ಸಂಪಾದಕೀಯ : ಸೋಮಣ್ಣನವರು ಮೋದಿಯವರನ್ನು ಭೇಟಿ ಮಾಡಲೇ ಇಲ್ಲ

147
Share

ಲೋಕಸಭಾ ಚುನಾವಣೆ ಮೊದಲ ಹಂತ ಮುಗಿದಿದೆ. ಎರೆಡನೇ ಹಂತದ ಚುನಾವಣೆ ಹತ್ತಿರದಲ್ಲೆ ಇದೆ. ಕರ್ನಾಟಕ ಮತ ಚಲಾಯಿಸಲು ಇನ್ನು 4 ದಿನ ಬಾಕಿ ಇದೆ. ಪ್ರಧಾನಿ ಮೋದಿಯವರು 3 ಬಾರಿ ಕರ್ನಾಟಕದ ಪ್ರಚಾರಕ್ಕೆ ಬಂದು ಇಲ್ಲಿನ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.
ಪ್ರಧಾನಿಯವರು ಮೈಸೂರು , ಮಂಡ್ಯ , ಚಾಮರಾಜನಗರ , ಕೋಲಾರ, ಚಿಕ್ಕಬಳ್ಳಾಪುರ , ಬೆಂ ಗ್ರಾಮಾಂತರ , ಬೆಂ ಕೇಂದ್ರ , ಬೆಂ ಉತ್ತರ , ಬೆಂ ದಕ್ಷಿಣ ಅಭ್ಯರ್ಥಿಗಳ ಪರವಾಗಿ ಸಮಾವೇಶ, ರೋಡ್ ಶೋ ನಡೆಸಿದರು.
ಆದರೆ ಅಶ್ಚರ್ಯದ ಸಂಗತಿ ಎಂದರೆ ಈ ಬಾಗಕ್ಕೆ ಸಮೀಪ ಇರುವ ತುಮಕೂರಿನ ಬಿಜೆಪಿ ಅಭ್ಯರ್ಥಿ ಸೋಮಣ್ಣನವರ ಬಗ್ಗೆ ಪ್ರಧಾನಿ ಮೋದಿಯವರಿಂದ ಒಂದು ಮಾತೂ ಬಂದಿಲ್ಲ. ಸೋಮಣ್ಣನವರು ಪ್ರಧಾನಿಯವರ ಯಾವುದೇ ಕಾರ್ಯಕ್ರಮದಲ್ಲೂ ಹಾಜರಾದಂತೆ ಕಂಡು ಬರಲಿಲ್ಲ. ಇದಕ್ಕೆ ಕಾರಣ ಏನಿರಬಹುದು ? ವಿಧಾನಸಭಾ ಚುನಾವಣೆಯಲ್ಲಿ ತಮ್ಮದಲ್ಲದ ಎರೆಡು ಕ್ಷೇತ್ರಗಳಾದ ಚಾಮರಾಜಪುರ ಹಾಗೂ ವರುಣದಲ್ಲಿ ಸೋಲನುಭವಿಸಿದ್ದರು. ಈಗ ಮತ್ತೆ ತಮ್ಮದಲ್ಲದ ಕ್ಷೇತ್ರವಾದ ತುಮಕೂರಿನಿಂದ ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಹಠ ಮಾಡೇ ಟಿಕೆಟ್ ಗಳಿಸಿದ್ದರು. ಈ ಬಿಜೆಪಿಯ ನಡೆ ಮೋದಿಯವರ ಒಪ್ಪಿಗೆ ಇರಲಿಲ್ಲವೇ ಎನ್ನುವುದು ಎಲ್ಲರಲ್ಲು ಒಂದು ಸಂಶಯ ಮೂಡಿದೆ.


Share