ಜೆಎಸ್‌ಎಸ್ ಸ್ಪಿರಿಚ್ಯುಯಲ್ ಮಿಷನ್- ಅಮೆರಿಕ ತಾಯ್ಯಾಡಿನ ಪ್ರೇಮ ಶ್ಲಾಘನೀಯ

231
Share

ಜೆಎಸ್‌ಎಸ್ ಸ್ಪಿರಿಚ್ಯುಯಲ್ ಮಿಷನ್ ಗೇಥರ್ಸ್‌ಬರ್ಗ್ , ಮೆರಿಲ್ಯಾಂಡ್ ,

ಅಮೆರಿಕ ತಾಯ್ಯಾಡಿನ ಪ್ರೇಮ ಶ್ಲಾಘನೀಯ ಕನ್ನಡಿಗರು ವಿವಿಧ ಕಾರಣಗಳಿಂದ ಅಮೆರಿಕದಲ್ಲಿ ನೆಲೆಸಿದ್ದರೂ ತಾಯಾಡಿನ ಸಂಸ್ಕೃತಿಯನ್ನು ಮರೆಯದೇ ಉಳಿಸಿ – ಬೆಳೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು ಎಂದು ಶ್ರೀ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಸೆಪ್ಟೆಂಬರ್ 17 ರಂದು ಅಮೆರಿಕದ ಷಿಕಾಗೋದಲ್ಲಿ ಏರ್ಪಡಿಸಿದ್ದ ವಿದ್ಯಾರಣ್ಯ ಕನ್ನಡ ಕೂಟದ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ತಿಳಿಸಿದರು . ನಮ್ಮತನವನ್ನು ಮರೆಯದೇ ಕನ್ನಡಿಗರೆಲ್ಲರೂ ಒಂದೆಡೆ ಸೇರಿದಾಗ ಇಲ್ಲಿಯೂ ಒಂದು ಕರ್ನಾಟಕವೇ ರೂಪುಗೊಂಡಂತೆ ಭಾಸವಾಗುತ್ತದೆ . ಕನ್ನಡಕ್ಕೆ 1500 ವರ್ಷಗಳ ಇತಿಹಾಸವಿದೆ . ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು . ಜಗತ್ತಿನ ಅತಿಹೆಚ್ಚು ಮಾತನಾಡುವ ಭಾಷೆಗಳಲ್ಲಿ ಕನ್ನಡ ಕೂಡ ಒಂದಾಗಿದೆ . ಅಮೆರಿಕದಲ್ಲಿ ಎಲ್ಲೆಡೆ ಕನ್ನಡ ಸಂಘಗಳಿವೆ . ಅವುಗಳೆಲ್ಲದರ ಧೈಯ ನಾವೆಲ್ಲ ಒಂದೇ ಎಂಬುದಾಗಿದೆ . ವಿನೋಭಾ ಭಾವೆಯವರು ಕನ್ನಡ ಲಿಪಿಯನ್ನು ರಾಣಿ ಲಿಪಿ ಎಂದು ಕರೆದರು . ಕನ್ನಡ ಭಾಷೆ ಬೆಳೆದು ಬಂದ ರೀತಿಯೇ ವಿಶಿಷ್ಟವಾಗಿದೆ . ಹಳಗನ್ನಡ , ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮೂರು ಹಂತಗಳಲ್ಲಿ ಇದರ ಬೆಳವಣಿಗೆಯನ್ನು ಗುರುತಿಸಲಾಗುತ್ತದೆ . ಕನ್ನಡ ಮೃದು ಮಧುರವಾದ ಭಾಷೆ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ವಚನಕಾರರು ಮತ್ತು ದಾಸರಿಗೆ ಸಲ್ಲುತ್ತದೆ . ಕನ್ನಡ ಸಾಮಾನ್ಯರ ಭಾಷೆ , ಭಗವಂತನಲ್ಲಿ ತನ್ನನ್ನು ಸಮರ್ಪಣೆ ಮಾಡಿಕೊಳ್ಳಲು ಕನ್ನಡ ಭಾಷೆ ನೆರವಾಯಿತು . ಕನ್ನಡದ ರಾಜಮನೆತನಗಳಲ್ಲಿ ಒಂದಾದ ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಮಾರ್ಗದರ್ಶಕರಾದ ವಿದ್ಯಾರಣ್ಯರ ಹೆಸರಿನಲ್ಲಿ ಕನ್ನಡ ಸಂಘವನ್ನು ಸ್ಥಾಪಿಸಿರುವುದು ವಿಶೇಷ . ಅದು ಐವತ್ತು ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ . ಅದು ಹೀಗೆಯೇ ಕನ್ನಡದ ಕಂಪನ್ನು ಇನ್ನೂ ಹೆಚ್ಚುಹೆಚ್ಚು ಪಸರಿಸುತ್ತಿರಲಿ ಎಂದು ಹಾರೈಸಿದರು . ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳು ಭಾರತದ ಸಂಸ್ಕೃತಿಯ ಪತಾಕೆಯನ್ನು ಸ್ವಾಮಿ ವಿವೇಕಾನಂದರು ಹಾರಿಸಿದ ಜಾಗದಲ್ಲಿ ವಿದ್ಯಾರಣ್ಯ ಕನ್ನಡ ಕೂಟ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ . ಅನೇಕ ರೀತಿಯ ವಿಶೇಷವಾದ ಕೆಲಸಗಳನ್ನು ವಿದ್ಯಾರಣ್ಯ ಕನ್ನಡ ಕೂಟ ಮಾಡುತ್ತಿದೆ . ಅಮೆರಿಕದ ನೆಲದಲ್ಲಿ ಕನ್ನಡದ ಡಿಂಡಿಮವನ್ನು ಬಾರಿಸುವ ಕೆಲಸವನ್ನು ಇಲ್ಲಿ ಕನ್ನಡ ಸಂಘಗಳು ಮಾಡಿಕೊಂಡು ಬರುತ್ತಿವೆ . ಕನ್ನಡದ ಬೆಳವಣಿಗೆಗೆ ವಿಶೇಷವಾದ ಕಾಣಿಕೆಯನ್ನು ನೀಡುತ್ತಿವೆ . ಮಧ್ವಾಚಾರ್ಯ , ಶಂಕರಾಚಾರ್ಯ ಮತ್ತು ಬಸವಣ್ಣನಂತಹವರ ಅನೇಕ ಸಾಧು . ಸಂತರ ಶರಣರ ಕಾರ್ಯಕ್ಷೇತ್ರವಾಗಿದ್ದು ಕರ್ನಾಟಕ ಎಂಬುದು ಹೆಮ್ಮೆಯ ವಿಷಯ ಎಂದು ಹೇಳಿದರು . ಖ್ಯಾತ ಗಾಯಕರಾದ ಶ್ರೀ ರಾಜೇಶ್ ಕೃಷ್ಣನ್‌ರವರು ಈ ಸಂದರ್ಭದಲ್ಲಿ ಒಂದರೆಡು ಗೀತೆಗಳನ್ನು ಪ್ರಸ್ತುತಿ ಪಡಿಸಿದರು . ಕೂಟದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಭಟ್ಟ , ಉಪಾಧ್ಯಕ್ಷರಾದ ಶ್ರೀಮತಿ ಆಶಾ ಗುರುದತ್ತ ಉಪಸ್ಥಿತರಿದ್ದರು . ಸಾಖ್ಯಂ ಕಜೆ ಪ್ರಾರ್ಥನೆ ಸಲ್ಲಿಸಿದರು . ಸೋಹಂ ಕಜೆ ಪಕ್ಕವಾದ್ಯ ಸಹಕಾರ ನೀಡಿದರು . ಶ್ರೀಮತಿ ರಮ್ಯಾ ರಾವ್ ಕಾರ್ಯಕ್ರಮ ನಿರೂಪಿಸಿದರು .

ಖ್ಯಾತ ಗಾಯಕರಾದ ಶ್ರೀ ರಾಜೇಶ್ ಕೃಷ್ಣನ್‌ರವರು ಈ ಸಂದರ್ಭದಲ್ಲಿ ಒಂದರೆಡು ಗೀತೆಗಳನ್ನು ಪ್ರಸ್ತುತಿ ಪಡಿಸಿದರು . ಕೂಟದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಭಟ್ಟ , ಉಪಾಧ್ಯಕ್ಷರಾದ ಶ್ರೀಮತಿ ಆಶಾ ಗುರುದತ್ತ ಉಪಸ್ಥಿತರಿದ್ದರು . ಸಾಖ್ಯಂ ಕಜೆ ಪ್ರಾರ್ಥನೆ ಸಲ್ಲಿಸಿದರು . ಸೋಹಂ ಕಜೆ ಪಕ್ಕವಾದ್ಯ ಸಹಕಾರ ನೀಡಿದರು . ಶ್ರೀಮತಿ ರಮ್ಯಾ ರಾವ್ ಕಾರ್ಯಕ್ರಮ ನಿರೂಪಿಸಿದರು .

Share