ಜೂ.10ರಂದು ಮೈಸೂರಿನಲ್ಲಿ ʼಯೂರೋ ಪ್ರೀಮಿಯರ್‌ ಲೀಗ್‌ʼ

64
Share

ಕರ್ನಾಟಕ ಯೂರಾಲಜಿ ಅಸೋಸಿಯೇಶನ್‌ನಿಂದ ಜೂ.10ರಂದು ಮೈಸೂರಿನಲ್ಲಿ ʼಯೂರೋ ಪ್ರೀಮಿಯರ್‌ ಲೀಗ್‌ʼ

ಮೈಸೂರು: ಕರ್ನಾಟಕ ಯೂರಾಲಜಿ ಅಸೋಸಿಯೇಶನ್‌ ವತಿಯಿಂದ ಇದೇ ಮೊದಲ ಬಾರಿಗೆ KUA-UPL (ಯೂರೋ ಪ್ರೀಮಿಯರ್‌ ಲೀಗ್‌) ಅನ್ನು ಆಯೋಜಿಸಲಾಗಿದೆ. ಜೂನ್‌ 10ರಂದು ಮಹಾರಾಜ ಮೈದಾನ ಹಾಗೂ ರೈಲ್ವೇ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಕರ್ನಾಟಕ ಯೂರಾಲಜಿ ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ.ನರೇಂದ್ರ ಜೆ.ಬಿ. ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ನಡೆಯುತ್ತಿರುವ ಯೂರೋ ಪ್ರೀಮಿಯರ್‌ ಲೀಗ್‌ ಅನ್ನು ಜೂನ್‌ 10ರಂದು ಬೆಳಿಗ್ಗೆ 8ಕ್ಕೆ‌ ಮೈಸೂರಿನ ಖ್ಯಾತ Urologist ವೈದ್ಯರು ಉದ್ಘಾಟಿಸಲಿದ್ದಾರೆ. ಇಂತಹ ವಿಭಿನ್ನ ಕಾರ್ಯಕ್ರಮ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಇದು T10 ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಮೆಂಟ್‌ ಆಗಿರಲಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಯೂರಾಲಜಿಸ್ಟ್‌ ಅಸೋಸಿಯೇಶನ್‌ನ ಕೌನ್ಸಿಲ್‌ ಸದಸ್ಯ ಡಾ.ಸಚಿನ್‌ ಧಾರವಾಡ್‌ಕರ್‌ ಮಾತನಾಡಿ, ಕರ್ನಾಟಕದಾದ್ಯಂತ ಇರುವ ಸುಮಾರು 75 ಯೂರಾಲಜಿಸ್ಟ್‌ಗಳು ಹಾಗೂ ಕ್ರೀಡಾಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಮೈಸೂರು, ಬೆಂಗಳೂರು ಕ್ಯಾಪಿಟಲ್, ಸೆಂಟ್ರಲ್‌ ಸೂಪರ್‌ ಕಿಂಗ್ಸ್‌, ನಾರ್ತ್‌ ಕರ್ನಾಟಕ ಜೇಂಟ್ಸ್‌ ಹಾಗೂ ವೆಸ್ಟರ್ನ್‌ ವಾರಿಯರ್ಸ್‌ ಎಂಬ ಐದು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್‌ 10ರಂದು ಸಂಜೆ 7.30ಕ್ಕೆ ಮೈಸೂರು ಎಕ್ಸ್ಪ್ರೆಸ್ ಎಂದೇ ಖ್ಯಾತಿ ಪಡೆದಿರುವ ಭಾರತ ತಂಡದ ಮಾಜಿ ಆಟಗಾರ ಶ್ರೀ ಜಾವಗಲ್ ಶ್ರೀನಾಥ್ ಅವರ ಉಪಸ್ಥಿತಿಯಲ್ಲಿ ನಡೆಯುತ್ತದೆ  ಎಂದು ತಿಳಿಸಿದರು.

ಕರ್ನಾಟಕ ಯೂರಾಲಜಿಸ್ಟ್‌ ಅಸೋಸಿಯೇಶನ್‌ನ ಸದಸ್ಯ ಡಾ. ಕುಮಾರ್ ರಾಜೇ ಅರಸ್  ಮಾತನಾಡಿ, ಪಂದ್ಯಾವಳಿಯಲ್ಲಿ 3 ಓವರ್‌ಗಳ ಪವರ್‌ ಪ್ಲೇ ಇರುತ್ತದೆ. ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ಇಲ್ಲಿ ಬಳಸಲಾಗುತ್ತದೆ. ಒಟ್ಟು 9 ಪಂದ್ಯಗಳು ನಡೆಯಲಿದ್ದು, 4 ತಂಡಗಳು ನಾಕ್‌ ಔಟ್‌ ಹಂತಕ್ಕೆ ಬರುತ್ತವೆ. ಪ್ರತಿ ತಂಡಕ್ಕೆ ಕನಿಷ್ಟ 3 ಪಂದ್ಯಗಳನ್ನು ಆಡಲು ಅವಕಾಶ ಸಿಗುತ್ತದೆ. ಅಂಪೈರ್‌ಗಳು, ಸ್ಕೋರರ್‌ಗಳು ಹಾಗೂ KSCA ನಿಯಮದ ಪ್ರಕಾರ ಪಂದ್ಯ ನಡೆಯುತ್ತದೆ ಎಂದು ವಿವರಿಸಿದರು.


Share