M. P. ಫೋಕಸ್-ಮೈಸೂರು,ಹೊಸ ಇತಿಹಾಸ ಬರೆದ ‘ಮಧುಮೇಹವನ್ನು ಮಣಿಸೋಣ’ ಜನಜಾಗೃತಿ

501
Share

ಹೊಸ ಇತಿಹಾಸ ಬರೆದ ‘ಮಧುಮೇಹವನ್ನು ಮಣಿಸೋಣ’ ಜನಜಾಗೃತಿ

ನ್ಯೂ ಡಯಾಕೇರ್ ಸೆಂಟರ್ & ಪಾಲಿ ಕ್ಲಿನಿಕ್/ನವಾಯು ಕೇರ್ ಸೆಂಟರ್( ವಿ ವಿ ಮೊಹಲ್ಲಾ) ವತಿಯಿಂದ ರೋಟರಿ ಕ್ಲಬ್ ಆಫ್ ಮೈಸೂರ್ ವೆಸ್ಟ್ , ಇನ್ನರ್ವೀಲ್ ಕ್ಲಬ್ ಆಫ್ ಮೈಸೂರ್ ವೆಸ್ಟ್ ಸಹಯೋಗದೊಂದಿಗೆ 29 ರಂದು ಮಧುಮೇಹ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉಚಿತ
ಮಧುಮೇಹ ರಕ್ತದೊತ್ತಡ ಹಾಗೂ ಥೈರಾಯ್ಡ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಭಾರತದ ಮಧುಮೇಹ ಸಂಶೋಧನಾ ಸಂಸ್ಥೆ ಯಾದ RSSDI ಪ್ರೋತ್ಸಾಹದೊಂದಿಗೆ ಜನರಲ್ಲಿ ಮಧುಮೇಹದ ಬಗ್ಗೆ ಅರಿವು ಮೂಡಿಸಲು ಆರ್ಟ್ ಆಫ್ ಲಿವಿಂಗ್, ರೋಟರಿ ಸಂಸ್ಥೆ, ಟರ್ರೆಂಟ್ ಹಾಗೂ ಬಿಟ್ ದೇಶದಾದ್ಯಂತ ಒಂದೇ ದಿನದಲ್ಲಿ ಒಂದು ಮಿಲಿಯನ್ ಗೂ ಅಧಿಕ ಸಾರ್ವಜನಿಕರನ್ನು ಮಧುಮೇಹ ತಪಾಸಣೆಗೆ ಒಳಪಡಿಸಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿ ಹೊಸ ಇತಿಹಾಸವನ್ನು ನಿರ್ಮಿಸಿದೆ.ಇದರ ಭಾಗವಾಗಿ  ರಂದುಸಂಸ್ಥೆಯಲ್ಲಿ ನಡೆದ Defeat Diabetes –
‘ಮಧುಮೇಹವನ್ನು ಮಣಿಸೋಣ’ ಜನಜಾಗೃತಿಯ ಕಾರ್ಯಕ್ರಮ ದಲ್ಲಿ 150ಕ್ಕೂ ಹೆಚ್ಚಿನ ಜನರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸಂಸ್ಥೆ ಮುಖ್ಯಸ್ಥ ಡಾ. ರೇಣುಕಾಪ್ರಸಾದ್. ಎ ಆರ್ ಹಾಗೂ ತಂಡದವರು, ರೋಟರಿ ಸಂಸ್ಥೆ ಯ ಭವಾನಿ ಚಂದ್ರ, ಮೋಹನ್ ಕೃಷ್ಣ, ಸುಧೀಂದ್ರ, ಕಲ್ಯಾಣ ರೆಡ್ಡಿ,ಗಣೇಶ್ ಚೌದ್ರಿ ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.


Share