ಜನಪ್ರತಿನಿಧಿಗಳೇ ಕುತ್ತಿಗೆ ಪಟ್ಟಿ ಹಿಡಿಯುವ ಮುನ್ನ ಎಚ್ಚೆತ್ತುಕೊಳ್ಳಿ

232
Share

ಇದೀಗ ತಾನೆ ಬಂದ ವರದಿಯ ಪ್ರಕಾರ ಇಂದು ಇನ್ನೂ 3ರಾಜ್ಯಸಭಾ ಸದಸ್ಯರನ್ನು ಅಮಾನತುಪಡಿಸಲಾಗಿದೆ.ಪ್ರಸಕ್ತ ರಾಜ್ಯಸಭಾ ನಡಾವಳಿಯಿಂದ ಇದುವರೆಗೆ 27ಜನರನ್ನು ಅಮಾನತು ಪಡಿಸಿ ದಂತಾಯಿತು.ಭಾರತೀಯ ಜನತಾ ಪಕ್ಷದ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿಷಯದಲ್ಲಿ ವಾಗ್ವಾದದ ನಡುವೆ ಸೊಲ್ಲೆತ್ತಿದ ಎಂಪಿಗಳ ಅಮಾನತ್ತು ಹಾಸ್ಯಾಸ್ಪದವಾಗಿ ಕಾಣುತ್ತಿದೆ.ಇನ್ನೊಂದೆಡೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರೊಬ್ಬರು ರಾಷ್ಟ್ರ ಪತ್ನಿ ಎಂದು ಅವಹೇಳನಕಾರಿ ಪದ ಬಳಸಿದ್ದಾರೆಂದು ಆಡಳಿತ ಸಂಸದ ಭಾರಿ ವಾಗ್ವಾದದಿಂದ ಇಂದಿನ ಉಭಯ ಸದನಗಳನ್ನು ಪದೇಪದೆ ಮುಂದೂಡಲಾಗುತ್ತಿದೆ.ಇದನ್ನೆಲ್ಲಾ ನೋಡುತ್ತಿದ್ದರೆ ಶ್ರೀಸಾಮಾನ್ಯನಿಗೆ ನಮ್ಮ ಈ ಜನಪ್ರತಿನಿಧಿಗಳಿಂದ ಏನು ಕೊಡುಗೆ ಲಭ್ಯವಾಗುತ್ತಿದೆ? ಎಂದೇ ಅರ್ಥವಾಗುತ್ತಿಲ್ಲ.ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ತಮ್ಮ ಪಕ್ಷದ ನಿಲುವಿಗೆ ಅಂಟಿ ಕೊಂಡು ಸಂಸತ್ತಿನ ಒಳಗೆ ಸಂಸತ್ತಿನ ಹೊರಗೆ ಬೇಡವಾದ ವಿಷಯಗಳಿಗೆ ವಾಗ್ವಾದ ಚರ್ಚೆ ಪ್ರತಿಭಟನೆ ಗಳಲ್ಲಿಯೇ ನಿರತರಾಗಿ ಕಾಲ ಕಳೆಯುತ್ತಿದ್ದಾರೆ. ಸಾಸುವೆ ಉಪ್ಪಿನಿಂದ ಹಿಡಿದು ಪ್ರತಿಯೊಂದು ಆಹಾರ ಪದಾರ್ಥಗಳು ಖಾದ್ಯ ತೈಲಗಳು ಪೆಟ್ರೋಲ್ ಡೀಸೆಲ್ ಹೀಗೆ ಪ್ರತಿಯೊಂದರಲ್ಲೂ ಜಿಎಸ್ ಟಿ ನೆಪ ಹೇಳಿಕೊಂಡು ಬೆಲೆ ಏರಿಕೆಗಳನ್ನು ಮಾಡುತ್ತಲೇ ಹೋಗುತ್ತಿರುವುದು ಶ್ರೀಸಾಮಾನ್ಯ ತತ್ತರಿಸುವಂತೆ ಮಾಡುತ್ತಿದೆ. ಅಸಹ್ಯ ಹುಟ್ಟಿಸುತ್ತಿರುವ ಜನಪ್ರತಿನಿಧಿಗಳೇ ಶ್ರೀಸಾಮಾನ್ಯ ನಿಮ್ಮ ಕುತ್ತಿಗೆ ಪಟ್ಟಿ ಹಿಡಿದು ಕೇಳುವ ಮುನ್ನ ಎಚ್ಚೆತ್ತುಕೊಂಡು ನಿಮ್ಮ ಗೌರವಯುತ ಸ್ಥಾನಗಳಿಗೆ ಸೂಕ್ತ ಬೆಲೆ ನೀಡಿ ಇಲ್ಲದಿದ್ದರೆ ನಿಮಗೆ ಗ್ರಹಚಾರ ಗ್ಯಾರಂಟಿ.


Share