ಸಂಪಾದಕೀಯ : ಕರ್ನಾಟಕದಲ್ಲಿ ಕೀಳಭಿರುಚಿಯ ಚಿತ್ರ ನಿರ್ಮಾಣ

73
Share

ಈಗಂತು ಇಬ್ಬರು ಒಂದು ಚಲನ ಚಿತ್ತ ನೋಡಲು ಹೋಗಬೇಕೆಂದರೆ ಅತಿ ಕಡಿನೆ ಎಂದರು ಒಂದರಿಂದ ಒಂದುವರೆ ಸಾವಿರ ರೂ ಗಳನ್ನು ಇಟ್ಟುಕೊಳ್ಳಬೇಕು. ಅಷ್ಟು ಕರ್ಚು ಮಾಡಿದರು ನಚಮಗೆ ಬೇಕಾದ ಮನೋರಂಜನೆ ಸಿಗುತ್ತೆ ಅನ್ನೋ ಗ್ಯಾರಂಟಿ ಇಲ್ಲ.
ಆದರೆ ಪ್ರಸಕ್ತ ಭಾರತದ ರಾಜಕೀಯ ಪರಿಸ್ಥಿತಿ ಬಹುಶಃ ಎಲ್ಲಿ ಮುಟ್ಟಬಹುದೆನ್ನುವ ಅಂದಾಜು ಹಿರಿಯ ರಾಜಕೀಯ ವಿಶ್ಲಷಕರ ಅಂದಾಜಿಗೂ ನಿಲುಕುವ ಮಟ್ಟದಕ್ಲಿಲ್ಲವೇನೋ.
ಒಬ್ಬರ ಮುಖಕ್ಕೆ ಒಬ್ಬರು ಕೆಸರೆರಚಾಟದಲ್ಲಿ ದೇಶದ, ತಮ್ಮ ಪಕ್ಷದ, ಸಾಮಾನ್ಯ ಜನರ ಹಿತವನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿರುವಂತಿದೆ. ಒಬ್ಬರಿಗೂ ಸಿದ್ಧಾಂತದ ಬಗ್ಗೆ ಕಾಳಜಿ ಇರುವಂತಿಲ್ಲ.
ಇತಿಹಾಸದತ್ತ ಒಮ್ಮೆ ತಿರುಗಿ ನೋಡಿದರೆ ಕರ್ನಾಟಕ ರಾಜಕೀಯ ಎಂದಿಗೂ ಒಂದು ಮರ್ಯಾದೆಯ ಮಿತಿಯಲ್ಲಿತ್ತು. ಆದರೆ ಈ ಬಾರಿ ಚುನಾವಣಾ ಸಮಯದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಮಿತಿಯೇ ಇಲ್ಲದಂತಾಗಿದೆ. ದೇಶದಾದ್ಯಂತ ಎಲ್ಲರೂ ಕರ್ನಾಟಕದತ್ತ ನೋಡುವಂತಾಗಿದೆ.
ಇನ್ನು ಇಂದಿನ ಕರ್ನಾಟಕದ ಪರಿಸ್ಥಿತಿ ನೋಡಿದರೆ ಸಿನಿಮಾ ನಿರ್ದೇಶಕರು, ನಾಯಕ, ನಾಯಕಿಯರು ಯಾರಿಗೂ ಕೆಲಸವೇ ಇರುವುದಿಲ್ಲವೇನೋ. ಒಟಿಟಿ, ಸಿನಿಮಾ ಚಿತ್ರಮಂದಿರಗಳಿಗೆ ಹೋಗಲು ಯಾರೂ ಮನಸ್ಸು ಮಾಡುವುದಿಲ್ಲವೇನೋ. ದಿನನಿತ್ಯ ಬೆಳಿಗ್ಗೆಯಿಂದ ಸಂಜೆತನಕ ವಿವಿಧ ವಾಹಿನಿಗಳಲ್ಲಿ , ಸಾಮಾಜಿಕ ಜಾಲತಾಣದಲ್ಲಿ , ಪತ್ರಿಕೆಗಳಲ್ಲಿ ಎಲ್ಲೆಡೆಯೂ ಒಂದು ಸಿನಿಮಾದಲ್ಲಿರಬೇಕಾದ ಎಲ್ಲಾ ಸನ್ನಿವೇಶಗಳನ್ನು ಪ್ರತ್ಯಕ್ಷವಾಗಿ ನೋಡುವಂತಾಗಿದೆ. ಈ ಪ್ರತ್ಯಕ್ಷ ನಡೆಯುತ್ತಿರುವ ಸಿನಿಮಾಗೆ ಯಾವುದೇ ಸೆನ್ಸಾರ್ ಬೋರ್ಡ್ ಇಲ್ಲ. ಸಿನಿಮ ಬರೀ 3 ಗಂಟೆಗಳಿಗೆ ಸೀಮಿತವಾಗಿರುತ್ತದೆ. ಆದರೆ ಇದು ನಿರಂತರವಾಗಿ ನಡೆಯುತ್ತಿದೆ.
ಶಾಂತಿಯ ತೋಟ ಎಂದು ಹೆಸರು ಮಾಡಿದ್ದ ಕರ್ನಾಟಕ ಇಂದು ಕೀಳು ಅಭಿರುಚಿಯ ಚಿತ್ರ ವಾದಂತಾಗಿದೆ ಎಂದು ಹೇಳಲು ಬೇಸರವಾಗುತ್ತದೆ.
ಒಟ್ಟಿನಲ್ಲಿ ಖರ್ಚಿಲ್ಲದೇ, ಸಿನಿಮಾ ಮಂದಿರಕ್ಕೆ ಹೋಗದೇ ಎಲ್ಲರೂ ಅಮಿತವಾಗಿ ಸಿನೆಮಾ ನೋಡಬಹುದಾಗಿದೆ ಎಂದು ಹೇಳುವಂತಾಗಿದೆ.


Share