20/04/2022 ರ ಸರ್ಕಾರಿ ಅರ್ಜಿ ಆಹ್ವಾನ

256
Share

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೈಸೂರು, – ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ (ಆಂಗ್ಲ ಮಾಧ್ಯಮ) 2022-23ನೇ ಶೈಕ್ಷಣಿಕ ವರ್ಷಕ್ಕೆ 6ನೇ ತರಗತಿಯಿಂದ 10ನೇ ತರಗತಿ ವರೆಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೊಡ್ಡಕಾನ್ಯ, ಮೈಸೂರು ತಾಲ್ಲೂಕು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಲಗನಹಳ್ಳಿ, ಪಿರಿಯಾಪಟ್ಟಣ ತಾಲ್ಲೂಕು ಹಾಗೂ ಮೌಲಾನಾ ಆಜಾದ್ ಆಂಗ್ಲ ಮಾದರಿ, ಕೆಸರೆ, ನಿಜಾಮಿಯಾ, ಶೋಭಾ ಗಾರ್ಡನ್, ಹುಣಸೂರು ಟೌನ್ ಹಾಗೂ ಹಲಗನಹಳ್ಳಿ ಪಿರಿಯಾಪಟ್ಟಣ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಜಿಗಳನ್ನು https://sevasindhuservices.karnataka.gov.in ನಲ್ಲಿ ದಿನಾಂಕ 22.04.2022 ರೊಳಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೈಸೂರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಕಛೇರಿ, ಮೌಲಾನಾ ಅಜಾದ್ ಭವನ, ಸಿಎ ನಂ:01, ಶೋಭಾ ಗಾರ್ಡನ್ ಪಕ್ಕ, ಮೈಸೂರು-ಬೆಂಗಳೂರು ರಸ್ತೆ, ಮೈಸೂರು ಜಿಲ್ಲೆ-570007. ವೆಬ್ ಸೈಟ್ ವಿಳಾಸ https://dom.karnataka.gov.in ಮೊಬೈಲ್ ನಂ: 99452 63510/ 89510 87207ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿಗಳು


Share