ಭಾರತದಿಂದ ಮಹತ್ವದ ನಿರ್ಧಾರ: ರಕ್ಷಣಾ ಸಚಿವ ಪ್ರಕಟ

530
Share

ಭಾರತದಲ್ಲಿ ಇನ್ನು ಮುಂದೆ ರಕ್ಷಣಾ ಪರಿಕರಗಳ ತಯಾರು ನವದೆಹಲಿ -ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ “ಆತ್ಮ ನಿರ್ಭರ ಭಾರತ”ಅಂದರೆ ಸ್ವಾವಲಂಬಿ ಭಾರತ ಎಂಬ ಧ್ಯೇಯ ವಾಕ್ಯದಡಿ ಇನ್ನು ಮುಂದೆ ಭಾರತದಲ್ಲೇ ಮಹತ್ತರವಾದ ಶಸ್ತ್ರಾಸ್ತ್ರಗಳನ್ನು ತಯಾರಿಸಲು ನಿರ್ಧರಿಸಲಾಗಿದೆ .ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದೀಗ ಈ ಘೋಷಣೆಯನ್ನು ಮಾಡಿದ್ದು ಸೇನೆಯ ಆಧುನೀಕರಣಕ್ಕೆ ಭಾರತದಲ್ಲೇ ಇನ್ನು ಮುಂದೆ ರಕ್ಷಣಾ ಹೆಲಿಕಾಪ್ಟರ್ ಗಳು ಅಸಾಲ್ಟ್ ರೈಫಲ್ ಗಳನ್ನು ,ಆರ್ಟರಿ ಗನ್ನುಗಳನ್ನು, ರೇಡಾರ್ಗಳನ್ನು ಭಾರತದಲ್ಲಿನ ಖಾಸಗಿ ಉದ್ಯಮಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ನಮ್ಮಲ್ಲೇ ತಯಾರಾಗುವುದು ಎಂದು ತಿಳಿಸಿದರು. ಮುಂದಿನ 6-7 ವರ್ಷಗಳಲ್ಲಿ ಸಂಪೂರ್ಣ ಯುದ್ಧ ಸಾಮಗ್ರಿಗಳನ್ನು ನಮ್ಮಲ್ಲಿ ನೂರಕ್ಕೆ ನೂರಷ್ಟು ತಯಾರಿಸುವ ಮಹತ್ವದ ನಿರ್ಧಾರ ಇದಾಗಿದೆ .ಸದ್ಯಕ್ಕೆ 101 ವಸ್ತುಗಳನ್ನು ಗುರುತಿಸಿದ್ದು ಇವುಗಳ ತಯಾರಿಕೆಗಾಗಿ ಸುಮಾರು 4 ಲಕ್ಷ ಕೋಟಿ ರೂ ತೆಗೆದಿರಿಸಲಾಗಿದೆ, ಎಂದು ತಿಳಿಸಿದ್ದಾರೆ .ಈ ವರ್ಷದ ಆತ್ಮ ನಿರ್ಬರ ಭಾರತ ಯೋಜನೆ ಅಡಿ ಇದಕ್ಕೆಂದು 52 ಸಾವಿರ ಕೋಟಿಗಳನ್ನು ಮೀಸಲಿಡಲಾಗಿದೆ. ಮೊದಲ ಹಂತವಾಗಿ 2021ರ ವೇಳೆಗೆ ಶಸ್ತ್ರ ಸಜ್ಜಿತ 200 ವಾಹನಗಳನ್ನು ತಯಾರಿಸಲು ಐದು ಸಾವಿರ ಕೋಟಿ ರೂ ವ್ಯಯ ಮಾಡಲಾಗುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ .ಪ್ರತಿ ವರ್ಷ ಸಾವಿರಾರು ಕೋಟಿ ರೂಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇನ್ನು ಮುಂದೆ ಇರುವುದಿಲ್ಲ.ಸಾವಿರಾರು ಜನರಿಗೆ ಉದ್ಯೋಗ ಅವಕಾಶಗಳು ದೊರೆಯುವಂತಾಗಿದೆ.ರಕ್ಷಣಾ ವಿಷಯದಲ್ಲಿ ಸ್ವತಂತ್ರ್ ಭಾರತದ ನಂತರ ಇದು ಒಂದು ದೊಡ್ಡ ಯೋಜನೆ ಆಗಿದ್ದು ಸ್ವಾವಲಂಬದೆಡೆ ಭಾರತವನ್ನು ಕೊಂಡೊಯ್ಯುವ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ನಿರ್ಧಾರವಾಗಿದೆ.ಎಂದು ರಾಜನಾಥ್ ಸಿಂಗ್ ಈ ಐತಿಹಾಸಿಕ ನಿರ್ಧಾರವನ್ನು ಇಂದು ಬೆಳಿಗ್ಗೆ ಟ್ವೀಟ್ ಮಾಡುವ ಮುಖಾಂತರ ಪ್ರಕಟಿಸಿದ್ದರು .


Share