ಗ್ಯಾರೆಂಟಿ : ಜನರಿಗೆ ಶುಕ್ರದೆಸೆಯೋ , ಪಕ್ಷಕ್ಕೆ ವಕ್ರ ದೃಷ್ಟಿಯೋ ??

21
Share

ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಐದು ಗ್ಯಾರೆಂಟಿ ಕಾರ್ಡ್ ಗಳನ್ನು ನೀಡಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಯಿತು. ಅಧಿಕಾರ ಪಡೆದ ಒಂದು ದಿನದಲ್ಲೇ ತಮ್ಮ ಗ್ಯಾರಂಟಿಗಳೆಲ್ಲವನ್ನು ಈಡೇರಿಸುವುದಾಗಿ ವಚನ ನೀಡಿದ್ದರು. ಆದರೆ ಈಗ ಪ್ರಮಾಣವಚನ ಸ್ವೀಕರಿಸಿ ಸುಮಾರು 10 ದಿನಗಳಾದರು ಇನ್ನೂ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ . ಗ್ಯಾರಂಟಿ ಕಾರ್ಡ್ಗಳನ್ನು ಪಕ್ಷವು ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿಲ್ಲ, ಆದರೆ ಚುನಾವಣೆಗೆ ಮುಂಚೆ ವಚನ ನೀಡಿದಂತೆ ಯಾವುದೇ ಷರತ್ತುಗಳಿಲ್ಲದೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತದಾ ? ಜಾರಿಗೊಳಿಸಿದರೆ ಎಲ್ಲಿಯ ತನಕ ? ಲೋಕಸಭಾ ಚುನಾವಣೆಯವರೆಗೋ ? ಅಥವಾ ಐದು ವರ್ಷ ಅಧಿಕಾರ ಇರುವ ತನಕನೋ ಅಥವ ಮುಂಬರುವ ಇತರ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಚುನಾವಣೆ ಗೆಲ್ಲುವ ತನಕ ಜಾರಿಗೊಳಿಸುತ್ತದೊ ಕಾದು ನೋಡಬೇಕು . ಅಲ್ಲದೆ ಇಷ್ಟೆಲ್ಲಾ ಗ್ಯಾರೆಂಟಿಗಳನ್ನು ನೀಡಿ ರಾಜ್ಯಕ್ಕೆ ಯಾವುದೇ ಹೊರೆಯಾಗದಂತೆ ಹೇಗೆ ನೋಡಿಕೊಳ್ಳುತ್ತದೆ ಎನ್ನುವುದು ಒಂದು ಯಕ್ಷಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಈ ಗ್ಯಾರಂಟಿಗಳು ಸಾರ್ವಜನಿಕರಿಗೆ ಶುಕ್ರದೆಸೆ ಒದಗಿಸುತ್ತದೋ ಅಥವಾ ಗ್ಯಾರಂಟಿಗಳನ್ನು ವಿಪರೀತ ನಿಯಮಗಳೊಂದಿಗೆ ಜಾರಿಗೊಳಿಸಿ ಯಾರಿಗೂ ಸರಿಯಾಗಿ ತಲುಪದ ರೀತಿ ಕ್ರಮ ತೆಗೆದುಕೊಂಡು ಜನರಿಗೆ ಅತೀವ ನಿರಾಸೆಯಾಗಿ ಅವರ ವಕ್ರದೃಷ್ಟಿಗೆ ಕಾಂಗ್ರೆಸ್‌  ಪಕ್ಷ ಪಾತ್ರವಾಗುತ್ತದೊ ಗೊತ್ತಿಲ್ಲ. ಗ್ಯಾರಂಟಿ ಜನರಿಗೆ ಶುಕ್ರದೆಸೆಯೊ, ಕಾಂಗ್ರೆಸ್  ಪಕ್ಷಕ್ಕೆ ವಕ್ರದೃಷ್ಟಿಯೋ ಕಾದು ನೋಡಬೇಕು.

Share