ಸಂಪಾದಕೀಯ : ನಗರದ ಮತದಾರರ ನಾಚಿಗೇಡು ಗ್ರಾಮೀಣ ಭಾಗದ ಮತದಾರರನ್ನು ನೋಡಿ ಕಲಿಯಿರಿ

67
Share

ಕರ್ನಾಟಕದಲ್ಲಿ ಇನ್ನೊಂದೆ ದಿನ, ನಾಳೆಯೇ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲೂ ಟೆಕ್ಕಿಗಳದ್ದೇ ಸಾಮ್ರಾಜ್ಯ ಎಂದು ಹೇಳಿಕೊಳ್ಳುವ ಕರ್ನಾಟಕ ರಾಜಧಾನಿಯಲ್ಲೂ ನಾಳೆಯೇ ಚುನಾವಣೆ. ಎಲ್ಲದರಲ್ಲೂ ತಾವು ಬಿಟ್ಟರೆ ಇಲ್ಲ. ತಮ್ನಷ್ಟು ಫಾಸ್ಟ್ ಇಲ್ಲ ಎನ್ನುವ ಬೆಂಗಳೂರಿಗರು ಮತ ಚಲಾಯಿಸುವಲ್ಲಿ ಮಾತ್ರ ಹಿಂದೆಯೆ ಇರುತ್ತಾರೆ.
ಬಹುತೇಕ ಬೆಂಗಳೂರಿಗರಿಗೆ ಮತ ಚಲಾಯಿಸುವುದು ತಮ್ಮ ಪ್ರತಿಷ್ಠೆಗೆ ಕಡಿಮೆ ಎಂದುಕೊಂಡಿರುವಂತಿದೆ. ಈ ವಿಷಯದಲ್ಲಿ ಗ್ರಾಮಗಳಲ್ಲಿ ನೋಡಿ ನಾಚಿಕೊಳ್ಳಬೇಕು.
ನೂರಕ್ಕೆ ನೂರು ಮತದಾನ ನಡೆದು ಗೆದ್ದು ಬಂದರೆ ಅದು ನಿಜವಾದ ಗೆಲುವು. ಟೆಕ್ಕಿಗಳು ಆಗೊಮ್ಮೆ ಈಗೊಮ್ಮೆ ವಿದೇಶಗಳಿಗೆ ಹೋಗಿ ಅಲ್ಲಿರುವ ಅನುಕೂಲ , ವ್ಯವಸ್ಥೆಗಳನ್ನು ನೋಡಿ ಭಾರತದ ಬಗ್ಗೆ ಹಗುರವಾಗಿ ಮಾತನಾಡುವುದೆ ದೊಡ್ಡಸ್ತಿಕೆ ಎಂದುಕೊಂಡಿರುವ ಟೆಕ್ಕಿಗಳು ಕನಿಷ್ಠ ಪಕ್ಷ ತಮ್ಮ ಮತ ಚಲಾಯಿಸಲಿ. ತೆರಿಗೆ ಕಟ್ಟಿ ಬಿಟ್ಟರೆ ದೇಶ ಮುಂದುವರೆದು ಬಿಡುವುದಿಲ್ಲ. ಒಂದು ಸುಸ್ಥಿರವಾದ ಆಡಳಿತ ಇದ್ದರೆ ಮಾತ್ರ ದೇಶ ಸುಭದ್ರವಾಗಿರಲು ಸಾದ್ಯ. ಇಷ್ಟು ಸಾಮಾನ್ಯ ಜ್ಞಾನವು ನಗರವಾಸಿಗಳಿಗಿಲ್ಲ. ತಮಗಾಗುವ ಅನಾನುಕೂಲಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸ್ಥಳೀಯ ಸಮಸ್ಯೆಗಳನ್ನು ಜಗಜ್ಜಾಹುರು ಮಾಡುವ ಇವರುಗಳಿಗೆ ತಾವು ಮತ ಚಲಾಯಿಸಿ ತಮ್ಮ ಸರ್ಕಾರವನ್ನು ಆರಿಸಬೇಕು ಎನ್ನುವುದು ಗೊತ್ತಾಗುವುದಿಲ್ಲವ?
ಪ್ರತಿಯೊಂದು ಅನುಕೂಲಗಳು ನಗರಕ್ಕೆ ಮಾಡಿಕೊಡಬೇಕು. ಆದರೆ ಮತ ಚಲಾಯಿಸಲು ಮಾತ್ರ ಬೇಕಿಲ್ಲ. ತೆರಿಗೆ ಕೊಟ್ಟರೆ ಸಾಲದು ಎಲ್ಲರಿಗಿಂತ ಹೆಚ್ಚು ಲಾಭ ಪಡೆಯುವುದು ನಗರಗಳು, ಮತಗಟ್ಟಗಳಿಗೆ ಬಂದು ಮತ ಚಲಾಯಿಸುವುದಕ್ಕು ಮುಂದೆ ಬನ್ನಿ.


Share