ಜೀವ | ಜೀವನ

1905
Share

ನಾಲಕ್ ಸಾವಿರ ರೂಪಾಯಿ ಕೊವಿಡ್ ಟೆಸ್ಟಿಗೆ ಆದರೆ.ನಮಗೆ ಬರೋದು rs.15000 ಸಂಬಳ ಮಾತ್ರ ನಾವು ಹೇಗೆ ಟೆಸ್ಟ್ ಮಾಡಿಸಿ ಬೆಂಗಳೂರಿನಲ್ಲಿ ಜೀವನ ನಡೆಸುವುದು.

ಈ ಸರ್ಕಾರದ ಸಹವಾಸವೇ ಸಾಕು ನಾವು ನಮ್ಮ ಊರುಗಳಿಗೆ ತೆರಳಿ ಗಂಜಿ ಕುಡಿದರೂ ಪರವಾಗಿಲ್ಲ ನೆಮ್ಮದಿಯಾಗಿ ಜೀವನ ನಡೆಸುತ್ತೇವೆ.

12 ಆಸ್ಪತ್ರೆ ಸುತ್ತಿದ ಹೆಂಗಸರು ಒಬ್ಬರು ಚಿಕಿತ್ಸೆ ಸಿಗದೇ ಬೆಂಗಳೂರಿನಲ್ಲಿ ಉಸಿರಾಟದ ತೊಂದರೆಯಿಂದ ನರಳಿ ಅಸುನೀಗಿದ್ದಾರೆ.ಯಾವ ಆಸ್ಪತ್ರೆಯಲ್ಲಿ ಕೇಳಿದರು ವ್ಯವಸ್ಥೆಯಿಲ್ಲ ,ಬಿಬಿಎಂಪಿ ಇಂದ ಲೆಟರ್ ತೊಗೊಂಡ್ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದಾರೆ ಇದು ಯಾವ ಸೀಮೆಯ ಸರ್ಕಾರ ಇಂತಹ ಬೆಂಗಳೂರಿನಲ್ಲಿ ನಾವು ಹೇಗೆ ಜೀವನ ಮಾಡುವುದು ನಮಗೆ ಎಲ್ಲಿದೆ ಸುರಕ್ಷತೆ ನಾವು ಬೆಂಗಳೂರನ್ನು ಬಿಡುತ್ತಿದ್ದೇವೆ ಈ ಸರ್ಕಾರದ ಸಹವಾಸವೇ ಬೇಡ ನಮಗೆ ನಾವು ನಮ್ಮ ಹಳ್ಳಿಯಲ್ಲಿ ಜಮೀನು ನೋಡಿಕೊಂಡು ಜೀವನ ನಡೆಸುತ್ತೇವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಾವು ಏತಕ್ಕೆ ಟೆಸ್ಟಿಗೆ ಹಾಗೂ ಚಿಕಿತ್ಸೆಗೆ ನಮ್ಮ ಹಣ ಕೊಡಬೇಕು ಇದು ಸರ್ಕಾರದ ಸಂಪೂರ್ಣ ವೈಫಲ್ಯ ಅವರ ಒಂದು ನೆಗ್ಲೆಟ್ ನಿಂದ ವೈರಸ್ ಈ ರೀತಿ ಹರಡುತ್ತಿರುವುದು.ಸರ್ಕಾರ ಬಿಟ್ಟಿರುವ ಹಣ ನಮಗೆ ಕಟ್ಟುವ ಶಕ್ತಿ ಇಲ್ಲ ನಾವು ಹೇಗೆ ಇಲ್ಲಿ ಜೀವನ ಮಾಡುವುದು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮನೆ ಬಾಡಿಗೆ ಕಟ್ಟಲು ನಮಗೆ ಹಣವಿಲ್ಲ, ಸೋಂಕು ಬಂದರೆ ನಾವು ಹೇಗೆ ಚಿಕಿತ್ಸೆಗೆ ಇಷ್ಟೊಂದು ಹಣವನ್ನು ಹೊಂದಿಸುವುದು ನೆನೆಸಿದರೆ ಭಯವಾಗುತ್ತದೆ. ಆದ್ದರಿಂದ ನಾವು ಊರನ್ನು ಬಿಡುತ್ತಿದ್ದೇವೆ.

ಈ ಎಲ್ಲಾ ಸಾರ್ವಜನಿಕರ ಪ್ರಶ್ನೆಗಳನ್ನು ಹಾಗೂ ವಿನಂತಿಗಳನ್ನು ಹಾಗೂ ನಿಂದನೆಗಳಿಗೆ ಸರ್ಕಾರ ಉತ್ತರ ಕೊಡಲೇಬೇಕೆಂದು ಹಾಗೂ ಸರ್ಕಾರ ಈ ಎಲ್ಲಾ ಸಮಸ್ಯೆಗಳಿಗೆ ಬೇಗನೆ ಪರಿಹಾರ ಕಂಡುಕೊಳ್ಳಬೇಕೆಂದು ಮೈಸೂರು ಪತ್ರಿಕೆ ಸರ್ಕಾರಕ್ಕೆ ಕಳಕಳಿಯಿಂದ ಪ್ರಾರ್ಥಿಸುತ್ತಿದೆ.


Share