ಮೈಸೂರು- ಆದರ್ಶ ರಾಜಕಾರಣಿ ಮತ್ತೊಮ್ಮೆ ಆರಿಸಿ; ಯಾರನ್ನ ?

232
Share

ಆದರ್ಶ ರಾಜಕಾರಣಿ ಮತ್ತೊಮ್ಮೆ ಆರಿಸಿ

ಕ್ಷಷ್ಣರಾಜ ಕ್ಷೇತ್ರದ ಮೋದಿಯುಗ ಉತ್ಸವ ಎರಡನೇ ದಿನ ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆಶಯ

ಮೈಸೂರು: ರಾಜ್ಯದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಮೋದಿಯವರ ಯೋಜನೆಯನ್ನು ಗುರುತಿಸಿ ಅನುಷ್ಠಾನ ಗೊಳಿಸುತ್ತಿರುವ ಕ್ಷೇತ್ರದ ಯಾವುದಾದರೂ ಇದ್ದರೆ ಅದು ರಾಮದಾಸ್ ಅವರ ಕೃಷ್ಣರಾಜ ಕ್ಷೇತ್ರವಾಗಿದೆ. ಇಂತಹ ಆದರ್ಶ ರಾಜಕಾರಣಿಯನ್ನ ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಸಮಾಜ ಕಲ್ಯಾಣ ಸಚಿವ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ನಡೆಯುತ್ತಿರುವ ‘ ಮೋದಿ ಯುಗ ಉತ್ಸವ್-೨೨’ ಕಾರ್ಯಕ್ರಮದ ಎರಡನೇ ದಿನದಂದು ಆರು ಇಲಾಖೆಗಳ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು. ರಾಜ್ಯದ 224 ಕ್ಷೇತ್ರಗಳಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಹೆಚ್ಚಾಗಿ ಬಡವರನ್ನು ಗುರುತಿಸಿ ಅವರಿಗೆ ಪ್ರಧಾನಿ ನರೇಂದ ಮೋದಿ ಅವರ ಆಶಯದಡಿ ಕೆಲಸ ಮಾಡುತ್ತಿದ್ದೆ ಎಂದರೆ ಅದು ಕೃಷ್ಣರಾಜ‌ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ.

ದೀನ ದಯಾಳ್ ಅವರ‌ ಮಾತಿನಂತೆ ರಾಜಕಾರವನ್ನು ವ್ರತ ವಾಗಿ ಸ್ವೀಕರಿಸುವವರು ನಮ್ಮ ದೇಶದಲ್ಲಿ ಕಡಿಮೆ, ಅವರ ಹೇಳಿಕೆಯಂತೆ ಶಾಸಕ ಎಸ್.ಎ ರಾಮದಾಸ್ ಅವರು ರಾಜಕೀಯವನ್ನು ವ್ರತವಾಗಿ ಸ್ವೀಕರಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.
ನೂತನ ವಿದ್ಯಾರ್ಥಿ ನಿಲಯ: ದೀನ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಮೈಸೂರಿನಲ್ಲಿ ಸಾವಿರಕ್ಕೂ ಹೆಚ್ಚಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಗಳನ್ನು ತೆರೆಯಲಾಗುವುದು.

ರಾಜ್ಯದಲ್ಲಿ ಒಟ್ಟು 2239 ಬಿಸಿಎಂ ಹಾಸ್ಟೆಲ್, 1860 ಪರಿಶಿಷ್ಟ ಜಾತಿ ಹಾಸ್ಟೆಲ್, 830 ವಸತಿ ಶಾಲೆಗಳಿವೆ, ಆದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರೆತೆ ಇದೆ, ಇದಕ್ಕಾಗಿಯೇ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಷುವರಿ 25% ಹಾಜರಾತಿ ನೀಡುವುದಕ್ಕೆ ಆದೇಶ ನೀಡಿದ್ದಾರೆ.
ದೀನ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ವ್ಯವಸ್ಥೆ ನೀಡುವುದಕ್ಕೆ ಸರ್ಕಾರ ಮುಂದಾಗಿದೆ, ಸ್ವಂತ ಕಟ್ಟಡ ದೊರೆಯದಿದ್ದರೂ ಬಾಡಿಗೆ ಕಟ್ಟಡದಲ್ಲಿ ಆರಂಭಿಸುವುದಕ್ಕೆ ನಿರ್ಧರಿಸಲಾಗಿದೆ ಎಂದರು
ಸಮಾಜದಲ್ಲಿ ಸರ್ವರಿಗೂ ಸಮಾನತೆ ದೊರೆಯಲು ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ, ಮುಂದಿನ ಜನಾಂಗವೂ ಅವರನ್ನು ಸ್ಮರಿಸಬೇಕೆನ್ನು ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಯಾವ ಯಾವ ದೇಶದಲ್ಲಿ ತಂಗಿರುವ, ಉಪನ್ಯಾಸ ಮಾಡಿರುವ ಪುಸ್ತಕಗಳು ಹಾಗೂ ಅವರ ಕೆಲವು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವ ಯೋಜನೆ ಜಾರಿಗೆ ತಂದರು.
ಅಂಬೇಡ್ಕರ್ ಅವರು 48 ಮಂದಿ ಸ್ವಾತಂತ್ರ್ಯ ಹೋರಾಟಗಾರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡುವಾಗ ತಮ್ಮ ಪತ್ನಿ ನಿಧನದ ಸುದ್ದಿ ಬಂದರೂ ವಾದ ಮುಂದುವರೆಸಿದ್ದನ್ನು ಕಂಡು ನ್ಯಾಯಾಧೀಶರು ಮರಣದಂಡನೆಗೆ ಬದಲಾಗಿ 48 ಮಂದಿಯೂ ನಿರಪರಾಧಿಗಳೆಂದು ಆದೇಶ ನೀಡಿದರು ಎಂಬುದನ್ನು ಸ್ಮರಿಸಿದರು.

ರಾಜ್ಯದ ನಾನಾ ಪ್ರತಿಷ್ಠಿತ ಶಾಲೆಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಇದಕ್ಕೆ 36 ಕೋಟಿ ಖರ್ಚು ಮಾಡಿ ಮಾಡುತ್ತಿದ್ದೇವೆ. ಇದರಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುವವರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು, ವಿಧವೆಯರ ಮಕ್ಕಳು, ಒಳಚರಂಡಿ ಕಾರ್ಮಿಕರ ಮಕ್ಕಳು, ಏಡ್ಸ್ ಪಿಡೀತರ ಮಕ್ಕಳು ಸೇರಿ ಹೀಗೆ ನಾನಾ ಸ್ತರದಲ್ಲಿ ಹಿಂದುಳಿದ ಮಕ್ಕಳು ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಭಾರತ ಬದಲಾಗುತ್ತಿದೆ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ ಎಂದರು.
ಭಾರತ ಬಲಿಷ್ಠ ಹೇಗೆ ಆಗುತ್ತಿದೆ ಗೊತ್ತಾ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತ ಬಲಿಷ್ಠ ವಾಗುತ್ತಿದೆ. ಇದರಿಂದ ವಿಶ್ವಮಟ್ಟದಲ್ಲಿ ಭಾರತೀಯರಿಗೆ ಗೌರವವೂ ಹೆಚ್ಚುತ್ತಿದೆ.
ಉಕ್ರೇನ್-ರಷ್ಯಾ ಯುದ್ದದ ವೇಳೆ
ಉಕ್ರೇನ್ ನ ಬಲ್ಕನ್ ನಿಂದ ನನಗೆ ಒಬ್ಬ ಯುವತಿ ಕರೆ ಮಾಡಿದ ವೇಳೆ ನಾವು ಅವಳನ್ನು ಭಾರತಕ್ಕೆ ಕರೆತರಲು ಯಶಸ್ವಿಯಾಗುತ್ತೇವೆ, ನಂತರ ಆ
ವೈದ್ಯಕೀಯ ವಿದ್ಯಾರ್ಥಿ ಒಂದು ದಿನ ನನ್ನ ಮನೆಗೆ ಬಂದು, ಉಕ್ರೇನ್ ದೇಶದಲ್ಲಿ ಒಟ್ಟು 18 ಸಾವಿರ ವಿದ್ಯಾರ್ಥಿಗಳಿದ್ದರು. ಬಂಕರ್ ಗಳಿಂದ ಹೊರ ಬರುವ ವೇಳೆ ಭಾರತದ ತ್ರಿವರ್ಣ ಧ್ವಜ ಹಿಡಿದು ಬರಬೇಕೆಂದು ರಾಯಭಾರಿ ಕಚೇರಿಯಿಂದ ಸಂದೇಶ ನೀಡಲಾಯಿತು, ತ್ರಿವರ್ಣ ಧ್ವಜವನ್ನು ಹಿಡಿದು ನಾಲ್ಕು ಗಂಟೆಗಳ ಕಾಲ ನಡೆದುಕೊಂಡು ನಾವು ಗಡಿ ತಲುಪಿದೆವು ಆ ವೇಳೆ ರಷ್ಯಾದ ಸೈನಿಕರು ಬಂದೂಕುಗಳನ್ನು ಕೆಳಗಿಟ್ಟು ನಮ್ಮನ್ನು ಕಳುಹಿಸಿಕೊಟ್ಟರು ಎಂದು ಆ ಪರಿಸ್ಥಿತಿಯಲ್ಲಿ ಭಾರತದವರನ್ನು ನೋಡಿಕೊಂಡ ರೀತಿಗೆ ನಮ್ಮ‌ದೇಶಕ್ಕೆ ವಿಶ್ವಮನ್ನಣೆ ದೊರೆಯುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಳು ಎಂದು ಸ್ಮರಿಸಿದರು.

2014 ರಲ್ಲಿ ಸಮರ್ಥ, ಸ್ವಾಭಿಮಾನಿ, ಶಕ್ತಿಯುತ, ಸಮೃದ್ಧ ಭಾರತ ಮಾಡುತ್ತೇವೆಂದು ಗಲ್ಲಿ ಗಲ್ಲಿಯಲ್ಲಿ ಭಾಷಣ ಮಾಡಿದ್ದೇವು. ಆ ವೇಳೆಯಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಎನ್ನುವುದು ಬಿಟ್ಟರೆ ಅವರ ಬಗ್ಗೆ ತಿಳಿದಿರಲಿಲ್ಲ, ಆದರೆ ನಮ್ಮೆಲರ ಪರಿಶ್ರಮದ ಫಲವಾಗಿ ಅವರ ಪ್ರಧಾನಿಯಾಗಿ ಆಯ್ಕೆಯಾದರು, ಬಳಿಕ‌ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಬೇಳೆ ಅವರು ನಾನು ಪ್ರಧಾನಿಯಾಗಿ ಈ ಕೆಲ‌ಸ ಮಾಡುವುದಿಲ್ಲ, ಭಾರತದ ಸೇವಕನಾಗಿ ಕೆಲಸ‌ ಮಾಡುತ್ತಿದ್ದೇನೆ ಎಂದರು ಆಗಲೇ ನಮಗೆ ಬದಲಾಗುತ್ತಿರುವ ಭಾರತದ ಭವಿಷ್ಯ ಕಾಣಿಸಿತು ಎಂದು ಹೇಳಿದರು.

ದೇಶವೇ ಬದಲಾಗುತ್ತಿರುವ ವೇಳೆಯಲ್ಲಿ ನಾವು ಹಾಗೂ ಅಧಿಕಾರಿಗಳು ಬದಲಾಗಬೇಕಿದೆ, ನಮ್ಮ‌ ಆಡಳಿತ ವೈಖರಿ ಬದಲಾಗಬೇಕಿದೆ ಎಂದರು.
ರಾಜ್ಯದಲ್ಲಿ 2 ಕೋಟಿಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬದವರಿದ್ದಾರೆ. ಅವರೆಲ್ಲರೂ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು, ಆ ಕುಟುಂಬದ ಮಕ್ಕಳು ವೈದ್ಯರ, ಇಂಜಿನಿಯರ್ ಗಳಾಗಬೇಕು, ಅವರಿಗೆ ತಲುಪಬೇಕಿರುವ ಪ್ರತಿ ರೂಪಾಯಿಗನ್ನು ನಾವು ತಲುಪಿಸಬೇಕಿದೆ.
ಇಲಾಖೆಗಳ ಕಾರ್ಯವೈಖರಿ ಸುಧಾರಿಸಬೇಕಿದೆ, ಅದರ ಕಡೆ ಹೆಚ್ಷಿನ ಗಮನ ಹರಿಸಲಾಗುವುದು ಎಂದು ಹೇಳಿದರು.
ಶಾಸಕ ಹಾಗೂ ಮಾಜಿ ಸಚಿವರಾದ ಶ್ರೀ ಎಸ್.ಎ.ರಾಮದಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೂರನೇ ವರ್ಷದ ಮೋದಿಯುಗ ಉತ್ಸವದಲ್ಲಿ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನ ಮತ್ತು ಯೋಜನೆಗಳ ವಿಚಾರವನ್ನು ಜನ ಸಾಮಾನ್ಯರಿಗೆ ಅರಿವು ಮೂಡಿಸುವಂತಹ ಈ ಕಾರ್ಯಕ್ರಮದಲ್ಲಿ ಈ ಬಾರಿ ನಾವು ಒಂದು ವರ್ಷಗಳ ಚಿಂತನೆಯಲ್ಲ. ದೇಶದ 75 ನೇ ಅಮೃತ ಕಾಲ್ ಸೇ ಕಾರ್ಯಕ್ರಮದಲ್ಲಿ 100 ನೇ ವರ್ಷದ ವರೆಗೆ ಎಲ್ಲಾ ಸಮಾಜದ ಅಭಿವೃದ್ಧಿ ಆಗಬೇಕೆಂಬ ದೃಷ್ಟಿಯಿಂದ ಚಿಂತನೆಯ ದೂರದೃಷ್ಟಿಯ ಕಲ್ಪನೆಯನ್ನು ಇಟ್ಟುಕೊಂಡು ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದರು.
ಅದರ ಜೊತೆಯಲ್ಲಿ ಈಬಾರಿಯ ಶಿರ್ಷಿಕೆ ಇರುವುದು ‘ ತಾಯಿ ಗರ್ಭದಿಂದ ಭೂ ಗರ್ಭದವರೆಗೆ’ ಶಾಂತಿ ನೀಡುವ ವ್ಯವಸ್ಥೆಯನ್ನು ನಿರ್ಮಿಸಬೇಕೆಂದು ನರೇಂದ್ರ ಮೋದಿಯವರ ಚಿಂತನೆಯನ್ನು ಅನುಷ್ಠಾನ ಮಾಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂತಹ ಒಂದು ಕಾರ್ಯಕ್ರಮವನ್ನು ಅಪರೂಪದ ಮುಖ್ಯಮಂತ್ರಿ ಹಾಗೂ ರಾಷ್ಟ್ರದ ರಾಜಕಾರಣಿ ಒಂದು ದೊಡ್ಡ ಸಂದೇಶ ನೀಡಿ, ಮೋದಿ ಯುಗ ಪುರುಷ, ಅವರ ಆರೋಗ್ಯ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ದೇಶದ ಪ್ರಗತಿ ಕಾಣಬಹುದು ಎಂದರು. ಮುಂದಿನ ಭಾರತಕ್ಕೆ ಭವಿಷ್ಯ ಕೊಡುವ ಗರ್ಭಿಣಿ ಸ್ತ್ರೀಯರಿಗೆ 600 ಕ್ಕೂ ಹೆಚ್ಚಿನ ಗರ್ಬೀಣಿ ಸ್ತೀಯರಿಗೆ ಮಾತೃವಂದನಾ ಕಾರ್ಯಕ್ರಮದಡಿ ಯಲ್ಲಿ ಮಡಿಲು ತುಂಬಿ ಆರೋಗ್ಯದ ಕಿಟ್ ನೀಡಲಾಯಿತು. ಮುಂದಿನ ಒಂದು ವರ್ಷದಲ್ಲಿ ‘ಶೂನ್ಯ ತಾಯಿ ಮಗು ಸಾವಿನ ಕ್ಷೇತ್ರ’ ಮಾಡುವ ಕ್ರಾಂತಿಗೆ ಚಾಲನೆ ನೀಡಿದ್ದೇವೆ. ಮುಂದಿನ ಮೋದಿ ಯುಗ ಉತ್ಸವದವರೆಗೆ ಒಂದೇ ಒಂದು ಮಗು ಅಥವಾ ಗರ್ಭಿಣಿ ಸಾವನ್ನಪ್ಪದಂತೆ ನೋಡಿಕೊಳ್ಳಲಾಗುವುದು. ಇಂದಿಗೂ ಶಾಸಕರ ಭವನದಲ್ಲೇ ವಾಸಿಸುವ ಮೂಲಕ ಸಾಮಾನ್ಯರಲ್ಲಿ ಸಾಮಾನ್ಯನಂತಿರುವ ಸಚಿವರಾಗಿದ್ದಾರೆ. ಚುನಾವಣೆ ಎಂದಾಕ್ಷಣ ಗ್ರಾ.ಪಂ. ಸದಸ್ಯರಿಂದ ಎಲ್ಲರೂ ಕೋಟಿ ಕೋಟಿ ಹಣ ಖರ್ಚು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸ್ನೇಹಿತರು ಕೊಟ್ಟ ಹಣವನ್ನು ಬಿಜೆಪಿ ಪಕ್ಷದ ಕಚೇರಿಗೆ ನೀಡಿದ ಎಕೈಕ ಮಂತ್ರಿಯಾಗಿದ್ದಾರೆ. ಒಂದೂ ರೂ. ಅನ್ನು ನೀಡದೇ ಚುನಾವಣೆ ಗೆದ್ದಿರುವ ಅಸಮಾನ್ಯರಾಗಿದ್ದಾರೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯದ ವಿವಿಧ ಯೋಜನೆ ಹಾಗೂ ರಾಜ್ಯ ಸರ್ಕಾರದ ವಾಲ್ಮೀಕಿ, ಅಂಬೇಡ್ಕರ್, ದೇವರಾಜ ಅರಸು, ಭೋವಿ ಸೇರಿ ಹಲವು ನಿಗಮದ ಮೂಲಕ ಮನೆ ಬಾಗಿಲಿಗೆ ಸರ್ಕಾರವನ್ನು ಕೊಂಡೊಯ್ಯುವ ಚಿಂತನೆಯನ್ನು ಮಾಡಿದ್ದೇವೆ. ಒಬ್ಬ ಪೌರ ಕಾರ್ಮಿಕ ಮಹಿಳೆ ನಗರಪಾಲಿಕೆ ಸದಸ್ಯರಾಗಿದ್ದಾರೆ. ಹೀಗೆ ಕ್ಷೇತ್ರದಲ್ಲಿ ಅನೇಕ ಹಿಂದುಳಿದ ಬಂಧುಗಳು ಸಂಘಟಿತರಾಗಿ ಮುನ್ನಲೆಗೆ ಬಂದಿದ್ದಾರೆ. ಸರ್ಕಾರಕ್ಕೆ ಜನಸಾಮಾನ್ಯರು ನೀಡಿದ ತೆರಿಗೆ ಹಣದೇ ಯೋಜನೆ ರೂಪದಲ್ಲಿ ನೀಡಿದ್ದಾರೆ. ಮೋದಿ ಯುಗ ಉತ್ಸವದಲ್ಲಿ ನೊಂದಣಿಯಾದವರಿಗೆ ಅವರಿಗೆ ಮುಂದೆ ಕೌಶಲ ತರಬೇತಿ ನೀಡಿ ಅವರಿಗೆ ಸರ್ಕಾರದಿಂದ ಸಿಗಬಹುದಾದ ಅನುದಾನವನ್ನು ವಿಶೇಷ ವಾಗಿ ನೀಡಬೇಕೆಂದು ಮನವಿ ಮಾಡಿದರು.ನಮ್ಮಲ್ಲಿರುವ ಮಕ್ಕಳು ಐಎಎಸ್, ಐಎಫ್ ಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆ ಕೈಗೊಳ್ಳುವ ಮಕ್ಕಳ ಭವಿಷ್ಯಕ್ಕೆ 4 ಕೋಟಿ ರೂ. ವೆಚ್ಚದ ಗ್ರಂಥಾಲಯ ನಿರ್ಮಿಸುತ್ತಿದ್ದು, ಮುಖ್ಯಮಂತ್ರಿ ಗಳು ಅದರ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಸ್ವಂತ ಉದ್ಯೋಗ ಮಾಡುವವರಿಗೆ ವೇದಿಕೆ ನಾವು ನೀಡುತ್ತೇವೆ.‌13 ಬ್ಯಾಂಕ್ ಗಳು ಸಾಲ ನೀಡಿದ್ದು, ಸ್ಟಾಂಡಪ್ ಯೋಜನೆ, ಮುದ್ರಾ ಯೋಜನೆ, ಸ್ಟಾರ್ಟಟಪ್ ಯೋಜನೆಗೆ ಸೌಲಭ್ಯ ಒದಗಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಇಂದಿನ ಹಾಗೂ ನಾಳೆಯ ಭವಿಷ್ಯ ರೂಪಿಸುವ ಮೂಲಕ ವೇ ಮೋದಿ ಹುಟ್ಟು ಹಬ್ಬದ ಕೊಡುಗೆ ನೀಡಲು ಒಂಭತ್ತು ದಿನಗಳ ಕಾರ್ಯಕ್ರಮ ರೂಪಿಸಿದ್ದೇವೆ. ಕೊನೆ ದಿನ ದೀನ್ ದಯಾಳ್ ಅವರ ಹುಟ್ಟು ಹಬ್ಬವಿದ್ದು, ಹೀಗಾಗಿ ಮೊಹಲ್ಲಾಗಳಲ್ಲಿ ಹೋಗಿ ಊಟ ಮಾಡುವ ಮೂಲಕ ಕಾರ್ಯಕ್ರಮ ಆಯೋಜಿಸಿ ಸರಳ ಬದುಕಿನ ಸಂದೇಶ ಸಾರಲಿದ್ದೇವೆ ಎಂದು ಹೇಳಿದರು.
ಮಹಾನಗರಪಾಲಿಕೆ ಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತ ವಡಿವೇಲು, ಪಿ.ಟಿ.ಕೃಷ್ಣ, ಕೆ.ಆರ್.ಕ್ಷೇತ್ರದ ಮಂಡಲದ ಅಧ್ಯಕ್ಷ ವಡಿವೇಲು, ಅಂಬೇಡ್ಕರ್ ನಿಗಮದ ಅಧಿಕಾರಿ ಸುದಾಮಣಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿ.ಆರ್.ಮಹೇಶ್ , ಹಿಂದುಳಿದ ಮೋರ್ಚಾ ದ ನಾಗರಾಜು, ಶಿವಪ್ಪ ಇನ್ನಿತರರು ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತ ಜೆ.ರವಿ ಸ್ವಾಗತಿಸಿದರು. ಸುನೀತಾ ಪ್ರಾರ್ಥಿಸಿದರು.

ಬಾಕ್ಸ್

ಏನೆಲ್ಲಾ ಸವಲತ್ತುಗಳನ್ನು ವಿತರಣೆ
ಸಮಾಜ ಕಲ್ಯಾಣ ಇಲಾಕೆಯಡಿ ಬರುವ ವಿವಿಧ ನಿಗಮಗಳ ಹಲವು ಯೋಜನೆಗಳ ಫಲಾನುಭವಿಗಳಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ‌ವಿತರಣೆ ಮಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅಭಿಯ ನಿಗಲದಿಂದ ಕೃಷ್ಣರಾಜ ಕ್ಷೇತ್ರದ 50 ಮಂದಿಗೆ ಸ್ವಯಂ ಉದ್ಯೋಗ ಯೋಜನೆಯಡಿ ನೇರ ಸಾಲ, ಗುಂಪು ಉದ್ಯೋಗದಡಿ ಅಶೋಕಪುರಂ ಜೈ ಭುವನೇಶ್ವರಿ ಮಹಿಳಾ‌ ಸಂಘಕ್ಕೆ ಸಾಲ ಸೌಲಭ್ಯ ಪ್ರಮಾಣಪತ್ರ ನೀಡಲಾಯಿತು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನೇರ ಸಾಲ ಸೌಲಭ್ಯದ ಫಲಾನುಭವಿಗಳಿಗೆ, ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ ಮೀನಾಕ್ಷಿ ಮಹಿಳಾ ಸ್ವಸಹಾಯ ಸಂಘ, ಚೈತ್ಯಭೂಮಿ ಮಹಿಳಾ ಸ್ವಸಹಾಯ ಸಂಘ, ಬಣ್ಣಾರಿ ಅಮ್ಮನ್ ಮಹಿಳಾ ಸ್ವಸಹಾಯ ಸಂಘ, ಪ್ರಬುದ್ಧ ಮಹಿಳಾ ಸ್ವಸಹಾಯ ಸಂಘಗಳಿಗೆ ಗುಂಯ ಉದ್ಯೋಗ ಯೋಜನೆಯಡಿ ಸಾಲ ಸೌಲಭ್ಯ, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ನೇರ ಉದ್ಯೋಗ ಯೋಜನೆಯಡಿಯ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ನೀಡುವ ಮದುವೆ ಧನಸಹಾಯದ ಮಂಜೂರಾತಿ ಪತ್ರವನ್ನು ಕ್ಷೇತ್ರದ ರಾಮು, ಶಿವಸ್ವಾಮಿ, ಶಿವಲೀಂಗೇಗೌಡ, ಎಂ. ರಾಜು, ಪ್ರಕಾಶ, ಸಿದ್ದಪ್ಪ, ನಾಗರಾಜು, ರವಿ, ನಂದೀಶ್, ಬಾಬುರಾವ್ ಅವರಿಗೆ ಹಾಗೂ ಗಾರೆ ಕೆಲಸದವರಿಗೆ ನೀಡುವ ಟೂಲ್‌ ಕಿಟ್ ಗಳನ್ನು ರಾಜು, ಕುಮಾರಸ್ವಾಮಿ, ರಂಗಸ್ವಾಮಿ, ಶಿವಸ್ವಾಮಿ, ಮಹೇಶ್, ನಂದೀಶ್, ಸ್ವಾಮಿ ನಾಯಕ, ಮಂಜುನಾಥ್, ರವಿ, ನಾಗರಾಜು ಅವರಿಗೆ ನೀಡಲಾಯಿತು.
ಇದರ ಜೊತೆಗೆ ನಗರಪಾಲಿಕೆಯಿಂದ ನೀಡಲಾಗುವ ಪ್ರೋತ್ಸಾಹದ ಹಾಗೂ ಸಹಾಯಧನ ಯೋಜನೆಯಡಿ ಸುಮಾರು ಹತ್ತಕ್ಕೂ ಹೆಚ್ಷಿನ ಮಂದಿಗೆ ಸ್ವಯಂ ಉದ್ಯೋಗ , ವ್ಯಾಸಂಗ ಪ್ರೋತ್ಸಾಹಧನದ ಮಂಜೂರಾತಿ ಪತ್ರಗಳನ್ನು ನೀಡಲಾಯಿತು.

ಬಾಕ್ಸ್
ವಾರದಲ್ಲಿ ಆದೇಶ
ಮೈಸೂರಿನ ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ ಯುವಕರ ಅಭಿವೃದ್ಧಿ ಮಹಾಸಂಘ, ಶ್ರೀ ಆದಿಶಕ್ತಿ ಪಟ್ಟಲ್ಲಮ್ಮ ಮತ್ತು ಕತ್ತಿ ಮುನೇಶ್ವರ ದೇವಸ್ಥಾನ ಕುಲಪಂಚಾಯಿತಿ ಸಮಿತಿ ಸದಸ್ಯರು ಸಮುದಾಯ ಭವನಕ್ಕೆ ಅನುದಾನ ಕೋರಿದರು. ಶಾಸಕರ ಎಸ್.ಎ.ರಾಮದಾಸ್ ಅವರು ಮೋದಿ ಯುಗ ಉತ್ಸವದಲ್ಲಿ ನೊಂದಾಯಿಸಿಕೊಳ್ಳುವ ಯುವ ಉದ್ಯೋಗಿಗಳಿಗೆ ಯೋಜನೆಯ ಅನುದಾನ ನೀಡಬೇಕೆಂದು ಮಾಡಿದ ಮನವಿಗೆ ವಾರದಲ್ಲಿ ಈ ಬಗ್ಗೆ ಆದೇಶ ಹೊರಡಿಸುವುದಾಗಿ ಘೋಷಿಸಿದರು


Share