ಪಾಲಿಕೆ ಚುನಾವಣೆ:ಹೆಚ್ ವಿಶ್ವನಾಥ್ ರವರ ವಿರುದ್ಧ ವಕೀಲರಿ೦ದ ತಕರಾರು

217
Share

 

ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರಾಗಿ ಹಕ್ಕು ಪಡೆದಿರುವ ವಿಧಾನ ಪರಿಷತ್ ಸದಸ್ಯರು ಗಳಾದ ಜಿ.ಎಂ.ಮಧು ಮತ್ತು ಹೆಚ್ ವಿಶ್ವನಾಥ್ ರವರ ವಿರುದ್ಧ ವಕೀಲರೊಬ್ಬರು ತಕರಾರು ಸಲ್ಲಿಸಿದ್ದಾರೆ.

ಮೈಸೂರು ನಗರ ಪಾಲಿಕೆಯ ಸಾರ್ವಜನಿಕರ ಪರವಾಗಿ ತಕರಾರು ಸಲ್ಲಿಸಿರುವ ವಕೀಲರಾದ ಬಿ.ಎಂ.ರಾಜಶೇಖರ ರವರು ನಗರಪಾಲಿಕೆಯ ಸದಸ್ಯತ್ವ ಪಡೆಯಲು ಮೈಸೂರು ನಗರಕ್ಕೆ ಸುಳ್ಳು ದಾಖಲತಿಗಳನ್ನು ಸಲ್ಲಿಸಿ ಮತದಾನ ಹಕ್ಕು ಪಡೆದಿರುವ ಇಬ್ಬರು ಸದಸ್ಯರ ಹಕ್ಕನ್ನು ವಾಪಸ್ಸು ‌ಪಡೆಯುವಂತೆ ತಕಾರಾರನಲ್ಲಿ ಸಲ್ಲಿಸಿದ್ದಾರೆ.

ಮೈಸೂರು ಪ್ರಾದೇಶಿಕ ಆಯುಕ್ತ ರಿಗೆ ಸಲ್ಲಿಸಿರುವ ಪತ್ರದಲ್ಲಿ ಜಿ.ಎಂ ಮಧುರವರು ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಸ್ವರ್ಧಿಸುವಾಗ ತಾವು‌ ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿ ನಿವಾಸಿಯಾಗಿದವರು ಏಕಾಏಕಿ ಆಯ್ಕೆ ಆದ ನಂತರ ಮೈಸೂರು ವಿಳಾಸ ನೀಡಿ ನಗರಪಾಲಿಕೆ ಸದಸ್ಯತ್ವ ಪಡೆದಿರುವುದು ಕಾನೂನು ಬಾಹಿರ ಎಂದು ವಾದಿಸಿದ್ದಾರೆ.

ಅದೇ ರೀತಿ ಹುಣುಸೂರು ತಾಲ್ಲೂಕಿನ ನಿವಾಸಿಯಾಗಿ ಮತದಾನದ ಹಕ್ಕು ಹೋಂದಿದ್ದ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ರವರು ಮಹಾನಗರ ಪಾಲಿಕೆ ಚುನಾವಣೆಗೊಸ್ಕರ ಮೈಸೂರು ನಗರಕ್ಕೆ ವಿಳಾಸ ಬದಲಿಸಿಕೊಂಡು ಸದಸ್ಯತ್ವ ಪಡೆದಿದ್ದು ಇಬ್ಬರ ಹಕ್ಕನ್ನು ಮೊಟಕುಗೊಳಿಸುವಂತೆ ವಕೀಲ ರಾಜಶೇಖರ ಬಲವಾದ ತಕರಾರು ಎತ್ತಿದ್ದಾರೆ.

ಹೀಗಾಗಲೇ ಮಂಡ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ರವರ ಸದಸ್ಯತ್ವದ ಬಗ್ಗೆ ಜೆಡಿಎಸ್ ತಕರಾರು ತೆಗೆದಿದ್ದು ಮತ್ತೆ ವಕೀಲರೊಬ್ಬರು ಇಬ್ಬರು ವಿಧಾನ ಪರಿಷತ್ ಸದಸ್ಯರ ಮತದಾನದ ಹಕ್ಕಿನ ಬಗ್ಗೆ ಪ್ರಶ್ನೆ ಎತ್ತಿರುವುದು ಕುತೂಹಲ ಮೂಡಿಸಿದ್ದು ಪ್ರಾದೇಶಿಕ ಆಯುಕ್ತರ ನಿರ್ಧಾರ ಮಹಾನಗರಪಾಲಿಕೆಯ ಮೇಯರ್ ಚುನಾವಣಾ ಫಲಿತಾಂಶದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.


Share