ಏಷಿಯನ್ ಗೇಮ್ಸ್ : ಭಾರತಕ್ಕೆ 107 ಪದಕ

78
Share

ಚೀನಾದ ಹಾಂಗ್ ಝೌ ನಲ್ಲಿ ನಡೆದ 19 ನೇ ಏಶಿಯನ್ ಗೇಮ್ಸ್ ನೆನ್ನೆಗೆ ಮುಕ್ತಾಯವಾಗಿದೆ. ಸಂತೋಷದ ವಿಷಯವೆಂದರೆ ಈ ಬಾರಿ ಭಾರತಕ್ಕೆ ಚಿನ್ನ, ಬೆಳ್ಳಿ ಹಾಗೂ ಕಂಚು ಎಲ್ಲಾ ಸೇರಿ ಒಟ್ಟು 107 ಪದಕಗಳು ಲಭುಸಿದೆ.
ಯಾವ ಪದಕಗಳು ಎಷ್ಟು ಅನ್ನುವ ವಿವರ ಕೆಳಗಿನಂತಿದೆ :
ಚಿನ್ನ – 28
ಬೆಳ್ಳಿ – 38
ಕಂಚು – 41
ಕಳೆದ ಬಾರಿ ಅಂದರೆ 2018ರಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ನಲ್ಲಿ ಒಟ್ಟು 70 ಪದಕ ಗಳಿಸಿತ್ತು
ಈ ಬಾರಿ ಕರ್ನಾಟಕ ರಾಜ್ಯಕ್ಕೆ ಒಟ್ಟು ಐದು ಪದಕಗಳು ಲಭ್ಯವಾಗಿದೆ.
ವಿವರ ಈ ರೀತಿ ಇದೆ :
ರಾಜೇಶ್ವರಿ ಗಾಯಕ್ವಾಡ್ ಮಹಿಳಾ ಕ್ರಿಕೆಟ್ ನಲ್ಲಿ ಚಿನ್ನ ಗೆದ್ದಿದ್ದಾರೆ.
ರೋಹನ್ ಬೋಪ್ಪಣ್ಣ ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಚಿನ್ನ ಪದಕ ಪಡೆದಿದ್ದಾರೆ
ದಿವ್ಯ ಟಿಎಸ್ 10 ಮೀಟರ್ ಏರ್ ಪಿಸ್ತೂಲ್ ಮಹಿಳಾತಂಡದಿಂದ ಬೆಳ್ಳಿ ಪದಕ ಗಳಿಸಿದ್ದಾರೆ.
ಅದಿತಿ ಅಶೋಕ್ ಗಾಲ್ಫ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಿಥುನ್ ಮಂಜುನಾಥ್ ಪುರುಷರ ಬ್ಯಾಡ್ಮಿಂಟನ್ ತಂಡದ ಆಟಗಾರ ಬೆಳ್ಳಿ ಪದಕ
ಪದಕವನ್ನು ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಸೆಪ್ಟೆಂಬರ್ ಅಕ್ಟೋಬರ್ 2026 ರರಲ್ಲಿ 20ನೇ ಏಷ್ಯನ್ ಗೇಮ್ಸ್ ಜಪಾನ್ ನಲ್ಲಿ ನಡೆಯಲಿದೆ.
19ನೇ ಏಶಿಯನ್ ಒಲಂಪಿಕ್ ಸಮಿತಿಯ ಅಧ್ಯಕ್ಷರಾದ ಶ್ರೀ ರಣಧೀರ್ ಸಿಂಗ್ ರವರಿಂದ ಕ್ರೀಡಾಕೂಟದ ಧ್ವಜವನ್ನು ಜಪಾನ್ ಗೆ ನೀಡಲಾಯಿತು.

Share