ಭೂ ಸುಧಾರಣೆ ಕಾಯ್ದೆ ತಿದ್ದುಪಡಿ: ವಿಚಾರ ಸಂಕಿರಣಕ್ಕೆ ಚಾಲನೆ

374
Share

ಮೈಸೂರಿನಲ್ಲಿ ಇ0ದು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ : ಖಾಸಗೀಕರಣದ ನೀತಿಗಳು ಪರಿಣಾಮ ಮತ್ತು ಸವಾಲುಗಳು ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರಗೋಷ್ಠಿ ಮತ್ತು ಸಂವಾದವನ್ನು ಹಮ್ಮಿಕೊಳ್ಳಲಾಗಿದೆ . ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಲನೆ ನೀಡಲಾಯಿತು

ಭಾರತವನ್ನು ದೆವ್ವ, ಭೂತಗಳು ಆಳ್ವಿಕೆ ಮಾಡುತ್ತಿವೆ ಎನಿಸುತ್ತದೆ: ದೇವನೂರು ಮಹಾದೇವ ಕಳವಳ

ಮೈಸೂರು: ಕೊರೊನಾ ಭೀಕರ ವಾತಾವರಣದಲ್ಲಿ ಜನಸಮುದಾಯ ಧ್ವನಿ ತೆಗೆಯಲು ಕಷ್ಟಕರವಾದ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಂಡು, ಖಾಸಗಿ ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ಸರಸ್ವವನ್ನೂ ಧಾರೆ ಎರೆಯುವ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿರುವುದನ್ನು ಗಮನಿಸಿದರೆ ದೆವ್ವ, ಭೂತಗಳು ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ ಎಂದೆನಿಸುತ್ತದೆ ಎಂದು ಸಾಹಿತಿ ದೇವನೂರು ಮಹಾದೇವ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ, ಜನಚೇತನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸಿದ್ಧಾರ್ಥನಗರ ಕನಕ ಭವನದಲ್ಲಿ ಆಯೋಜಿಸಿದ್ದ “ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಖಾಸಗೀಕರಣ ನೀತಿಗಳು, ಪರಿಣಾಮ ಮತ್ತು ಸವಾಲುಗಳ” ಕುರಿತು ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ಹೊರಡಿಸುವ ಸುಗ್ರೀವಾಜ್ಞೆ ಕೂಡ ರೈತರ ಏಳಿಗೆ ಎನ್ನುತ್ತಲೇ ಅವರ ಬದುಕನ್ನೇ ಎತ್ತಂಗಡಿ ಯಾಗುತ್ತದೆ. ಇದರ ಮೂಲ ಹುಡುಕಿದರೆ ಇದರ ಕಾರಸ್ಥಾನ ತಮಗೆಲ್ಲಾ ಗೊತ್ತಿರಬಹುದು. ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ಪ್ರಗತಿಪರವಾದ 2013ರ ಭೂಸ್ವಾಧೀನ ಕಾಯ್ದೆಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 2015ರಲ್ಲಿ ಸುಗ್ರೀವಾಜ್ಞೆ ತಂದು ಭೂಸುಧಾರಣೆಯ ಬುಡವನ್ನೇ ಕತ್ತರಿಸಿ ಧ್ವಂಸ ಮಾಡಲು ಹವಣಿಸಿತ್ತು. ಬ್ರಿಟಿಷ್ ಕಾಲದ 1894ರ ಕಾಯ್ದೆಯಲ್ಲಿ ಭೂಮಿಯ ಮಾಲೀಕರು ಆಕ್ಷೇಪ ಎತ್ತುವ ಅವಕಾಶವಾದರೂ ಇದೆ. ಆದರೆ ಆ ಬಿಜೆಪಿ ಸುಗ್ರೀವಾಜ್ಞೆ ಇದನ್ನು ಕಿತ್ತುಕೊಂಡಿತ್ತು. ಈ ಸುಗ್ರೀವಾಜ್ಞೆ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳು ಬಿಜೆಪಿ ಸುಗ್ರೀವಾಜ್ಞೆಯನ್ನು ತಡೆಗಟ್ಟುತ್ತದೆ. ಆಗ ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಹಿಂಪಡೆಯುತ್ತದೆ, ಆದರೆ ಅದನ್ನು ರದ್ದು ಮಾಡಿಲ್ಲ.
ಇದರ ವಾಸನೆ ಹಿಡಿದು ನೋಡುವುದಾದರೆ ಟೆಸ್ಟಿಂಗ್ ಡೋಸ್ ಎಂಬಂತೆ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆ ತಂದಿರಬಹುದು ಎನಿಸುತ್ತದೆ. ಆ ಮೂಲಕ ರೈತರ ಹಿತಕಾಯುವ ದೇವರಾಜ ಅರಸು ಅವರ 1974ರ ಕಾಯ್ದೆಯನ್ನು ನಿರ್ದಯವಾಗಿ ಕತ್ತರಿಸಿ ಹಾಕಿದ್ದು, ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಮಾಹಿತಿ ನೀಡಲಿದ್ದಾರೆ.
ಕೊರೊನಾ ಎಂಬ ದೇವರ ಆಟದಿಂದ ರಾಜ್ಯಗಳ ಬಾಬ್ತು ನೀಡಲು ಆಗುತ್ತಿಲ್ಲ ಎನ್ನುವ ಅರ್ಥ ಸಚಿವರನ್ನು ಭಾರತ ಪಡೆದಿದೆ. ಭಾರತದ ಒಕ್ಕೂಟ ವ್ಯವಸ್ಥೆಯ ಬುಡವನ್ನೇ ಕಡಿದು ಹಾಕಿ, ರಾಜ್ಯಗಳ ಸ್ಥಾನವನ್ನು ದೈನೇಸಿ ಸ್ಥಾನಕ್ಕೆ ತಳ್ಳುವ ಜಿಎಸ್ಟಿ ತಂದು ದೆವ್ವದ ಆಟ ಆಡಿದವರು ಯಾರು? ದೇಶದಲ್ಲಿ ನೋಟ್ಬ್ಯಾನ್ ಜಾರಿಗೊಳಿಸಿ ಜನರ ಬದುಕನ್ನು ದುಸ್ವಪ್ನ ಮಾಡಿ ಭೂತದ ಆಟ ಆಡಿದವರು ಯಾರು ಎಂದು ಪ್ರಶ್ನಿಸಿದರು.


Share