ದೀಪಾವಳಿ : ಚೆನ್ನೈನಲ್ಲಿ ಎಚ್ಚರಿಕೆ ಕ್ರಮ

31
Share

ನವೆಂಬರ್ 12 ರ ಭಾನುವಾರದಂದು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗ್ರೇಟರ್ ಚೆನ್ನೈ ಪೊಲೀಸರು ನಗರದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಿದ್ದಾರೆ. ಪೊಲೀಸರ ಪ್ರಕಾರ, ಜನಸಂದಣಿಯನ್ನು ನಿಯಂತ್ರಿಸಲು, ಅಪರಾಧಗಳನ್ನು ತಡೆಗಟ್ಟಲು ಮತ್ತು ದಟ್ಟಣೆಯನ್ನು ತಪ್ಪಿಸಲು ಟ್ರಾಫಿಕ್ ನಿಯಂತ್ರಿಸಲು 18,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಕುರಿತು ಸಾರ್ವಜನಿಕರಿಗೆ ಸಲಹೆಗಳನ್ನು ಕೂಡ ಪೊಲೀಸರು ನೀಡಿದ್ದಾರೆ. ಪೊಲೀಸರು ಹೊರಡಿಸಿರುವ ಆದೇಶದ ಪ್ರಕಾರ ಬೆಳಗ್ಗೆ 6 ರಿಂದ 7 ರವರೆಗೆ ಮತ್ತು ಸಂಜೆ 7 ರಿಂದ 8 ರವರೆಗೆ ಎರಡು ಗಂಟೆಗಳ ಕಾಲ ಮಾತ್ರ ಸಾರ್ವಜನಿಕರಿಗೆ ಪಟಾಕಿ ಸಿಡಿಸಲು ಅವಕಾಶವಿದೆ.
ಪರಿಸರ ಸಂರಕ್ಷಣಾ ನಿಯಮಗಳ ಪ್ರಕಾರ, 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ತಯಾರಿಸಬಾರದು, ಬಳಸಬಾರದು ಅಥವಾ ಮಾರಾಟ ಮಾಡಬಾರದು. ಚೈನೀಸ್ ನಿರ್ಮಿತ ಪಟಾಕಿಗಳನ್ನು ಮಾರಾಟ ಮಾಡಬಾರದು ಅಥವಾ ಬಳಸಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
ಟಿ.ನಗರ, ಪಾಂಡಿ ಬಜಾರ್, ಪುರಸಾವಲ್ಕಂ, ಮೈಲಾಪುರ್, ಫ್ಲವರ್ ಬಜಾರ್, ವಾಷರ್‌ಮೆನ್‌ಪೇಟೆ ಮತ್ತು ಕೋಯಂಬೇಡು ಮುಂತಾದ ಬ್ಯುಸಿ ಶಾಪಿಂಗ್ ಪ್ರದೇಶಗಳ ಮೇಲೆ ಪೊಲೀಸರು ವಿಶೇಷ ಗಮನ ಹರಿಸುವುದಾಗಿ ತಿಳಿಸಿದ್ದಾರೆ, ಅಲ್ಲಿ ಮುಂಬರುವ ದಿನಗಳಲ್ಲಿ ಹಬ್ಬದ ಪೂರ್ವಭಾವಿಯಾಗಿ ಹೆಚ್ಚಿನ ಜನ ಸೇರುವುದನಚನ್ನು ನಿರೀಕ್ಷಿಸಿದ್ದಾರೆ.


Share