ಇಂದು 1, ದಿನದ ಅಪ್ರೆಂಟಿಷಿಪ್ ತರಬೇತಿ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮ

73
Share

 

ಸಣ್ಣ ಮತ್ತು ಮದ್ಯಮ ಕೈಗಾರಿಕೆ ಹಾಗೂ ಸೇವೆ-ವಾಣಿಜ್ಯೋದ್ಯಮಿಗಳಿಗಾಗಿ ಅಪ್ರೆಂಟಿಷಿಪ್ ತರಬೇತಿ ಯೋಜನೆಗಳ ಅರಿವು ಮೂಢಿಸುವ ಕಾರ್ಯಕ್ರಮ.
ಜಾಗತಿಕ ಆರ್ಥಿಕ ಹಿನ್ನಡೆ, ಕೋವಿದ್-19 ರ ದುಷ್ಪರಿಣಾಮದಿಂದಾಗಿ ಕೆಲಸ / ಉದ್ಯೋಗ ಅರಸುತ್ತಿರುವ ನಿರುದ್ಯೋಗಿಗಳಿಗಾಗಿ ಕೌಶಲ್ಯ ಅಭಿವೃದ್ಧಿಯೊಂದಿಗೆ ವೃತ್ತಿ ತರಬೇತಿ ನೀಡಲು ಕೌಶಲ್ಯಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯ, ಭಾರತ ಸರ್ಕಾರ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕರ್ನಾಟಕ ಸರ್ಕಾರ ಸಂಯುಕ್ತವಾಗಿ ಮೈಸೂರು ಕೈಗಾರಿಕೆಗಳ ಸಂಘ ಮತ್ತು ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಸಹಯೋಗದೊಂದಿಗೆ 14-02-2023 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಒಂದು ದಿನದ ಅಪ್ರೆಂಟಿಷಿಪ್ ತರಬೇತಿ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗಾರಿಕೆ, ವ್ಯಾಪಾರ, ಸೇವಾ ಉದ್ಯಮ, ಆಸ್ಪತ್ರೆ, ಹೊಟೇಲ್, ಶಿಕ್ಷಣ ಸಂಸ್ಥೆ ಹಾಗೂ ಇತರೆ ಉದ್ಯಮ ಸಂಸ್ಥೆಗಳ ಉದ್ಯೋಗದಾತರಿಗೆ ಆಯೋಜಿಸಲಾಗಿದೆ .
ಈ ಕಾರ್ಯಕ್ರಮದಲ್ಲಿ ಅಪ್ರೆಂಟಿಷಿಪ್ ತರಬೇತುದಾರ ಸಂಸ್ಥೆಗಳ ನೊಂದಾಣಿ, ಅಪ್ರೆಂಟಿಷಿಪ್ ಕಾಯಿದೆ ಅರಿವು, ತರಬೇತಿ ಪಡೆಯುವವರಿಗೆ ಕೇಂದ್ರ ಸರ್ಕಾರ 1500 ರೂಪಾಯಿ ಮತ್ತು ರಾಜ್ಯ ಸರ್ಕಾರ 1500 ರೂಪಾಯಿ ಒಟ್ಟು 3000 ರೂಪಾಯಿಗಳ ತರಬೇತಿ ಭತ್ಯೆ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಮತ್ತು ಉದ್ಯೋ̧ಗ, ಸ್ವ-ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗುವುದು. ಉಚಿತ ಪ್ರವೇಶವಾದರು ನೊಂದಾಂಣಿ ಕಡ್ಡಾಯ. ಹೆಚ್ಚಿನ ಮಾಹಿತಿ ಹಾಗೂ ನೊಂದಾಂಣಿಗಾಗಿ 9986444654, 9449086897
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ

ಸುರೇಶ್‌ ಕುಮಾರ್‌ ಜೈನ್‌
ಕಾರ್ಯದರ್ಶಿ
ಮೈಸೂರು ಕೈಗಾರಿಕೆಗಳ ಸಂಘ


Share