ಕಮೋಡಿನಿಂದ 50 ಲಕ್ಷ ಬೆಲೆಯ ಉಂಗುರ ಹೊರ ತೆಗೆದ ಪೋಲೀಸರು !!

21
Share

ಜುಬಿಲಿ ಹಿಲ್ಸ್ (ತೆಲಂಗಾಣ): ಮಹಿಳೆಯೊಬ್ಬಳು 50 ಲಕ್ಷ ಮೌಲ್ಯದ ವಜ್ರದ ಉಂಗುರವನ್ನು ಕದ್ದು, ನಂತರ ಭಯದಿಂದ ಕಮೋಡ್‌ಗೆ ಎಸೆದಿರುವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.
ಬಂಜಾರಾ ಹಿಲ್ಸ್‌ನ ನರೇಂದ್ರ ಕುಮಾರ್ ಅಗರ್ವಾಲ್ ಅವರ ಸೊಸೆ ಜೂನ್ 27 ರಂದು ತೆಲಂಗಾಣದ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ದಂತ ಮತ್ತು ಚರ್ಮದ ಚಿಕಿತ್ಸಾಲಯಕ್ಕೆ ಬಂದಿದ್ದಾಗ, ಚಿಕಿತ್ಸೆ ಸಮಯದಲ್ಲಿ ಮಹಿಳೆ ತನ್ನ ಬೆರಳಿನಿಂದ ಉಂಗುರವನ್ನು ಹೊರತೆಗೆದು ಪಕ್ಕದ ಮೇಜಿನ ಮೇಲೆ ಇಟ್ಟಿದ್ದಾಗ್ಯೂ, ಅವಳು ಕ್ಲಿನಿಕ್ನಿಂದ ಹೊರಬಂದಾಗ ಅದನ್ನು ತೆಗೆದುಕೊಳ್ಳಲು ಮರೆತಿದ್ದಳಂತೆ.
ಕೆಲವು ಸಮಯದ ನಂತರ, ಟೇಬಲ್‌ ಬಳಿ ಹೋದ ಯುವತಿಯೊಬ್ಬಳು ಉಂಗುರವನ್ನು ಗುರುತಿಸಿ ತನ್ನ ಪರ್ಸ್‌ಗೆ ಹಾಕಿಕೊಂಡಿದ್ದಾಳೆ. ಆದರೆ, ಉಂಗುರ ತುಂಬಾ ದುಬಾರಿ ಎಂದು ತಿಳಿದ ನಂತರ ಆಕೆ ಪೊಲೀಸರಿಗೆ ಸಿಕ್ಕಿಬೀಳಬಹುದೆಂಬ ಭಯದಿಂದ ಅವಳು ವಾಶ್‌ರೂಮ್‌ಗೆ ಧಾವಿಸಿ ಟಿಶ್ಯೂ ಪೇಪರ್‌ನಿಂದ ಸುತ್ತಿದ ನಂತರ ಉಂಗುರವನ್ನು ಕಮೋಡ್‌ಗೆ ಎಸೆದಿದ್ದಾಳೆ.
ಏತನ್ಮಧ್ಯೆ, ಮನೆಗೆ ಹಿಂದಿರುಗಿದ ನಂತರ, ಅಗರ್ವಾಲ್ ಅವರ ಸೊಸೆ ತನ್ನ ಬೆರಳಿನಿಂದ ತನ್ನ ಉಂಗುರವು ಕಾಣೆಯಾಗಿದೆ ಎಂದು ಇದ್ದಕ್ಕಿದ್ದಂತೆ ಅರಿವಿಗೆ ಬಂದ ನಂತರ ಟೇಬಲ್ ಮೇಲೆ ಇಟ್ಟಿದ್ದು ತೆಗೆದುಕೊಳ್ಳಲು ಮರೆತಿದ್ದು ನೆನಪಾಯಿತಂತೆ. ತಕ್ಷಣ ಕ್ಲಿನಿಕ್ ತಲುಪಿದ ನಂತರ ಆಕೆ ಇಟ್ಟಿದ್ದ ಉಂಗುರ ಕಾಣಲಿಲ್ಲ. ಅವಳು ಇಡೀ ಸ್ಥಳವನ್ನು ಹುಡುಕಿದಳು, ಆದರೆ ಉಂಗುರವು ಎಲ್ಲಿಯೂ ಕಂಡುಬರಲಿಲ್ಲವಂತೆ. ಅವಳು ಉಂಗುರದ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದಾಗ ಯಾರೂ ಅವಳಿಗೆ ಯಾವುದೇ ಮಾಹಿತಿಯನ್ನು ನೀಡಲು ಸಾಧ್ಯವಾಗಲಿಲ್ಲವಂತೆ.
ನಂತರ ನರೇಂದ್ರ ಕುಮಾರ್ ಜುಬ್ಲಿ ಹಿಲ್ಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಡಿಐ ರಾಮಪ್ರಸಾದ್, ಡಿಎಸ್‌ಐ ರಾಜಶೇಖರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕ್ಲಿನಿಕ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಮಹಿಳೆಯೊಬ್ಬಳು ಉಂಗುರವನ್ನು ಕಮೋಡ್‌ಗೆ ಎಸೆದಿರುವುದಾಗಿ ತಿಳಿಸಿದಾಗ ಪೊಲೀಸರು ಮೆಕ್ಯಾನಿಕ್‌ಗೆ ಕರೆ ಮಾಡಿ ಕಮೋಡ್ ಮತ್ತು ಪೈಪ್‌ಲೈನ್‌ಗಳನ್ನು ತೆಗೆಯುವಂತೆ ಹೇಳಿ, ಸಿಬ್ಬಂದಿ ಮತ್ತು ಮೆಕ್ಯಾನಿಕ್ ಸಹಾಯದಿಂದ ಪೊಲೀಸರು ಕಮೋಡ್‌ಗೆ ಸಂಪರ್ಕ ಕಲ್ಪಿಸುವ ನೀರಿನ ಪೈಪ್‌ಲೈನ್‌ನಿಂದ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share