ಸಂಪಾದಕೀಯ : ಇಂದು ಮನೆಯಲ್ಲೇ ಸ್ವಾತಂತ್ರ್ಯ ಬೇಕೆನ್ನುವ ಮಕ್ಕಳಿಗೆ ಅಂದಿನ ಸ್ವಾತಂತ್ರ್ಯ ದ ಬಗ್ಗೆ ಅರಿವು ಮೂಡಿಸಿ

153
Share

ಸಮಸ್ತ ಭಾರತೀಯರಿಗೂ 75 ನೇ ಗಣರಾಜ್ಯೋತ್ಸವದ ಶುಭಾಶಯಗಳು.
ಇಂದು ನಾವು 75 ನೇ ಗಣರಾಹಜ್ಯೊತ್ಸವ ಆಚರುಸುತ್ತಿದ್ದೇವೆ.
ಇಂದು ಸಮಾಜದಲ್ಲಿ ಆಧುನಿಕತೆ, ಆಧುನಿಕ ತಂತ್ರಜ್ಞಾನಕ್ಕೆ ಹೆಚ್ಚು ಒತ್ತುಕೊಡುತ್ತಿದ್ದೇವೆ. ಅದರ ಅವಶ್ಯಕತೆಯೂ ಹೆಚ್ಚಾಗಿದೆ. ಇದೇ ನಿಜ. ಆದರೆ ನಾವು ನಡೆದು ಬಂದ ದಾರಿಯ ಬಗ್ಗೆಯೂ ಅರಿವಿರಬೇಕು ಎನ್ನುವುದು ಅಷ್ಟೇ ಅವಶ್ಯಕ.
ಇಂದಿನ ಪೀಳಿಗೆಯ ಮಕ್ಕಳಿಗೆ ಶಾಲೆಗೆ ಹೋಗಲು ಆರಂಭಿಸಿದಂದಿನಿಂದಲೇ ಸ್ವಾತಂತ್ರ್ಯ ಬೇಕು. ನನ್ನ ಜಾಗ, ನನ್ನ ಹಾಸಿಗೆ, ನನ್ನ ರೂಮು, ನನ್ನ ಮೊಬೈಲ್ , ನನ್ನ ಪುಸ್ತಕ ಹೀಗೆ ಪ್ರತಿಯೊಂದರಲ್ಲೂ ತನಗೆ ಸ್ವಾತಂತ್ರ್ಯ ಬೇಕು ಎಂದು ಬಯಸುತ್ತಾರೆ.
ಇನ್ನು ಪಠ್ಯ ಪುಸ್ತಕದಲ್ಲಿ ಸ್ವಲ್ಪ ಸ್ವಾತಂತ್ರ್ಯ ಪೂರ್ವದ ಇತಿಹಾಸದ ಬಗ್ಗೆ ಇದ್ದರೂ 7 ನೇ ತರಗತಿ ತನಕ ಓದುದ್ದು ನೆನಪಿನಲ್ಲಿರುವುದಿಲ್ಲ. 8 ನೇ ತರಗತಿಯಿಂದ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ ವಿಜ್ಞಾನ , ಗಣಿತದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಸಮಾಜ ವಿಜ್ಞಾನ ಇದ್ದರೂ ಅದು ಹೆಸರಿಗಷ್ಟೇ ಇರುತ್ತದೆ . ಅದನ್ನು ಓದಿ ತಿಳಿದುಕೊಳ್ಳಲು ಬಯಸುವವರು ಅತಿ ವಿರಳ. ಇನ್ನು 10 ನೇ ತರಗತಿಯಾದ ನಂತರ ವಾಣಿಜ್ಯ , ವಿಜ್ಞಾನ ಓದುವವರೇ ಜಾಸ್ತಿ.
ವಿಪರ್ಯಾಸ ಎಂದರೆ ಮೊದಲ ಬಾರಿಗೆ ಹೋಗಿ ಮತ ಚಲಯಿಸಿ ಬರುತ್ತಾರೆ. ಆದರೆ ಅವರಿಗೆ ಸಂಸದ, ಶಾಸಕ ಎಂದರೆ ಗೊತ್ತಿರುವುದಿಲ್ಲ, ತಾವು ಯಾವ ಕ್ಷೇತ್ರಕ್ಕೆ ಮತ ಚಲಾಯಿಸುತ್ತಾರೆ ಎನ್ನುವುದು ಗೊತ್ತಿರುವುದಿಲ್ಲ. ಯಾವ ಚುನಾವಣೆ ನಡೆಯುತ್ತಿದೆ ಎನ್ನುವುದು ಅರಿತಿರುವುದಿಲ್ಲ. ಆದರೆ ಇವರೆಲ್ಲ ತಮ್ಮ ಪಾಠದಲ್ಲಿ ಪರಿಣಿತರಾಗಿರುತ್ತಾರೆ.
ತಾವು ಓದಿ ಸಂಪಾದಿಸಿದರೆ ಸಾಲದು ಸಮಾಜದ ಬಗ್ಗೆಯೂ ತಿಳಿದುಕೊಳ್ಳುವುದು ಎಲ್ಲರ ಕರ್ತವ್ಯ. ಸಮಾಜ ಸೇವೆ ಮಾಡುವುದು ಅಷ್ಟೇ ಮುಖ್ಯ.
ತಮಗೆ ಯಾವಾಗಲೂ ಎಲ್ಲಾ ಕಡೆ ಸ್ವಾತಂತ್ರ್ಯ ಬೇಕು ಅನ್ನುವವರು ಈಗ ಬರಿ 76 ವರ್ಷ ಹಿಂದಷ್ಟೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು. ಸ್ವಾತಂತ್ರ್ಯ ಹೋರಾಟಕ್ಕೆ ಎಷ್ಟೋ ಜನ ಜೀವ ನೀಡಿದ್ದಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಬೇಕು.
ಇದರ ಬಗ್ಗೆ ಪೋಷಕರು , ಶಿಕ್ಷಕರು, ಸಾಮಾಜಿಕ ಜಾಲತಾಣಗಳು ಶ್ರಮ ವಹಿಸಿ ಜಾಗೃತಿ ಮೂಡಿಸಬೇಕು.
ಮಕ್ಕಳು ತಮ್ಮ ಸ್ವಾರ್ಥಕ್ಕಷ್ಟೆ ಗಮನಿಸದೆ ಸಮಾಜದ ಒಳಿತಿನ ಬಗ್ಗೆ ಗಮನಿಸುವಂತೆ ಪ್ರೇರೇಪಿಸಬೇಕು. ಆಗಲೇ ದೇಶವು ಸುಭದ್ರವಾಗಲೂ ಸಾದ್ಯ. ಬರೀ ಆಧುನಿಕ ತಂತ್ರಜ್ಞಾನ ಅಳವಡಿಸಿ ಕೊಳ್ಳುವುದರಿಂದ ದೇಶ ಅಭಿವೃದ್ಧಿ ಹೊಂದಬಹುದು. ಆದರೆ ಅದನ್ನು ಸುಭದ್ರವಾಗಿಡುವುದು ಅಷ್ಟೇ ಮುಖ್ಯ.

Share