ಜನರೇ ಪಾಠ ಕಲಿಸಿಯಾರು

297
Share

ಹೇಸಿಗೆಯಾಗುತ್ತಿದೆ ಇತ್ತೀಚಿನ ನಮ್ಮ ಕರ್ನಾಟಕ ರಾಜ್ಯದ ರಾಜಕಾರಣಿಗಳ ನಡೆ.
ಕಾಂಗ್ರೆಸ್ ಮತ್ತು ಬಿಜೆಪಿ ಹಠಮಾರಿ ಧೋರಣೆಯಿಂದ ಕಲಾಪಗಳು ಕುಂಠಿತಗೊಂಡು ಕೋಟಿಗಟ್ಟಲೆ ಹಣ ವ್ಯಯವಾಗುತ್ತಿದೆ ಇದು ಕನಿಷ್ಠ ನಮ್ಮ ಹಿರಿಯ ರಾಜಕಾರಣಿಗಳಿಗೆ ತಿಳಿದಿಲ್ಲವೆ?
ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಅವರನ್ನು ವಜಾಗೊಳಿಸುವ ತನಕ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಹರತಾಳ ನಡೆಸುತ್ತಿದೆ.
ಇವರನ್ನು ವಜಾಗೊಳಿಸಿದರೆ ಅವರ ಹೇಳಿಕೆಗಳು ಸರಿ ಹೋಗುವುದೇ? ಕಾಂಗ್ರೆಸ್ ಪಕ್ಷವು ತನ್ನ ಇರುವಿಕೆಯನ್ನು ಸಾಬೀತುಪಡಿಸಿಕೊಳ್ಳಲು ಇಲ್ಲಸಲ್ಲದ ನೆಪಗಳನ್ನು ಒಡ್ಡಿ ಪ್ರತಿಭಟನೆ ಪಾದಯಾತ್ರೆ ಮುಂತಾದವನ್ನು ಕೈಗೊಳ್ಳುತ್ತಿದೆ ಇದು ಜನತೆಯಲ್ಲಿ ಒಂದು ರೀತಿ ಬೇಸರವುಂಟು ಮಾಡಿದೆ.
ಇದು ನಮ್ಮ ಹಿರಿಯ ಕಾಂಗ್ರೆಸ್ ನಾಯಕರಿಗೆ ಅರ್ಥವಾಗುತ್ತಿಲ್ಲವೇ?ಹಿಂದಿನ ತಲೆಮಾರಿನಿಂದ ಕಾಂಗ್ರೆಸ್ಸನ್ನೇ ಬೆಂಬಲಿಸಿಕೊಂಡು ಬರುತ್ತಿರುವ ಕಾಂಗ್ರೆಸ್ನ ಹಿರಿಯ ಕಾರ್ಯಕರ್ತರುಗಳಿಗೂ ಅಭಿಮಾನಿಗಳಿಗೂ ಕೂಡ ಇದು ಬೇಸರ ತಂದಿದೆ.
ಇನ್ನೊಂದೆಡೆ ಲಂಗುಲಗಾಮಿಲ್ಲದ ಭಾರತೀಯ ಜನತಾ ಪಕ್ಷ ಪಕ್ಷದ ರಾಜಕಾರಣಿಗಳ ವಾಗ್ಬಾಣಗಳು.
ತಮ್ಮ ನಾಯಕ ಪ್ರಧಾನಿ ನರೇಂದ್ರ ಮೋದಿ ಇರುವ ಪರಿಸ್ಥಿತಿಯಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಾ ಇಡೀ ದೇಶ ಹಾಗೂ ವಿದೇಶಗಳಲ್ಲಿ ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಆದರೆ ಸ್ಥಳೀಯ ನಾಯಕರುಗಳು ತಮಗೆ ಮನಸೋಇಚ್ಛೆ ಮಾತನಾಡುತ್ತಾ ತಮ್ಮ ನಾಯಕನಿಗೆ ಚ್ಯುತಿ ತರುತ್ತಿದ್ದೇವೆ ಎಂದು ಇವರಿಗೆ ಅನ್ನಿಸುವುದೇ ಇಲ್ಲವೇ?ಇರುವ ಪರಿಮಿತಿಯಲ್ಲಿ ಎಲ್ಲರನ್ನೂ ಸರಿದೂಗಿಸಿಕೊಂಡು ರಾಜ್ಯಾಡಳಿತ ನೀಡುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಹಿರಿಯ ಸದಸ್ಯರು ಉತ್ತಮ ಸಾಥ್ ನೀಡುವ ಬದಲು ಮನಸೋ ಇಚ್ಛೆ ವರ್ತಿಸುತ್ತಾ ನಗೆಪಾಟಲಿಗೆ ಗುರಿಯಾಗಿದ್ದಾರೆ.
ಜನರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಅತ್ಯುತ್ತಮ ವೇದಿಕೆಯಾದ ವಿಧಾನಸಭೆ ವಿಧಾನಪರಿಷತ್ ನ ಸಭಾಂಗಣವನ್ನು ಆಟದ ಮೈದಾನದಂತೆ ಎರಡೂ ಪಕ್ಷದವರು ಆರೋಪ ಪ್ರತ್ಯಾರೋಪ ಮಾಡುತ್ತಾ ಕಾಲಾಹರಣ ಮಾಡಿ ದಿನವೊಂದಕ್ಕೆ 2ಕೋಟಿ ರೂ ಗೂ ಹೆಚ್ಚಿನ ಲುಕ್ಸಾನಿಗೆ ಕಾರಣರಾಗಿದ್ದೀವಿ ಎಂದು ಅನ್ನಿಸುವುದೇ ಇಲ್ಲವೇ ?
ಹಿರಿಯ ರಾಜಕಾರಣಿಗಳೆ ನಿಮ್ಮ ಹಠಮಾರಿ ಧೋರಣೆಯನ್ನು ಕೈ ಬಿಡಿ.
ಜನರ ಸಮಸ್ಯೆಗಳಿಗೆ ಸ್ಪಂದಿಸಿ ಇಲ್ಲದಿದ್ದರೆ ಜನರೇ ನಿಮ್ಮ ವಿರುದ್ಧ ತಿರುಗಿ ಬೀಳುವ ಕಾಲ ಸನಿಹ ವಾಗಬಹುದು.


Share