ಕೃಷ್ಣರಾಜ ಕ್ಷೇತ್ರದ ಅರ್ಹ 9 ಫಲಾನುಭವಿಗಳಿಗೆ ಶಾಸಕ ರಾಮದಾಸ್ ರವರಿಂದ ವಾಹನ ವಿತರಣೆ

168
Share

 

ಕೃಷ್ಣರಾಜ ಕ್ಷೇತ್ರದ ಅರ್ಹ 9 ಫಲಾನುಭವಿಗಳಿಗೆ ಶಾಸಕ ರಾಮದಾಸ್ ರವರಿಂದ ವಾಹನ ವಿತರಣೆ

ಮೈಸೂರು: ಮಾನ್ಯ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎ.ರಾಮದಾಸ್ ರವರ ನೇತೃತ್ವದಲ್ಲಿ ಒಂಭತ್ತು ಮಂದಿ ವಿಶೇಷಚೇತನರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು.
ಶಾಸಕರ ವಿದ್ಯಾರಣ್ಯಪುರಂ ಎದುರು ನಡೆದ ಸರಳ ಸಮಾರಂಭದಲ್ಲಿ ವಿಶೇಷಚೇತನರಿಗೆ ವಾಹನದ ಕೀ ವಿತರಿಸಿ ಮಾತನಾಡಿದ
ಶಾಸಕರಾದ ಎಸ್.ಎ.ರಾಮದಾಸ್ ರವರು, ಕಳೆದ ತಿಂಗಳ ಮೋದಿ ಯುಗೋತ್ಸವದಂದು ವಿವಿಧ ಇಲಾಖೆಗಳ ಯೋಜನೆಯಡಿ ಸಾರ್ವಜನಿಕರಿಗೆ ವೈಯಕ್ತಿಕವಾಗಿ ಯೋಜನೆ ತಲುಪಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ತಮಗೆಲ್ಲ ತಿಳಿದಿರುವ ವಿಷಯವಾಗಿದೆ.
ಸೆ. 25ರಂದು ಮಾನ್ಯ ಮುಖ್ಯಮಂತ್ರಿಗಳು ಮೋದಿ ಯುಗೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆಗೆ ಬರುವ ಮುನ್ನ ಉದ್ಯಾನವನದ ಹೊರಗೆ ಸಾಂಕೇತಿಕವಾಗಿ ಫಲಾನುಭವಿಗಳಿಗೆ ನೀಡಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಇಂದು ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2021-22ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ಅರ್ಹ ತೀವ್ರತರವಾದ ದೈಹಿಕ ವಿಕಲಚೇತನರ ಬಳಕೆಗೆ ಅನುಕೂಲವಾಗುವಂತೆ ಎರಡು ಹೆಚ್ಚುವರಿ ಚಕ್ರಗಳ ರೆಕ್ರೂಟ್ಮೆಂಟ್ ಜೋಡಣೆಯ ಕೊಟ್ಟು 9 ಯಂತ್ರಚಾಲಿತ-ದ್ವಿಚಕ್ರವಾಹನ ಗಳನ್ನು ರೂ 7.46 ಲಕ್ಷಗಳಿಗೆ ಖರೀದಿಸಿ ಕೃಷ್ಣರಾಜ ಕ್ಷೇತ್ರದ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 9 ಅರ್ಹ ಫಲಾನುಭವಿಗಳಿಗೆ.
ಮುಂದಿನ ದಿನಗಳಲ್ಲಿ ಇ-ವೆಹಿಕಲ್ ಗೆ ಹೆಚ್ಚಿನ ಪ್ರಚಾರ ಮಾಡುವ ನಿಟ್ಟಿನಲ್ಲಿ ಈಗಾಗಲೇ ಪೌರ ಕಾರ್ಮಿಕರಿಗೆ ಎಲೆಕ್ರಿಕ್ ವೆಹಿಕಲ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಬೀದಿಬದಿ ತಳ್ಳುಗಾಡಿಯನ್ನು ಬ್ಯಾಟರಿ ಚಾಲಿತ ವಾಹನಗಳನ್ನು ವಿತರಿಸುವ ಯೋಜನೆಯಿದೆ. ಇದರಿಂದ ಪ್ರತೀ ದಿನ ತಳ್ಳುವ ಗಡಿಯನ್ನು ಬಾಡಿಗೆಗೆ ತಂದು ವ್ಯಾಪಾರ ಮಾಡುವವರನ್ನು ಗುರುತು ಮಾಡಲಾಗಿದ್ದು ಆದಷ್ಟು ಬೇಗ ಯೋಜನೆ ರೂಪಿಸಲಾಗುವುದು ಪರಿಸರ ಮಾಲಿನ್ಯದ ದೃಷ್ಠಿಯಿಂದ ಮುಂದಿನಗಳಲ್ಲಿ ಇ-ಆಟೋಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಈ ಕಾರ್ಯಕಮದಲ್ಲಿ ವಿಕಲಚೇತನ ಅಭಿವೃದ್ದಿ ಕಲ್ಯಾಣಾಧಿಕಾರಿಯಾದ ಶ್ರೀಮತಿ ಮಾಲಿನಿ ರವರು, ಇಲಾಖೆಯ ಗೋಪಾಲ್ ಕೃಷ್ಣ ಹೆಗಡೆ ರವರು, ಮೈಸೂರು ನಗರ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಈಶ್ವರ್ ರವರು, ಉಪಾಧ್ಯಕ್ಷರಾದ ಎಂ.ಆರ್.ಬಾಲಕೃಷ್ಣ ರವರು, ದೇವರಾಜೇಗೌಡ ರವರು, ಬಿ.ಎಲ್.ಎ-1 ಪ್ರಸಾದ್ ಬಾಬು ರವರು, ಸಂತೋಷ್ (ಗ್ರಿಲ್) ರವರು, ಕಾರ್ಯಾಲಯ ಕಾರ್ಯದರ್ಶಿ ಆದರ್ಶ್(ಆದಿ) ರವರು ಉಪಸ್ಥಿತರಿದ್ದರು.


Share