ದೇಶ್ಯಾದ್ಯಂತ ರಕ್ತದಾನ ಅರಿವು ಮೂಡಿಸಲು ದೇಶ ಪರ್ಯಟನೆ

204
Share

 

ದೇಶ್ಯಾದ್ಯಂತ ರಕ್ತದಾನ ಅರಿವು ಮೂಡಿಸಲು ದೇಶ ಪರ್ಯಟನೆಯ
ಪಾದಯಾತ್ರೆ ಆರಂಭಿಸಿರುವ
ದೆಹಲಿಯ ನಿವಾಸಿ ಸಾಮಾಜಿಕ ಕಾರ್ಯಕರ್ತ ಕಿರಣ್ ವರ್ಮಾ
ರವರಿಗೆ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಸನ್ಮಾನಿಸಿ ಅಭಿನಂದಿಸಿದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ದೆಹಲಿಯ ನಿವಾಸಿ ಸಾಮಾಜಿಕ ಕಾರ್ಯಕರ್ತ ಕಿರಣ್ ವರ್ಮಾ
ಕಳೆದ ವರ್ಷ ಡಿಸೆಂಬರ್ 28ರಂದು ತ್ರಿವೇಂಡ್ರಂನಿಂದ ಪಾದಯಾತ್ರೆ ಆರಂಭಿಸಿ ಸುಮಾರು ಸಾವಿರಕ್ಕೂ ಹೆಚ್ಚು
ಕಿ. ಮೀ ಸಂಚರಿಸಿದ್ದೇನೆ ನನ್ನ ಉದ್ದೇಶ ಎಲ್ಲ ಜಿಲ್ಲೆಗಳಲ್ಲಿ ಬ್ಲಡ್ ಡೊನೇಟ್ ಕ್ಯಾಂಪ್ ನಡೆಸುವ ಸಂಸ್ಥೆ ಸಂಪರ್ಕಿಸಿ ರಕ್ತದಾನ ಶಿಬಿರ ಕೂಡ ನಡೆಸಿದ್ದೇನೆ .ಹೀಗೆ
ಹೋದಲ್ಲೆಲ್ಲಾ ರಕ್ತದಾನ ಅರಿವು ಮೂಡಿಸಿ ಪ್ರತಿ ಜಿಲ್ಲೆಯಲ್ಲಿ ರಕ್ತ ಸಂಗ್ರಹ ಹೆಚ್ಚು ಮಾಡುವುದರ ಮೂಲಕ ರಕ್ತದ ಲಭ್ಯತೆ ಆಗಬೇಕೆನ್ನುವ ಉದ್ದೇಶ .ಹೀಗೆ ರಕ್ತದ ಕೊರತೆ ಯಾರಿಗೂ ಆಗಬಾರದು ಎಂಬ ಸದುದ್ದೇಶದಿಂದ ಪಾದಯಾತ್ರೆ ಆರಂಭಿಸಿದ್ದೇನೆ 21ಸಾವಿರ ಕಿಲೋ ಮೀಟರ್ ಕ್ರಮಿಸುವ ಗುರಿಯನ್ನಿಟ್ಟುಕೊಂಡಿದ್ದೇನೆ .ಈಗಾಗಲೇ ತ್ರಿವೇಂದ್ರಂ, ಕೊಲ್ಲಂ, ಏನ್ರಾಕುಲಂ, ತ್ರಿಶೂರ್, ಮಲಪುರಂ, ಕೋಜಿಕೋಡ್ , ಮಾಹೆ, ಕಣ್ಣೂರು, ಕಾಸರಗೋಡು, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಬೆಂಗಳೂರು , ಮಂಡ್ಯ ಸೇರಿದಂತೆ 800ಕ್ಕೂ ಹೆಚ್ಚು
ಕಿ .ಮೀ ಪಾದಯಾತ್ರೆ ಮೂಲಕ ಮೈಸೂರಿಗೆ ಬಂದಿದ್ದೇನೆ ,ಇಲ್ಲಿಂದ ತಮಿಳುನಾಡು ಕೊಯಮತ್ತೂರು ಮಧುರೈ ಗೆ ಹೋಗುತ್ತೇನೆ ,ಡಿ31,2025 ಕೆ ದೇಶದ ಯಾರೊಬ್ಬರೂ ರಕ್ತದ ಕೊರತೆಯಿಂದ ಸಾಯಬಾರದು ಎಂಬ ಆಶಯ ,ಅರಿವು ಮೂಡಿಸುವ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇನೆ ನನ್ನ ಜೀವಕ್ಕೆ ತೊಂದರೆ ಆದರೂ ಚಿಂತೆಯಿಲ್ಲ ಜನರ ರಕ್ತದ ಕೊರತೆಯಿಂದ ಪರದಾಡಬಾರದು ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹಾಗೂ ಮುತ್ತಣ್ಣ , ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕರಾದ ದೇವೇಂದ್ರ ಪರಿಹಾರಿಯಾ,ಆದಿತ್ಯ ,ಗಣೇಶ್ ಭಾವಸಾರ್ ,ಸದಾಶಿವ್ ,ಚಂದ್ರು , ಕೇಬಲ್ ವಿಜಿ ,ಸೂರಜ್ ಹಾಗೂ ಇನ್ನಿತರರು ಹಾಜರಿದ್ದರು


Share