ಯೂ ಟ್ಯೂಬ್ ಚಾನಲ್ ಸಬ್‌ ಸಬ್ಸ್ಕ್ರೈಬ್ ಮಾಡುವ ನೆಪದಲ್ಲಿ ಹಲ್ಲೆ ನಡೆಸಿದ್ದ ಆರೋಪಿಗಳ ಪತ್ತೆಗೆ ತಂಡ ರಚನೆ

180
Share

,

ಮೈಸೂರು-ಯೂ ಟ್ಯೂಬ್ ಚಾನೊ್ ಸಬ್‌ಸೈಬ್ ಮಾಡುವ ನೆಪದಲ್ಲಿ ಹಲ್ಲೆ ನಡೆಸಿದ್ದ ಆರೋಪಿಗಳ ಪತ್ತೆಗೆ ಪೊಲೀಸ್ ಆಯುಕ್ತರಿಂದ ವಿಶೇಷ ತಂಡಗಳ ರಚನೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ಹಳ್ಳಕೆರೆ ಹುಂಡಿ ಗ್ರಾಮದ ಲಕ್ಷ್ಮೀ ನಾರಾಯಣ ಎಂಬುವವರು ಪ್ರಧಾನ ಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಯವರಿಗೋಸ್ಕರ ಜೈ ಹೋ ಮೋದಿ ಎಂಬ ಶೀರ್ಷಿಕೆ ಇರುವ ಹಾಡನ್ನು ರಚನೆ ಮಾಡಿ ತಮ್ಮ ಆರ್.ಆರ್. ಫಿಲಂ ಯೂ ಟ್ಯೂಬ್ ಚಾನಲ್ ಗೆ ಅಪ್‌ಲೋಡ್ ಮಾಡಿದ್ದು, ದಿನಾಂಕ: 19/04/2024 ರಂದು ಮೈಸೂರಿನ ಗೌರ್ನಮೆಂಟ್ ಗೆಸ್ಟ್ ಹೌಸ್ ಪಾರ್ಕ್ ಬಳಿ ಇರುವ ಒಂದು ಬಿಲ್ಡಿಂಗ್ ಬಳಿ ಬಂದಂತಹ ಒಬ್ಬ ಹುಡುಗನಿಗೆ ಲಕ್ಷ್ಮೀ ನಾರಾಯಣ ರವರು ಕರೆದು, ಶ್ರೀ ನರೇಂದ್ರ ಮೋದಿಯವರ ಬಗ್ಗೆ ಮಾಡಿರುವ ಹಾಡನ್ನು ನೋಡಿ. ಯೂ ಟ್ಯೂಬ್ ಚಾನಲ್ ಸಬ್‌ ಸ್ಕ್ರೈಬ್  ಮಾಡಿ, ಷೇರ್ ಮಾಡುವಂತೆ ಕೋರಿಕೊಂಡಿದ್ದು, ಆ ಹುಡುಗ ಒಪ್ಪಿಕೊಂಡು ತನ್ನ ಸ್ನೇಹಿತರಿಗೂ ತೋರಿಸಿ ಸಬ್‌ಸ್ಕ್ರೈಬ್ ಮಾಡಿಸಿ ಷೇರ್ ಮಾಡಿಸುತ್ತೇನೆ ಎಂದು ಹೇಳಿ ಸ್ವಲ್ಪ ದೂರ ಕರೆದುಕೊಂಡು ಹೋಗಿದ್ದು, ಅಲ್ಲಿದ್ದ 04 ಜನ ಹುಡುಗರು ಸೇರಿದಂತೆ ಐದು ಜನರು ಸೇರಿ ಲಕ್ಷ್ಮೀ ನಾರಾಯಣ ರವರಿಗೆ ಬಾಯಿ ಮುಚ್ಚಿ ಕೈಗಳಿಂದ ಹೊಡೆದು, ಬಿಯರ್ ಬಾಟಲಿಯಿಂದ ಕೈಗಳನ್ನು ಕುಯ್ದು. ಸಿಗರೇಟ್‌ನಿಂದ ಸುಟ್ಟಿದ್ದು ಲಕ್ಷ್ಮೀ ನಾರಾಯಣರವರು ಇವರಿಂದ ತಪ್ಪಿಸಿಕೊಂಡು ಬಂದು ನಜರ್‌ಬಾದ್  ಪೋಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಮೇಲ್ಕಂಡ ಪ್ರಕರಣದ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ತನಿಖೆ ಕೈಗೊಳ್ಳಲಾಗಿದೆ. ಈ ಪ್ರಕರಣದ ಆರೋಪಿಗಳ ಪತ್ತೆ ಸಂಬಂಧ ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಶ್ರೀ. ರಮೇಶ್.ಬಿ ಐ.ಪಿ.ಎಸ್ ರವರ ನಿರ್ದೇಶನದಂತೆ ಶ್ರೀ. ಮುತ್ತುರಾಜ್, ಐ.ಪಿ.ಎಸ್. ಡಿ.ಸಿ.ಪಿ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಎಸ್. ಜಾಹ್ನವಿ. ಡಿ.ಸಿ.ಪಿ. ಕೇಂದ್ರಸ್ಥಾನ. ಅಪರಾಧ ಮತ್ತು ಸಂಚಾರ ರವರುಗಳ ನೇತೃತ್ವದಲ್ಲಿ ನಗರದ ಎ.ಸಿ.ಪಿ.ರವರುಗಳು ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ರವರುಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ಒಟ್ಟು 06 ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ಸದರಿ ತಂಡಗಳು ಆರೋಪಿಗಳ ಪತ್ತೆಗಾಗಿ ಕಾರ್ಯ ಪ್ರವೃತ್ತರಾಗಿರುತ್ತಾರೆ ಎಂದು ಪೊಲೀಸ್ ಆಯುಕ್ತರವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ

 


Share