ಆಗಸ್ಟ್ 31ರಂದು ಬೃಹತ್ ಉದ್ಯೋಗ ಮೇಳ

20
Share

 

ಮೈಸೂರು, ಯುವನಾಯಕರಾದ ಶ್ರೀ ಸುನೀಲ್‌ಬೋಸ್‌ರವರ ಜನ್ಮ ದಿನದ ಪ್ರಯುಕ್ತ ಆಗಸ್ಟ್ 31ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ ಎಂದು ಡಾ. ಹೆಚ್ ಸಿ ಮಹದೇವಪ್ಪ ಅಭಿಮಾನಿ ಬಳಗದ ಸಂಚಾಲಕ ಮಹೇಶ್ ಸೊಸ್ಲೆ ತಿಳಿಸಿದರು
 ನಾಡು ಕಂಡ ಹಿರಿಯ ಪ್ರಬುದ್ಧ ರಾಜಕಾರಣಿ, ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಾ.ಹೆಚ್.ಸಿ.ಮಹದೇವಪ್ಪರವರ ಸುಪುತ್ರರಾದ ಯುವನಾಯಕ ಶ್ರೀ ಸುನೀಲ್‌ಬೋಸ್ ರವರ 41ನೇ ಹುಟ್ಟು ಹಬ್ಬದ ಪ್ರಯುಕ್ತ ಆಗಸ್ಟ್ 31ರಂದು ಟಿ.ನರಸೀಪುರ ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಎಂದು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೊಮೊ, ಇಂಜಿನಿಯರಿಂಗ್‌, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದಾಗಿದೆ. ಈ ಉದ್ಯೋಗಮೇಳದಲ್ಲಿ ಪ್ರತಿಷ್ಠಿತ ಸಂಸ್ಥೆಗಳಾದ ಇನ್‌ಫೋಸಿಸ್, ಐ.ಸಿ.ಐ.ಸಿ.ಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಮುತ್ತೂಟ್ ಫೈನಾನ್ಸ್, ಟೊಯೊಟಾ, ಎನ್.ಐ.ಟಿ.ಟಿ, ಮುಂತಾದ ನೂರಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಎಲ್ಲಾ ವಿದ್ಯಾವಂತ ನಿರುದ್ಯೋಗ ಯುವಕ/ಯುವತಿಯರು ಭಾಗವಹಿಸಲು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ

Share