ಯುವಕ-ಯುವತಿಯರು ಖಾದಿ ಯನ್ನು ಬಳಸುವ ಕುರಿತು ಜಾಗೃತಿ ಮೂಡಿ ಸಬೇಕು:

289
Share

 

ಯುವಕ-ಯುವತಿಯರು ಖಾದಿ ಯನ್ನು ಬಳಸುವ ಕುರಿತು ಜಾಗೃತಿ ಮೂಡಿ ಸಬೇಕು:ಹೇಮಂತ್ ಕುಮಾರ್ ಗೌಡ

ಭಾರತೀಯ ಜನತಾ ಪಾರ್ಟಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಬಿಜೆಪಿ ಮೈಸೂರು ನಗರ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಸೇವಾ ಮತ್ತು ಸಮರ್ಪಣಾ ಅಭಿಯಾನ ಅಂಗವಾಗಿ ವಸ್ತುಪ್ರದರ್ಶನ ಆವರಣದಲ್ಲಿ ವಸ್ತುಪ್ರದರ್ಶನ ದಲ್ಲಿ ಕೆಲಸ ಮಾಡುತ್ತಿರುವ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಖಾದಿ ವಸ್ತ್ರ ವಿಚಾರಿಸಿ ನಂತರ ಖಾದಿ ವಸ್ತ್ರಗಳ ಜಾಗೃತಿ ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು
ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಮಾತನಾಡಿ
ಮಹಾತ್ಮ ಗಾಂಧೀಜಿ ಸ್ವತಃ ಚರಕದಲ್ಲಿ ನೇಯ್ದ ಖಾದಿಯನ್ನು ಧರಿಸುತ್ತಿದ್ದರು. ವಿದೇಶಿ ಬಟ್ಟೆಗಳ ವ್ಯಾಮೋಹಕ್ಕೆ ಒಳಗಾಗದೆ, ಖಾದಿ ಗ್ರಾಮೋ ದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿದರು. ಹಾಗೆಯೇ ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಬಂದು ಖಾದಿ ಗ್ರಾಮೋದ್ಯೋಗ ವನ್ನು ಪರಿಚಯಿಸಿದರು ,
ಯುವಕ-ಯುವತಿಯರು ಖಾದಿ ಯನ್ನು ಬಳಸುವ ಕುರಿತು ಜಾಗೃತಿ ಮೂಡಿ ಸಬೇಕು. ಖಾದಿ ಬಟ್ಟೆ ಧರಿಸುವುದರಿಂದ ಸ್ವಾತಂತ್ರ್ಯಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.
ದೇಶದಲ್ಲಿ ಹಲವು ರಾಜಕೀಯ ಪಕ್ಷಗಳು, ನಾಯಕರು ಗಾಂಧೀಜಿ ಅವರನ್ನು ಕೇವಲ ರಾಜಕೀಯಕ್ಕಾಗಿ ಬಳಸಿಕೊಂಡರು. ಆದರೆ ಗಾಂಧಿ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಗಾಂಧಿ ಪಥದಲ್ಲಿ ನಡೆಯುತ್ತಿರುವ ಏಕೈಕ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ ಎಂದರು.

ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಹೇಮಂತ್ ಕುಮಾರ್ ಗೌಡ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾದ ಶ್ರೀಮತಿ ವಿದ್ಯಾ ಅರಸುರವರು ನಗರ ಬಿಜೆಪಿ ವ್ಯಾಪಾರ-ವಾಣಿಜ್ಯ ಪ್ರಕೋಷ್ಠದ ಸಂಚಾಲಕರಾದ ಅಪೂರ್ವ ಸುರೇಶ್ ರವರು ಸಹ ಸಂಚಾಲಕರಾದ ರಾ. ಪರಮೇಶ್ ಗೌಡ ಹಾಗೂ ನಗರ ಉಪಾಧ್ಯಕ್ಷರಾದ ಎಸ್ಕೆ ದಿನೇಶ್ ಮತ್ತು ಪೂರ್ಣಿಮ ಚಂದ್ರಪ್ಪ, ಗೋಕುಲ್ ಗೋವರ್ಧನ, ನವೀನ್ , ಪ್ರದೀಪ್ ಕುಮಾರ್, ಕಿರಣ್, ಬೆಳಕು ಮಂಜು, ಲೋಹಿತ್, ಮಧುಸೂದನ್, ಕುಮಾರ್ ಇಟ್ಟಿಗೆಗೂಡು, ಜೈ ಗಣೇಶ್, ಕೃಷ್ಣ, ಸುರೇಂದ್ರ, ಮುಂತಾದವರನ್ನು ಕಾಣಬಹುದು


Share