ಪ್ರಚಾರ ಕಾರ್ಯಕ್ಕೆ ಅಭ್ಯರ್ಥಿಗೆ 95 ಲಕ್ಷ ರೂ ವೆಚ್ಚಕ್ಕೆ ಅನುಮತಿ

165
Share

ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಚುನಾವಣಾ ತರಬೇತಿ ಕಾರ್ಯಕ್ರಮ

*ಕಂಗೊಳಿಸುವ ಮತಗಟ್ಟೆಗಳಿಗೆ ಜಿಲ್ಲಾಡಳಿತದಿಂದ ಸಮ್ಮಾನ – ಡಿ.ಸಿ.*

85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ

ಪ್ರಜಾಪ್ರಭುತ್ವದ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗಳು ಸುಂದರವಾಗಿ ಕಂಗೊಳಿಸಲಿ,ಇದರಿಂದಾಗಿ ಮತದಾರರಲ್ಲಿ ಮತದಾನ ಮಾಡುವ ಆಸಕ್ತಿ ಹೆಚ್ಚಾಗಿ ಈ ಮೂಲಕವೂ ಮತದಾನ ಪ್ರಮಾಣ ಹೆಚ್ಚಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಜಿ.ಪಂ.ಸಭಾಂಗಣದಲ್ಲಿ ಬುಧವಾರ ನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆ ಜಾರಿಯಾದ ತಕ್ಷಣ ತೆಗೆದುಕೊಳ್ಳಬಹುದಾದ ಕ್ರಮಗಳೊಂದಿಗೆ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡುವುದರೊಂದಿಗೆ ಮತದಾನ ಕೇಂದ್ರಗಳಿಗೆ ಸುಣ್ಣ ಬಣ್ಣ ರಂಗೋಲಿ ಅಕ್ಕಿಹಿಟ್ಟು ಮುಂತಾದವುಗಳಿಂದ ಸೌಂದರೀಕರಣಗೊಳಿಸಬಹುದು.

ಜಿಲ್ಲೆಯ 2915 ಮತಗಟ್ಟೆಗಳನ್ನೂ ಅಂದವಾಗಿಸಿ ಸಕಲ ಸೌಲಭ್ಯಗಳೊಂದಿಗೆ ಸುಂದರವಾಗಿ ಕಾಣುವ ಪ್ರತಿ ತಾಲೂಕಿನ ಮೂರು ಮತಗಟ್ಟೆಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಗುವುದು ಎಂದರು.

ಈಗಾಗಲೇ ಗುರುತಿಸಿರುವ ಮತಗಟ್ಟೆಗಳಲ್ಲಿ ಯಾವುದೇ ವಿಧದ ಸಣ್ಣ ರಿಪೇರಿಗಳಿದ್ದರೆ ತಕ್ಷಣ ಮಾಡಿಸಿಕೊಳ್ಳಿ, ಚುನಾವಣಾ ನೀತಿ ಸಂಹಿತೆಗೂ ಮುನ್ನ ಮತಗಟ್ಟೆಗಳು ಶೇ.100 ರಷ್ಟು ಸಿದ್ದವಿರಬೇಕು. ಯಾವುದಾದರೂ ಮತಗಟ್ಟೆಯಲ್ಲಿ ನ್ಯೂನ್ಯತೆಗಳಿದ್ದರೆ ಸಂಕಷ್ಟಕೆಕೆ ಸಿಲುಕುತ್ತೀರಿ ಎಂದರು.

ಮತದಾನ ಕಾರ್ಯಕ್ಕೆ ಆಗಮಿಸುವ ಸಿಬ್ಬಂದಿಗಳು 14 ರಿಂದ 15 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕಾಗುತ್ತದೆ ಹಾಗಾಗಿ ಅವರಿಗೆ ಉತ್ತಮ ಊಟ, ವಸತಿ ವ್ಯವಸ್ಥೆ ಮಾಡಿ ಎಂದರು.

ಚುನಾವಣೆ ಘೋಷಣೆಯಾದ 24, 48 ಹಾಗೂ 72 ಗಂಟೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ತಿಳಿಸಿದ ಅವರು 24 ಗಂಟೆಯೊಳಗೆ ಸರ್ಕಾರದ ಜಾಹೀರಾತುಗಳು 48 ಗಂಟೆಯೊಳಗೆ ಸರ್ಕಾರಿ ಸಾಮ್ಯದ ನಿಗಮ ಮಂಡಳಿಗಳು ಹಾಗೂ 72 ಗಂಟೆಯೊಳಗೆ ಖಾಸಗಿ ವಲಯದ ನೀತಿ ಸಂಹಿತೆಗೆ ವಿರುದ್ದವಾದ ಜಾಹೀರಾತುಗಳನ್ನು ತೆಗೆಯಬೇಕಾಗುತ್ತದೆ.

ಯಾವುದೇ ಹೊಸ ಕಾಮಗಾರಿಗಳನ್ನು ಆರಂಭಿಸುವಂತಿಲ್ಲ ಹಾಗೂ ಹೊಸ ಕಾಮಗಾರಿಗಳಿಗೆ ಮಂಜೂರು ನೀಡುವಂತಿಲ್ಲ, ಈಗಾಗಲೇ ಆರಂಭವಾಗಿರುವವುಗಳಿಗೆ ಈ ನಿಯಮ ಅನ್ವಯಿಸುವುದಿಲ್ಲಅ

ಕೆಲ ಪ್ರಚಾರ ಹಾಗೂ ಸಾಮಗ್ರಿಗಳ ಬಳಕೆಗೆ ಅನುಮತಿ‌ ನೀಡುವಾಗ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದಂತೆ ಅನುಮತಿಗಳನ್ನು ನೀಡಬೇಕು.

ಪ್ರಚಾರ ಕಾರ್ಯಕ್ಕೆ ಅಭ್ಯರ್ಥಿಗೆ 95 ಲಕ್ಷ ರೂ ವೆಚ್ಚ ಮಾಡಲು ಅನುಮತಿಯಿದ್ದು ಯಾರಾದರೂ ಆಭ್ಯರ್ಥಿಯ ಪರವಾಗಿ ಮಾಡುವ ವೆಚ್ಚವನ್ನೂ ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುತ್ತದೆ,ಆ ವ್ಯಕ್ತಿ ಅಭ್ಯರ್ಥಿಗಳ ಪರವಾಗಿ ಮಾಡಿದ ವೆಚ್ಚಕ್ಕೆ ಅಭ್ಯರ್ಥಿಯ ಅನುಮತಿ ಇರಬೇಕು, ಇಲ್ಲದಿದ್ದಲ್ಲಿ ಪ್ರಚಾರ ಮಾಡಿದ ವ್ಯಕ್ತಿಯ ವಿರುದ್ದ ಕಠಿಣ ಕ್ರಮ ಆಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ಚುನಾವಣೆ ಘೋಷಣೆಯಾದ ತಕ್ಷಣ ಎಲ್ಲರೂ ಆಯೋಗದ ವ್ಯಾಪ್ತಿಗೆ ಬರುತ್ತೇವೆ,ನಮ್ಮ ಕೆಲಸಗಳನ್ನು ಜವಾಬ್ದಾರಿ ಯಿಂದ ನಿರ್ವಹಿಸಬೇಕು. ಯಾವುದೇ ಅನುಮತಿಗಳನ್ನು ನೀಡುವಾಗ ನಿಭಂಧನೆಗಳನ್ನು ಕರಾರುವಕ್ಕಾಗಿ ವಿಧಿಸಿ, ದಿನಾಂಕ, ವೇಳೆ ಸರಿಯಾಗಿ ನಮೂದಿಸಿ. ನೀತಿ ಸಂಹಿತೆ ಜಾರಿಯಾದಾಗಿನಿಂದ 50 ಸಾವಿರಕ್ಕಿಂತ ಹೆಚ್ಚು ನಗದು ಹಾಗೂ 10 ಸಾವಿರಕ್ಕಿಂತ ಹೆಚ್ಚು ಬೆಲೆಯ ವಸ್ತುಗಳನ್ನು ಒಯ್ಯವಂತಿಲ್ಲ ಎಂದರು.

ಸಭೆಯಲ್ಲಿ ಜಿ.ಪಂ ಸಿಇಒ ಗಾಯತ್ರಿ ಕೆ.ಎಂ.ಉಪಕಾರ್ಯದರ್ಶಿ ಕೃಷ್ಣ ಂ ರಾಜು, ಸಂಪನ್ಮೂಲ ವ್ಯಕ್ತಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇದ್ದರು.

 


Share