂದ 9.30ರವರೆಗೆ ಖ್ಯಾತ ಜಾನಪದ ಗಾಯಕಿ ಅನನ್ಯ ಭಟ್ ಮತ್ತು ತಂಡದವರಿAದ ಜಾನಪದ ಗಾಯನ.
ಏಪ್ರಿಲ್ 3ರ ಭಾನುವಾರ ಸಂಜೆ 6ರಿಂದ 7ರವರೆಗೆ ಪೊಲೀಸ್ ಬ್ಯಾಂಡ್, ಸಂಜೆ 7ರಿಂದ 9ರವರೆಗೆ ಅಂತರಾಷ್ರಿö್ಟÃಯ ಖ್ಯಾತ ವಯೋಲಿನ್ ಕಲಾವಿದರಾದ ಡಾ. ಮೈಸೂರು ಮಂಜುನಾಥ್ ಅವರಿಂದ ಪಿಟೀಲು ವಾದನ ಹಾಗೂ ಅಂತರಾಷ್ರಿö್ಟÃಯ ಖ್ಯಾತ ಕೊಳಲು ವಾದನ ಕಲಾವಿದರಾದ ಪಂಡಿತ್ ಪ್ರವೀಣ್‌ಗೋಡ್ಖಿಂಡಿ ಅವರಿಂದ ಕೊಳಲು ವಾದನದಂದಿಗೆ “ಗ್ರಾö್ಯಂಡ್ ಜುಗಲ್‌ಬಂಧಿ ಸಂಗೀತ ಸಂಭ್ರಮ”.
ಏಪ್ರಿಲ್ 4ರ ಸೋಮವಾರ ಸಂಜೆ 6ರಿಂದ 7ರವರೆಗೆ ಡಾ.ಎಸ್.ವಿ. ಸಹನಾ ಅವರಿಂದ ವೀಣಾವಾದನ, ಸಂಜೆ 7ರಿಂದ 9ರವರೆಗೆ ವಿದ್ವಾನ್ ಹೆಚ್.ಎಲ್.ಶಿವಶಂಕರ್‌ಸ್ವಾಮಿ ಮತ್ತು ತಂಡದವರಿAದ ಲಯಲಹರಿ ಕಾರ್ಯಕ್ರಮ ನಡೆಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ


Share