ಕೋವಿಡ್-19ರ ವೈರಾಣು ಸೋಂಕಿನಿAದಾಗಿ ಸದಸ್ಯರನ್ನು ಕಳೆದುಕೊಂಡ0ತಹ ಕುಟುಂಬಕ್ಕೆ ಪರಿಹಾರ

192
Share

ಕೋವಿಡ್-19ರ ವೈರಾಣು ಸೋಂಕಿನಿAದಾಗಿ ಸದಸ್ಯರನ್ನು ಕಳೆದುಕೊಂಡAತಹ ಕುಟುಂಬಕ್ಕೆ ಪರಿಹಾರ
ಮೈಸೂರು,- ಕೋವಿಡ್‌ನಿಂದಾಗಿ ಮೃತಪಟ್ಟ ಕುಟುಂಬದ ವಾರಸುದಾರರಿಗೆ ವಿಪತ್ತು ಪರಿಹಾರ ನಿಧಿಯಿಂದ ಈಗಾಗಲೇ ಪರಿಹಾರ ನೀಡಲಾಗಿದ್ದು, ಇನ್ನೂ ಹಲವಾರು ಕುಟುಂಬಗಳು ಪರಿಹಾರ ಸಿಕ್ಕಿಲ್ಲ ಎಂದು ದೂರು ನೀಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪರಿಹಾರಕ್ಕೆ ಈವರೆಗೂ ಅರ್ಜಿ ಸಲ್ಲಿಸದಿದ್ದಲ್ಲಿ ದಾಖಲೆಗಳೊಂದಿಗೆ ಈಗಲೂ ಸಂಬAಧಪಟ್ಟ ತಹಸೀಲ್ದಾರರುಗಳಿಗೆ ಅರ್ಜಿಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2022ರ ಮಾರ್ಚ್ 24ರ ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ಕೋವಿಡ್-19 ರಿಂದ ಮೃತರಾದವರ ಕಾನೂನುಬದ್ದ ವಾರಸುದಾರರಿಗೆ ಪರಿಹಾರ ನೀಡಲು ಅರ್ಜಿ ಸ್ವೀಕಾರ ಹಾಗೂ ಅರ್ಹ ವ್ಯಕ್ತಿಗಳಿಗೆ ಪರಿಹಾರ ಪಾವತಿಸಲಾಗುತ್ತದೆ.
2022ರ ಮಾರ್ಚ್ 20 ಕ್ಕಿಂತ ಮೊದಲು ಕೋವಿಡ್-19 ವೈರಾಣು ಸೋಕಿನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು 2022ರ ಮಾರ್ಚ್ 20 ರಿಂದ 60 ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಿದ್ದು, ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದ್ದು, 2022ರ ಮಾರ್ಚ್ 20ರ ನಂತರ ಕೋವಿಡ್-19 ವೈರಾಣು ಸೋಕಿನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಮರಣ ಸಂಭವಿಸಿದ ದಿನಾಂಕದಿAದ 90 ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.
ಸ್ವೀಕೃತವಾದ ಅರ್ಜಿಗಳ ಸಂಸ್ಕರಣೆ ಹಾಗೂ ಪರಿಹಾರ ಪಾವತಿಗೆ ಅರ್ಜಿ ಸ್ವೀಕರಿಸಿದ ದಿನಾಂಕದಿAದ 30 ದಿನಗಳ ಕಾಲಮಿತಿ ಅನ್ವಯವಾಗುತ್ತದೆ.
ಯಾವುದೇ ವ್ಯಕ್ತಿಯು ಸುಳ್ಳು ಮಾಹಿತಿ ಅಥವಾ ನಕಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆದಿದ್ದು, ತದನಂತರ ಅದು ಸುಳ್ಳು ಎಂದು ಸಾಬೀತಾದಲ್ಲಿ ಅಂತಹ ವ್ಯಕ್ತಿಗಳು ಪಡೆದ ಪರಿಹಾರ ಮೊತ್ತವನ್ನು ವಸೂಲು ಮಾಡುವ ಹಾಗೂ 2005ರ ನಿಯಮ 52ರಡಿ ಸೂಕ್ತ ದಂಡದೊAದಿಗೆ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.
ಕೋವಿಡ್-19 ಪರಿಹಾರ ಪಾವತಿಯ ಮಾರ್ಗಸೂಚಿಗಳಲ್ಲಿ ಸೂಚಿಸಿರುವಂತೆ ಸೂಕ್ತ ವಿಚಾರಣೆ ನಡೆಸದೆ, ಮನವಿಗಳನ್ನು ಪರಿಶಿಲಿಸದೆ ಕೋವಿಡ್-19 ಪರಿಹಾರ ವಿತರಣೆಗೆ ಶಿಫಾರಸ್ಸು ಮಾಡುವಂತಹ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ದವೂ ಸಹ ಸಂಬAಧಪಟ್ಟ ಇಲಾಖೆಗಳ ಮುಖ್ಯಸ್ಥರು ಶಿಸ್ತಿನ ಕ್ರಮ ಕೈಗೊಳ್ಳಬಹುದಾಗಿದೆ.
ಕೋವಿಡ್-19 ನಿಂದ ಮೃತರಾದವರ ಕಾನೂನುಬದ್ದ ವಾರಸುದಾರರು ಅರ್ಜಿ ಸಲ್ಲಿಸಿದ್ದರೂ ಈ ವರೆಗೂ ಪರಿಹಾರದ ಮೊತ್ತ 50000 ಅರ್ಜಿದಾರರ ಖಾತೆಗೆ ಸಂದಾಯವಾಗದಿದ್ದಲ್ಲಿ, ಅಂತಹವರು ಖುದ್ದಾಗಿ ತಮ್ಮ ದಾಖಲಾತಿಗಳೊಂದಿಗೆ ತಾಲ್ಲೂಕು ಕಛೇರಿಯನ್ನು ಅಥವಾ ನೇರವಾಗಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.


Share