ಗೆದ್ದೂ ಸೋತರ ಸಿದ್ದು ? ಸೋತೂ ಗೆದ್ದರ ಡಿಕೆಶಿ ?

60
Share

13 ನೇ ತಾರೀಖಿನಂದು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಬಂದರು ಮುಖ್ಯಮಂತ್ರಿಯನ್ನು ಪ್ರಕಟಿಸಲು ಬಾರೀ ಜಗ್ಗಾಟ ನಡೆದು ಮೂರು ದಿನಗಳ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಎಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಪ್ರಕಟಿಸಿತು. ಇಬ್ಬರು ನಾಯಕರು ತಾವೇ ಮುಖ್ಯಮಂತ್ರಿ ಆಗಬೇಕೆಂದು ಪಟ್ಟು ಹಿಡಿದಿದ್ದರು.
ಆದರೆ ಸಿದ್ದರಾಮಯ್ಯನವರಿಗೆ ಅವರು ಹಿಡಿದ ಪಟ್ಟಿನಂತೆ ಜಯ ಸಿಕ್ಕಿತು ಎನ್ನುವುದು ಸ್ಪಷ್ಟವಾಗಿದೆ. ಆದರೆ ಇದು ಎಷ್ಟರಮಟ್ಟಿಗಿನ ಜಯ ? ಎಂಬುದು ತಿಳಿದಿಲ್ಲ. ಏಕೆಂದರೆ ಅವರು ಬಯಸಿ ಹಠ ಹಿಡಿದು ಮುಖ್ಯಮಂತ್ರಿ ಸ್ಥಾನವನ್ನು ಗಳಿಸಿಕೊಂಡರೂ ಅವರ ಮುಖದಲ್ಲಿ ಒಂದು ಸ್ವಲ್ಪವೂ ಸಂತೋಷದ ಗುರುತು ಕಾಣಿಸುತ್ತಿಕ್ಕ. ಇದಕ್ಕೆ ಕಾರಣ ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿ ಆಗುತ್ತಿರುವುದೇ ? ತಮ್ಮ ರಾಜ್ಯಾಡಳಿತದಲ್ಲಿ ತಮ್ಮ ನಿರ್ಧಾರಗಳಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರದು ಹಸ್ತಕ್ಷೇಪ ಇರುತ್ತದೆ ಎನ್ನುವ ಅನುಮಾನವೇ ಅಥವಾ ಎಲ್ಲರ ಊಹೆಯಂತೆ ಅಧಿಕಾರ ಹಂಚಿಕೆ ಸೂತ್ರವೇ ? ಆ ರೀತಿಯ ಸೂತ್ರದಿಂದ ತಮಗೆ ಸಂಪೂರ್ಣ ಐದು ವರ್ಷ ಅಧಿಕಾರ ಸಿಗುವುದಿಲ್ಲ ಎನ್ನುವ ಬೇಸರವೇ ಗೊತ್ತಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ನವರ ನಡವಳಿಕೆಯಲ್ಲಿ ಯಾವುದೇ ಒಂದು ಸಂತೋಷದ ತುಣುಕು ಕಾಣುತ್ತಿಲ್ಲ . ಮುಖ್ಯಮಂತ್ರಿ ಪಟ್ಟವೇನು ಸಿಕ್ಕಿತು ಆದರೆ ಅಮ್ಮ ಹಟ ಸಾಧಿಸಲಾಗಲಿಲ್ಲ .
ಇದೇ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾದರೂ ಬಹಳ ಸಂತೋಷದಿಂದ ಇದ್ದಾರೆ. ಅವರ ಮುಖದಲ್ಲಿ ಕಿಂಚಿತ್ತು ಬೇಸರವು ಕಾಣುತ್ತಿಲ್ಲ. ಆದರೆ ಇಷ್ಟೊಂದು ಸಮಾಧಾನ ತಂದ ವಿಷಯ ಯಾವುದು ಎನ್ನುವುದು ಎಲ್ಲರ ಕುತೂಹಲವಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದರೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಅಧಿಕಾರ ನೀಡಲಾಗಿದೆಯೇ ? ಅಧಿಕಾರ ಹಂಚಿಕೆಯಂತಹ ಒಳ ಒಪ್ಪಂದ ಆಗಿದೆಯೇ ? ಇದೆಲ್ಲಕ್ಕಿಂತ ಒಂದು ಆಶ್ಚರ್ಯದ ಸಂಗತಿ ಎಂದರೆ ಮೊದಲು ಸಿದ್ದರಾಮಯ್ಯ ಮುಖ್ಯಮಂತ್ರಿ , ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಎಂದು ಅನಧಿಕೃತವಾಗಿ ಹೆಚ್ಚು ಕಡಿಮೆ ಎಲ್ಲರೂ ಎಲ್ಲಾ ಮಾಧ್ಯಮದವರು ಪ್ರಕಟಿಸಿದಾಗ ಡಿಕೆ ಶಿವಕುಮಾರ್ ಅವರ ಅನುಯಾಯಿಗಳು ಭಾರಿ ಅದನ್ನು ವಿರೋಧಿಸಿ ಗಲಾಟೆ ಆರಂಭಿಸಿದರು. ಆದರೆ ಈಗ ಅಧಿಕೃತವಾಗಿ ಪ್ರಕಟವಾದ ನಂತರ ಒಬ್ಬರೇ ಒಬ್ಬರು ಯಾವುದೇ ಆಕ್ಷೇಪವನ್ನು ಎತ್ತಿಲ್ಲ. ಇದಕ್ಕೆ ಕಾರಣ ಗೊತ್ತಿಲ್ಲ.
ಇದೆಲ್ಲಾ ಪ್ರಶ್ನೆಗಳಿಗೂ ಉತ್ತರ ರಾಜ್ಯ ಸರ್ಕಾರ ಆಡಳಿತ ಆರಂಭಿಸಿದ ಸ್ವಲ್ಪ ದಿನಗಳಲ್ಲಿ ಸಿಗುತ್ತದೇನೋ. ಸದ್ಯಕ್ಕಂತು ಒಂದು ವಿಷಯ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅದೇನೆಂದರೆ ” ಸಿದ್ದರಾಮಯ್ಯನವರು ಗೆದ್ದು ಸೋತಂತೆ ಕಾಣುತ್ತಿದ್ದಾರೆ, ಡಿಕೆಶಿ ಅವರು ಸೋತರೂ ಗೆದ್ದಂತೆ ಕಾಣುತ್ತಿದ್ದಾರೆ ” .

Share