ಕೆೆಐಎಎಲ್ ಟರ್ಮಿನಲ್ 2 ರಿಂದ ಬಿಎಮ್ ಟಿಸಿ ಬಸ್ ಆರಂಭ

25
Share

BMTC ತನ್ನ ವಾಯು ವಜ್ರ ಬಸ್‌ಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ರಿಂದ ಕಾರ್ಯಾಚರಣೆ ಪ್ರಾರಂಭಿಸಿದೆ.
ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ನಿಗಮವು ಭಾನುವಾರವೇ ಘೋಷಣೆ ಮಾಡಿದ್ದರೂ, ಎಲ್ಲಾ ವಿಮಾನ ನಿಲ್ದಾಣದ ಬಸ್‌ಗಳು T1 ಅಂದರೆ ಟರ್ಮಿನಲ್ 1 ರಿಂದ 600 ಮೀಟರ್ ದೂರದಲ್ಲಿರುವ T2 ನಲ್ಲಿ ನಿಲ್ಲುತ್ತದೆಯೇ ಎಂದು ನಿರ್ದಿಷ್ಟಪಡಿಸಿಲ್ಲ.
BMTC ಗೆ T2 ಹೊರಗೆ ಬಸ್ ಬೇ ಗಳನ್ನು ಒದಗಿಸಲಾಗಿದೆ, T1 ಹೊರಗಿವಂತೆಯೇ.
T2 ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿದ್ದು ಪ್ರಸ್ತುತ ವಿಸ್ತಾರಾ ಏರ್‌ಲೈನ್ಸ್, ಏರ್‌ಏಷ್ಯಾ ಮತ್ತು ಸ್ಟಾರ್ ಏರ್ ನಿರ್ವಹಿಸುತ್ತಿರುವ ದೇಶೀಯ ವಿಮಾನಗಳಿಗೆ ಸೇವೆ ಸಲ್ಲಿಸುತ್ತಿದೆ. ಸೆಪ್ಟೆಂಬರ್ ವೇಳೆಗೆ, ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು T2 ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

Share