ಭಾನುವಾರದ ಕರ್ಫ್ಯೂಗೆ ಸ್ಪಂದಿಸಿದ ಮೈಸೂರು ಜನತೆ

519
Share

ಮೈಸೂರು ಕೊರೊನಾ ಸೋಂಕು ನಿಯಂತ್ರಣದಲ್ಲಿಡಲು ಜಾರಿಗೊಳಿಸಲಾಗಿದ್ದ ನಾಲ್ಕನೇ ಹಂತದ ಮಾರ್ಗಸೂಚಿಯನ್ವಯ ಮೊದಲ ಭಾನುವಾರದ ಕರ್ಫ್ಯೂ ಇಂದಿನಿಂದ ಆರಂಭವಾಗಿದ್ದು ಮೈಸೂರು ನಗರದಲ್ಲಿ ಬೆಳಗ್ಗೆಯಿಂದ ಸಾರ್ವಜನಿಕರು ಚೆನ್ನಾಗಿ ಸ್ಪಂದಿಸಿದ್ದಾರೆ.
ಮೈಸೂರು ನಗರದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದು ಹೆಚ್ಚಾಗಿ ಕಂಡುಬರಲಿಲ್ಲ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಹುತೇಕ ನಿಯಂತ್ರಣದಲ್ಲಿತ್ತು. ಮಾಸ್ಕ್ ಧರಿಸದೆ ಹಾಗೂ ಅನಗತ್ಯವಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತು .ಆಸ್ಪತ್ರೆಗಳಿಗೆ ಲ್ಯಾಬ್ ಗಳಿಗೆ ಮಾರುಕಟ್ಟೆಗೆ ಹೋಗಿ ಬರುತ್ತಿದ್ದ ಜನರು ಮಾತ್ರ ಕಂಡುಬರುತ್ತಿದ್ದರು. ಮೈಸೂರು ನಗರದ ಎಂಜಿ ರಸ್ತೆ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು .ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ತುರ್ತು ಕೆಲಸದ ಮೇಲೆ ಜನರು ಓಡಾಡಲು ಅವಕಾಶ ನೀಡಿದ್ದನ್ನು ಜನತೆ ದುರುಪಯೋಗ ಮಾಡಿಕೊಂಡಿರುವುದು ಇಂದು ಬೆಳಗ್ಗೆ ಹೆಚ್ಚಾಗಿ ಕಂಡು ಬರಲಿಲ್ಲ,
ಲಾಕ್ ಡೌನ್ ಸಮಯದಲ್ಲಿ ಪೊಲೀಸ್ ಇಲಾಖೆ ಯಾವ ಯಾವ ರಸ್ತೆಗಳನ್ನು ಬಂದ್ ಮಾಡಿದ್ದರೊ ಅಲ್ಲಿ ಜನರ ಓಡಾಟಕ್ಕೆ ಬಿಟ್ಟಿರಲಿಲ್ಲ.
ಲಾಕ್ಡೌನ್ ಸಮಯದಲ್ಲಿ ಪೊಲೀಸರು ಹಾಗೂ ಜನರ ಮಧ್ಯೆ ನಡೆಯುತ್ತಿದ್ದ ಮಾತಿನಚಕಮಕಿ ಇಂದು ಕಂಡುಬರಲಿಲ್ಲ .ಪೊಲೀಸರ ಜೊತೆ ಜನತೆ ಉತ್ತಮವಾಗಿ ಸ್ಪಂದಿಸಿದ್ದಾರೆ,
ನಮ್ಮ ಕರ್ತವ್ಯಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ


Share