ಪ್ರೇಕ್ಷಕರಿಗೆ ಇನ್ನಿಲ್ಲ ಶಾಂತಲ ಚಿತ್ರಮಂದಿರ

808
Share

ಮೈಸೂರಿನ ,ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ 50ವರ್ಷಗಳಿಂದ ಜನಪ್ರಿಯವಾಗಿರುವ ಶಾಂತಲ ಚಿತ್ರಮಂದಿರ ಮುಚ್ಚುತ್ತಿರುವ ಹಿನ್ನಲೆಯಲ್ಲಿ ಕಲಾಭಿಮಾನಿಗಳ ಪ್ರೇಕ್ಷಕರ ಜನಸ್ನೇಹಿಯಾಗಿದ್ದ ಶಾಂತಲ ಚಿತ್ರಮಂದಿರದ ಮಾಲೀಕರಾದ ಪದ್ಮನಾಭ ಪದಕಿ ಮತ್ತು ವ್ಯವಸ್ಥಾಪಕ ದೇವರಾಜು ರವರ ಕಲಾಸೇವೆಯನ್ನು ಪರಿಗಣಿಸಿ ಪಾತಿ ಫೌಂಡೇಶನ್ ವತಿಯಿಂದ ಚಿತ್ರಮಂದಿರದ ಮುಂಭಾಗ ಸನ್ಮಾನಿಸಲಾಯಿತು,

ಇದೇ ಸಂಧರ್ಭದಲ್ಲಿ ಚಿತ್ರನಿರ್ಮಾಪಕರಾದ ಡಿಟಿ.ಪ್ರಕಾಶ್ ರವರು ಮಾತನಾಡಿ ಸಾಂಸ್ಕೃತಿಕ ರಾಜಧಾನಿ ಮೈಸೂರಲ್ಲಿ ಕಲಾಭಿಮಾನಿಗಳು ಸಿನಿಪ್ರೇಕ್ಷಕರು ಹೆಚ್ಚಾಗಿದ್ದಾರೆ
ಮನೆಮಂದಿಯೆಲ್ಲಾ ಆಗಮಿಸಿ ವೀಕ್ಷಿಸುತ್ತಿದ್ದ ಶಾಂತಲಾ ಚಿತ್ರಮಂದಿರ ಕಳೆದ 50ವರ್ಷಗಳಿಂದ ಜನಪ್ರಿಯವಾಗಿತ್ತು, ಕಾಲೇಜು ವಿದ್ಯಾರ್ಥಿಗಳಿಂದ ಹಿರಿಯನಾಗರಿಕವರೆಗೂ ಶಾಂತಲ ಚಿತ್ರಮಂದಿರ ಮೆಚ್ಚುಗೆಯಾಗಿದೆ ಎಂದರೆ ವ್ಯವಸ್ಥಾಪಕ ದೇವರಾಜು ರವರ ಶ್ರಮ ಸೇವೆ ಅಪಾರ, ಬ್ಲಾಕ್ ಟಿಕೆಟ್ ಮಾರಾಟಕ್ಕೆ ಅವಕಾಶ ಕೊಡದೇ ಸಿಂಹಸ್ವಪ್ನವಾಗಿದ್ದರು, ಯಾವುದೇ ಗಲಾಟೆಗಳಿಗೆ ಅವಕಾಶ ನೀಡುತ್ತಿರಲಿಲ್ಲ ಮದ್ಯಪಾನ ಧೂಮಪಾನ ನಿಷೇಧಿಸಿದ ಮೊದಲ ಚಿತ್ರಮಂದಿರವಾಗುತ್ತು, ಜೇಬುಗಳ್ಳರ ಪುಂಡರ ಕಾಟವಿರಲಿಲ್ಲ, ಶಾಂತಲಾ ಚಿತ್ರಮಂದಿರದಲ್ಲಿ ಯಾವುದೇ ಚಿತ್ರಬಿಡುಗಡೆಯಾಗಿದೆ ಅಂದರೆ ಅದು ಕನಿಷ್ಠ 50ದಿನಗಳು ಪ್ರದರ್ಶನ ಕಾಣುತ್ತಿದ್ದವು ಚಿತ್ರನಿರ್ಮಾಪಕರ ವಿತರಕರ ಪಾಲಿಗೆ ಅದೃಷ್ಠ ಚಿತ್ರಮಂದಿರ ಶಾಂತಲವಾಗಿತ್ತು ಎಂದರು,

ನಂತರ ಮಾಜಿನಗರಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ ಮತನಾಡಿ ತಾತಯ್ಯ ಅನಾಥಾಲಯ ಸಂಘದ ಒಡತನದ ಜಾಗದಲ್ಲಿ 50ವರ್ಷಗಳ ಹಿಂದೆ ಪ್ರಾರಂಭವಾದ ಶಾಂತಲ ಚಿತ್ರಮಂದಿರ ಶುಕ್ರವಾರ ಶನಿವಾರ ಬಂದರೆ ಸಾಕು ಸ್ನೇಹಿತರ ಸಂತೋಷಕೂಟಕ್ಕೆ ಸಾಕ್ಷಿಯಾಗುತ್ತಿತ್ತು, ಪರಿಸರ ಕಾಳಜಿಗೆ ಆದ್ಯತೆ ನೀಡಿದ್ದ ವ್ಯವಸ್ಥಾಪಕ ದೇವರಾಜು ರವರು ಸುತ್ತಲು ಗಿಡಮರಗಳನ್ನು ಬೆಳಸಿದ್ದಾರೆ, ಪ್ಲಾಸ್ಟಿಕ್ ನಿಷೇಧ ವಲಯವಾಗಿ ಕಾಪಾಡಿದ್ದರು ಆದರೆ ಇಂತಹ ಚಿತ್ರಮಂದಿರಗಳನ್ನು ರಕ್ಷಿಸುವಲ್ಲಿ ರಾಜ್ಯಸರ್ಕಾರ ಕರ್ನಾಟಕ ಚಲನಚಿತ್ರ ಮಂಡಳಿ ಕ್ರಮವಹಿಸಬೇಕು, ಈಹಿಂದೆ ರಿಜೆನ್ಸಿ ಪ್ರಭಾ ಚಿತ್ರಮಂದಿಗಳಿದ್ದ ಜಾಗದಲ್ಲಿ ಬೇರೆ ಕಟ್ಟಡಗಳು ನಿರ್ಮಾಣವಾಗಿವೆ, ಪದ್ಮ ಥಿಯೇಟರ್ ಸೇರಿದಂತೆ ಹತ್ತಾರು ಚಿತ್ರಮಂದಿರಗಳು ಬಂದ್ ಆಗಲಿದೆ ಎಂಬ ವದಂತಿಗಳಿಗೆ ಇವೆಲ್ಲವನ್ನು ಕಾಪಾಡುವಲ್ಲಿ ಸರ್ಕಾರ ಮುಂದಾಗಬೇಕು, ಇಂತಹ ಚಿತ್ರಮಂದಿರಗಳು ನಾವೆಲ್ಲೂ ಕಾಣಲೂ ಸಾಧ್ಯವಿಲ್ಲ ಮತ್ತೊಮ್ಮೆ ಶಾಂತಲ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ವಾಯಿದೆ ಮುಂದುವರಿಸಿ ಅವಕಾಶ ಕಲ್ಪಿಸಿಕೊಡಲು ತಾತಯ್ಯ ಅನಾಥಾಲಯ ಸಂಘ ಮುಂದಾಗಬೇಕು ಎಂದು ಮನವಿ ಮಾಡಿದರು
ಡಿಟಿ. ಎಸ್ ಪೌಂಡೇಶನ್ ಅಧ್ಯಕ್ಷರಾದ ಡಿಟಿ. ಪ್ರಕಾಶ್, ಪಾತಿ ಪೌಂಡೇಶನ್ ಅಧ್ಯಕ್ಷರು ನಗರಪಾಲಿಕೆ ಸದಸ್ಯರಾದ ಎಂ.ಡಿ ಪಾರ್ಥಸಾರಥಿ, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಕೇಬಲ್ ಮಹೇಶ್, ಲಕ್ಷ್ಮಿ ದೇವಿ, ಎಸ್ ಎನ್ ರಾಜೇಶ್ ,
ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ಚಕ್ರಪಾಣಿ, ಸುಚೀಂದ್ರ, ಹರೀಶ್ ನಾಯ್ಡು ಚಿತ್ರಮಂದಿರದ ಸಿಬ್ಬಂದಿ ವರ್ಗ ಮುಂತಾದವರು ಇದ್ದರು..


Share