ಬಂತು ಬಂತು ಒಂದೇ ಭಾರತ್ ರೈಲು ಮೈಸೂರಿಗೆ ವೀಕ್ಷಿಸಿ

370
Share

ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಗಡವಾಗಿಯೇ ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಗಡವಾಗಿಯೇ

 

 

ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಗಡವಾಗಿಯೇ

ಮೈಸೂರು ತಲುಪಿದ ಹೊಸ ರೈಲು

ಒಂದೇ ಭಾರತ್ ರೈಲು ನಿನ್ನೆ ಪ್ರಧಾನಿಯವರಿಂದ ಉದ್ಘಾಟಿಸಲ್ಪಟ್ಟ ರೈಲು ಇಂದು ಮೊದಲ ಬಾರಿಗೆ ಮೈಸೂರಿಗೆ ಬಂದು ತಲುಪಿತು.
ಮೈಸೂರಿನ ಬೆಂಗಳೂರಿನಿಂದ ಮೈಸೂರಿಗೆ ಪ್ರಥಮ ಬಾರಿಗೆ ಬಂದ ಒಂದೇ ಭಾರತ ರೈಲು ಗಂಟೆಗೆ  1೦3 ಕಿಲೋಮೀಟರ್ ವೇಗದಲ್ಲಿ ಆಗಮಿಸಿದೆ ಹೀಗಾದರೂ 15 ನಿಮಿಷ ಬೇಗ ಬಂದಿದ್ದು ಪ್ರತಿಯೊಬ್ಬ ಪ್ರಯಾಣಿಕರು ರೈಲು ಯಾವ ವೇಗದಲ್ಲಿ ಚಲಿಸುತ್ತಿದೆ ಎಂದು ಟಿವಿಯಲ್ಲಿ ವೀಕ್ಷಿಸಬಹುದಾಗಿದೆ ಮೈಸೂರಿನಿಂದ ಬೆಂಗಳೂರಿಗೆ ಬೆಂಗಳೂರಿನಿಂದ ಮೈಸೂರಿಗೆ ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ ಚಲಿಸಲು ಅನುಮತಿಸಲಾಗಿದೆ.
.. ಮೊದಲ ದಿನವಾದ ಇಂದು ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ತಲುಪಿರುವುದನ್ನು ಗಮನಿಸ ಬೇಕು. ಈ ರೈಲಿನ ಲೋಕೋಪೈಲಟ್ ರೊಂದಿಗೆ ಮಾತನಾಡಿದಾಗ ಇದಕ್ಕೆ ಅವಕಾಶವಿದೆ ಎಂಬುದನ್ನು ತಿಳಿಸಿದ್ದಾರೆ.
ರಮೇಶ್ ಎನ್ನುವ ಸುಮಾರು 35 ವರ್ಷ ಈ ವೃತ್ತಿಯಲ್ಲಿ ಅನುಭವವಿರುವವರು ಇಂದು ಈ ರೈಲನ್ನು ಚಾಲಿಸಿದ್ದಾರೆ.
ಅವರೊಂದಿಗೆ ಕೇರಳ ಮೂಲದ ಮಹಿಳೆಯೊಬ್ಬರು ಲೋಕೋ ಪೈಲಟ್ ಆಗಿರುವುದು ಮತ್ತೊಂದು ವಿಶೇಷ .
ಒಂದೇ ಭಾರತ್ ರೈಲಿನಲ್ಲಿ ಶತಾಬ್ದಿ ರೈಲುಗಿಂತ ಪ್ರಯಾಣಿಸಲು ದರ ಡಬಲ್ ಆಗಿದೆ ಎಂದು ಪ್ರಯಾಣಿಕರು ತಮ್ಮ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ
ಪ್ರಯಾಣಿಕರಲ್ಲಿ ಬಹುತೇಕ ಮಂದಿ ಹೊಸ ರೈಲಿನ ಅನುಭವ ಪಡೆದುಕೊಳ್ಳಲು ಬಂದವರೇ ಹೆಚ್ಚಾಗಿದ್ದರು.
 ಪ್ರಯಾಣಿಕರಿಕೆ ಕಾಫಿ, ಲಘು ಉಪಹಾರ, ನೀರಿನ ಬಾಟಲ್ ನೀಡಲಾಗಿದೆ. ಇದು ಎಷ್ಟು ದಿನ ಜಾರಿಯಲ್ಲರುತ್ತದೋ ಗೊತ್ತಿಲ್ಲ. ಶತಾಬ್ದಿ ರೈಲಿನಲ್ಲಿ ಈಗಾಗಲೇ ಆ ಸೌಲಭ್ಯಗಳನ್ನು ಹಿಂತೆಗೆದು ಕೊಳ್ಳಲಾಗಿದೆ.
ಈ ರೈಲಿನ ಮತ್ತೊಂದು ವಿಶೇಷ ಎಂದರೆ ಪ್ರತಿಯೊಬ್ಬ ಪ್ರಯಾಣಿಕರು ಚಾಲಕರೊಂದಿಗೆ ನೇರ ಸಂಪರ್ಕ ಹೊಂದಬಹುದು.
. ಈ ರೈಲಿನಲ್ಲಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಎರೆಡೂ ಮಾದರಿಯ ಶೌಚಾಲಯಗಳು ಇವೆ.
ಇಂದು ಮೊದಲ ದಿನವಾದ್ದರಿಂದ ಅನೇಕ ಸಂಘ ಸಂಘಟನೆಗಳು ಚಾಲಕರು ಹಾಗೂ ಪ್ರಯಾಣಿಕರಿಗೆ ಸಿಹಿ ಹಂಚಿ ಬರಮಾಡಿಕೊಂಡಿತು.
ಸೆಲ್ಫಿ ಗಳಂತೂ ಎಲ್ಲೆಲ್ಲೂ ಉತ್ಸಾಹದಿಂದ ನಡೆಯುತ್ತಿತ್ತು. ಪ್ರಧಾನಿ ಮೋದಿಯವರ ಭಾವಚಿತ್ರಗಳು ಎಲ್ಲೆಲ್ಲೂ ರಾರಾಜಿಸುತ್ತಿತ್ತು.
….ಮದ್ಯಾಹ್ನ 1 05 ಗಂಟೆಗೆ ಸರಿಯಾಗಿ ವಂದೇ ಭಾರತ್ ರೈಲು ಬೆಂಗಳೂರಿಗೆ ಹೊರಟಿತು.
ವಂದೇ ಭಾರತ್ ರೈಲಿನ ಲೋಕೋ ಪೈಲಟ್ ಹಾಗೂ ಕೆಲವು ಪ್ರಯಾಣಿಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಪ್ಪದೇ ವೀಕ್ಷಿಸಿ …..

Share