ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 42

1113
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 42
ನಿನ್ನೆಯ ದಿನ ಶ್ರೀನಿವಾಸನು ಭೀಮ ಎಂಬ ಕುಂಬಾರನ ಭಕ್ತಿಯ ಬಗ್ಗೆ ಹೇಳತೊಡಗಿದನು.
( ವಿ.ಸೂ. – ವಾಚಕ ಹಾಗೂ ವೀಕ್ಷಕರಲ್ಲಿ ಒಂದು ಮನವಿ. ತಾಂತ್ರಿಕ ದೋಷದಿಂದ ಇಂದಿನ ಸಂಚಿಕೆಯಲ್ಲಿ ಸ್ವಲ್ಪ ನಿನ್ನೆಯ ಕಥೆಯೆ ಮರು ಪ್ರಸಾರವಾಗಿದೆ. 15ನೇ ನಿಮಿಷದಿಂದ ಇಂದಿನ ಕಥೆ ಆರಂಭವಾಗುತ್ತದೆ ಎನ್ನುವ ವಿಷಯವನ್ನು ಗಮನಕ್ಕೆ ತರಲು ಇಚ್ಛಿಸುತ್ತೇವೆ. )
ತೋಂಡಮಾನನು ಭೀಮನನ್ನು ಹುಡುಕಿಕೊಂಡು ಹೊರಟ. ಭೀಮನಿದ್ದ ನಗರ ನೋಡಿ ತೋಂಡಮಾನನಿಗೆ ಆಶ್ಚರ್ಯವಾಯಿತು. ಎಲ್ಲೆಲ್ಲೂ ಗೋವಿಂದ ನಾಮಸ್ಮರಣೆ. ಎಲ್ಲಾ ಚರಾಚರ ವಸ್ತು, ಜೀವರಾಶಿಗಳಲ್ಲೂ ಗೋವಿಂದ ನಾಮಸ್ಮರಣೆಯೆ ಕೇಳಿ ಬರುತ್ತಿತ್ತು. ಯಾರಿಗೂ ಯಾರಮೇಲೂ ಭೇದಭಾವವೆ ಕಂಡುಬರಲಿಲ್ಲ.
ಇನ್ನು ಭೀಮನ ಮನೆ ಪ್ರವೇಶಿಸಿದ. ಅಲ್ಲಿನ ದೃಶ್ಯ ನೋಡಿ ತೋಂಡಮಾನನ ಅಹಂಕಾರ ಸಂಪೂರ್ಣವಾಗಿ ಇಳಿದು ಹೋಯಿತು. ಅದು ಒಂದು ಚಿಕ್ಕ ಗೂಡು. ಆದರೆ ಅಂತಹ ಶುಭ್ರತೆ ಇತ್ತು. ಸುವಾಸನೆಯಿಂದ ಕೂಡಿತ್ತು ಆ ಸ್ಥಳವೆಲ್ಲ. ಮನೆಯು ಮಂದಿರದಂತೆ ಕಂಡುಬಂದಿತು. ಇದೆಲ್ಲವನ್ನು ನೋಡಿದ ತೋಂಡಮಾನನು ಭೀಮನ ಪೂಜಾ ವಿಧಿ ಏನೆಂದು ಕೇಳಲು ಭೀಮನು ರಾಜನನ್ನು ನೋಡಿ ಸಂತೋಷದಿಂದ ಸ್ವಾಗತಿಸಿ ತನ್ನ ಪೂಜೆ ಬಗ್ಗೆ ಯಾರು ಹೇಳಿದರು ಎಂದು ಕೇಳುತ್ತಾನೆ. ತೋಂಡಮಾನನು ಸಾಕ್ಷಾತ್ ಶ್ರೀನಿವಾಸ ನೇ ಹೇಳಿದುದಾಗಿ ಹೇಳಲು ಭೀಮನು ಸಂತಸಗೊಂಡು ಇದು ತನಗೆ ತಾನೇ ಬಂದಿರುವುದಾಗಿ ಹೇಳಿ ಇದರಿಂದ ತನ್ನ ಪೂರ್ವ ಜನ್ಮದ ವೃತ್ತಾಂತವು ನೆನಪಿಗೆನಹಂತು. ಹಿಂದಿನ ಜನ್ಮದಲ್ಲಿ ಸ್ವಾಮಿಯು ಯಾವಾಗ ತೋಂಡಮಾನ ಬಂದು ತನ್ನನ್ನು ಪೂಜಿಸುತ್ತಾನೋ ಆಗ ತನಗೆ ಮೋಕ್ಷವು ದೊರೆಯುವುದಾಗಿ ಹೇಳಿರುವುದನ್ನು ನೆನೆಸಿಕೊಂಡನು.
ಅಷ್ಟರಲ್ಲಿ ಗರುಕಮಂತನೇರಿ ವೆಂಕಟೇಶ್ವರನು ಅಲ್ಲಿಗೆ ಬಂದನು. ಸ್ವಾಮಿಯನ್ನು ನೋಡಿ ಆನಂದಭರಿತನಾಗಿ ಸ್ವಾಮಿಯನ್ನುಕುರಿತು ಈ ರೀತಿ ಹೇಳುತ್ತಾನೆ. ತಾನು ಅತಿ ಸಾಮಾನ್ಯನು, ಸ್ವಾಮಿಗೆ ಕೊಡಲು ತನ್ನ ಬಳಿ ಏನೂ ಇಲ್ಲವೆಂದು ಹೇಳಲು ಅವನ ಪತ್ನಿ ತಕ್ಷಣ ಬಂದು ತಾನು ಅನ್ನ ಮಾಡಿರುವುದಾಗಿ ಅದನ್ನು ಸ್ವೀಕರಿಸುವಿರ ಎನ್ನಲು ಸ್ವಾಮಿಯು ಸಂತೋಷದಿಂದ ಕೈಚಾಚುತ್ತಾನೆ. ಗಂಡಹೆಂಡಿರಿಬ್ಬರೂ ಭಕ್ತಿಯ ಪರಾಕಾಶೆಯಿಂದ ಏನೂ ಮಾಡಲು ತೋಚದೆ ಪರದಾಡುತ್ತಿದ್ದದ್ದನ್ನು ನೋಡಿ ವೇಂಕಟೇಶ್ವರನು ಸಂತೋಷಗೊಂಡನು.
ಲಕ್ಷ್ಮಿ ಯನ್ನು ಕರೆದು ಅವಶ ಆಭರಣ ಗಳನ್ನು ತೆಗೆದು ಕೊಟ್ಟನು. ವಿಷ್ಣು ಧೂತರು ಬಂದು ಭೀಮನನಿನ್ನು ವಿಮಾನದಲ್ಲಿ ಕೂರಿಸಿಕೊಂಡು ಹೊರಡುತ್ತಾರೆ.
ತೋಂಡಮಾನನು ತನ್ನ ತಪ್ಪಿನ್ನು ಮನ್ನಿಸಿ ತನ್ನನ್ನೂ ಭೀಮನಂತೆ ಉದ್ದರಿಸಲು ಕೇಳಿಕೊಂಡಾಗ, ಗೋವಿಂದ ತೋಂಡಮಾನನಿಗೆ ಈ ಪುಷ್ಕರಿಣಿಯಲ್ಲಿ ಮುಳುಗಿ ದೇಹ ತ್ಯಾಗ ಮಾಡಲು ಹೇಳುತ್ತಾವೆ. ವೆಂಕಟೇಶ್ವರನು ಬರುವ ಜನ್ಮದಲ್ಲಿ ಆದುವುದೆಮದು ಹೇಳಿ ಅಲ್ಲಿಂದ ನಿಷ್ಕರ್ಮಿಸುತ್ತಾನೆ.
ಎಂಬುದನ್ನು ಶ್ರೀ ಸ್ವಾಮೀಜಿಯವರ ಮುಖಾರವಿಂದದಲ್ಲೆ ಕೇಳಿ, ನೋಡಿ, ಶೇರ್ ಮಾಡೇಣ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share