ಕಾಲೇಜಿಗೆ ಹೋಗದೆ, ಪರೀಕ್ಷೆ ಬರೆಯದೆ ಅಂಕಪಟ್ಟಿ ತಯಾರು

271
Share

ನಕಲಿ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯನ್ನು ತಯಾರಿಸುತ್ತಿದ್ದ ಜಾಲವನ್ನು ಬೆಂಗಳೂರಿನ ಜಯನಗರ ಪೋಲೀಸರು ಭೇದಿಸಿದ್ದಾರೆ.
ಬೆಂಗಳೂರಿನ ಸಿಗ್ನಲ್ ಬಳಿ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳನ್ನು ನಿಲ್ಲಿಸಿ ಪರೀಕ್ಷಗೆ ಹೋಗದೆ, ಕಾಲೇಜಿಗೂ ಹೋಗದೆ ರೂ 20 ರಿಂದ 40 ಸಾವಿರಕ್ಕೆ ಮಾಡಿಕೊಡುವುದಾಗಿ ಪುಸಲಾಯಿಸುತ್ತಿದ್ದದ್ದು ಬೆಳಕಿಗೆ ಬಂದಿದೆ.
ತತ್ಸಂಬಂದವಾಗಿ ಪೋಲೀಸರು ‘ ಜೆ . ರಘು ( 34 ) , ಜಿ . ಧರ್ಮಕುಮಾರ್ ( 39 ) , ಜೆ . ದೀಪಕ್ ( 32 ) ಹಾಗೂ ಸಿ . ನರೇಶ್ ರೆಡ್ಡಿ ( 37 ) ಬಂಧಿಸಿದ್ದಾರೆ. ಇವರಿಂದ 200 ನಕಲಿ ಅಂಕಪಟ್ಟಿಗಳು ಹಾಗೂ * 4.60 ಲಕ್ಷ ನಗದು ಜಪ್ತಿ ಮಾಡಲಾಗಿದೆ ‘ ಎಂದು ಪೊಲೀಸರು ಹೇಳಿದರು .
‘ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ , ಕುವೆಂಪು ವಿಶ್ವವಿದ್ಯಾಲಯ , ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸ್ , ಡಾ . ಸಿ.ವಿ.ರಾಮನ್ ವಿಶ್ವವಿದ್ಯಾಲಯ , ರವೀಂದ್ರನಾಥ್ ಠಾಗೂರ್ ವಿಶ್ವವಿದ್ಯಾಲಯದ ಎಲ್ಲ ಕೋರ್ಸ್‌ಗಳ ಅಂಕಪಟ್ಟಿಗಳು ಆರೋಪಿಗಳ ಬಳಿ ಸಿಕ್ಕಿವೆ . ಇವುಗಳನ್ನು ಬಳಸಿ ಕೆಲ ಅಭ್ಯರ್ಥಿಗಳು , ಕೆಲಸ ಗಿಟ್ಟಿಸಿಕೊಂಡಿರುವುದು ಗೊತ್ತಾಗಿದೆ ‘ ಎಂದು ತಿಳಿದುಬಂದಿದೆ .

Share