ವೆಂಕಟಕೃಷ್ಣಯ್ಯ ತಾತಯ್ಯ ರವರ176 ನೇ ಜಯಂತಿಯ ಅಂಗವಾಗಿ ಉದ್ಯಾನವನದಲ್ಲಿ ಆಚರಣೆ, ಮೈಸೂರು

413
Share

ವೃದ್ಧಪಿತಾಮಹ ದಯಾಸಾಗರ ಮೈಸೂರು ಸಂಸ್ಥಾನದ ರಾಜಗುರು ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯ ರವರ176 ನೇ ಜಯಂತಿಯ ಅಂಗವಾಗಿ ಮೈಸೂರು ನಗರ ಬ್ರಾಹ್ಮಣ ಸಂಘದ ವತಿಯಿಂದ ನಗರದ ಬಸ್ ನಿಲ್ದಾಣದ ಎದರಿನ ತಾತಯ್ಯ ಉದ್ಯಾನವನದಲ್ಲಿ ಆಚರಿಸಲಾಯಿತು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ರವರು ತಾತಯ್ಯ ರವರ ಪ್ರತಿಮೆಗೆ ಪುಷ್ಪಮಾಲಾರ್ಪಣೆ ಮಾಡುವ ಮುಖಾಂತರ ಚಾಲನೆ ನೀಡಿದರು,

ಆ ನಂತರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ರವರು ಮಾತನಾಡಿ ಇಂದು ಶಿಕ್ಷಕರ ದಿನಾಚರಣೆ ದೇಶಾದ್ಯಂತ ಆಚರಿಸಲಾಗುತ್ತದೆ. ಅದರ ಜೊತೆಯಲ್ಲೆ ಮೈಸೂರು ಸಂಸ್ಥಾನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಂಸ್ಕೃತಿಕತೆ ಸಂಸ್ಕಾರ ಹೆಚ್ಚಾಗಲು ಯೋಜನೆಯ ಮುನ್ನುಡಿ ಬರೆದವರು ವೆಂಕಟಕೃಷ್ಣಯ್ಯರವರು, ಗಾಂಧೀಜಿ ರವರು ಮೈಸೂರಿಗೆ ಬಂದಾಗ the old man of mysore empire ವೃದ್ಧ ಪಿತಾಮಹ ಎಂದು ಬಣ್ಣಿಸಿದರು ದಯಾಸಾಗರ ತಾತಯ್ಯನವರು ಸ್ವತಃ ಶಿಕ್ಷಕರೇ ಆಗಿದ್ದರು ಅವರ ಅನಾಥಾಲಯದಲ್ಲಿ ಶಿಕ್ಷಣ ಪಡೆದ ಸಹಸ್ರಾರು ಮಂದಿ ಇಂದು ವಿಶ್ವದ ಅನೇಕ ಕಡೆ ಉನ್ನತ ಸ್ಥಾನದಲ್ಲಿರುವುದು ನಮ್ಮ ಮೈಸೂರಿಗೆ ಹೆಮ್ಮೆಯ ವಿಚಾರ ಎಂದರು,

ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮತನಾಡಿ ಸಾಧಾರಣ ಶಿಕ್ಷಕರಾಗಿದ್ದ ತಾತಯ್ಯನವರಿಗೆ ಘನ ಸರ್ಕಾರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಿದ್ದಾರೆ, ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ನಗರ ಪಾಲಿಕೆ ಮತ್ತು ಅನಾಥಾಲಯ ಹಳೆಯ ವಿದ್ಯಾರ್ಥಿ ಸಂಘದವರು ತಾತಯ್ಯ ಜನ್ಮ ದಿನಾಚರಣೆ ಆಚರಿಸುತ್ತಾ ಬಂದಿದೆ ತಾತಯ್ಯನವರಿಗೆ ದಕ್ಷಿಣದ ಬಾಲಗಂಗಾಧರ ತಿಲಕ್ ಹಾಗೂ ಕನ್ನಡ ಪತ್ರಿಕೋದ್ಯಮದ ಭೀಷ್ಮ ಪಿತಾಮಹ ಎಂದೇ
ಕರೆಯಲಾಗಿದೆ . ಹಾಗಾಗಿ ಮಹಾತ್ಮರಾದ ತಾತಯ್ಯರವರ ಜಯಂತಿಯನ್ನು ಮುಂದಿನ ವರ್ಷದಿಂದ ಪುರಭವನದಲ್ಲಿ ಆಚರಿಸಲು ನಗರಪಾಲಿಕೆ ಜಿಲ್ಲಾಡಳಿತ ಮುಂದಾಗಬೇಕು ಮತ್ತು ಸಮಾಜದಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಸರ್ಕಾರ ಗುರುತಿಸಿ “ತಾತಯ್ಯ ಪ್ರಶಸ್ತಿ ಪ್ರಧಾನ ನೀಡಲು ಮುಂದಾಗಬೇಕು ಎಂದರು

ನಂತರ ಅಧ್ಯಕ್ಷತೆ ವಹಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್ ರವರು ಮಾತನಾಡಿ ಹಳೇ ಮೈಸೂರು ಸಂಸ್ಥಾನದಲ್ಲಿ ಮಾಧ್ಯಮ ಸಂಪರ್ಕವಿಲ್ಲದ ಕಾಲದಲ್ಲಿ ದುಡಿಮೆ ಮತ್ತು ಶಿಕ್ಷಣ ಬಹಳ ಕಷ್ಟಕರವಾಗಿತ್ತು ಕನ್ನಡದ ಸಣ್ಣ ಪುಟ್ಟ ಪತ್ರಿಕೆಗಳನ್ನು ಪ್ರಾರಂಭಿಸಿದ ದಿ ತಾತಯ್ಯ ಅವರು ‘ಹಿತಬೋಧಿನಿ ‘ಸಾಧ್ವಿ’ ಸೇರಿದಂತೆ ಇನ್ನಿತರ ಪತ್ರಿಕೆಗಳನ್ನು ಹೊರ ತರುವುದರೊಂದಿಗೆ ಸಾಮನ್ಯವ್ಯಕ್ತಿಯ ಬದುಕಿಗೆ ಸ್ಪೂರ್ಥಿಯಾದರು ಶಿಕ್ಷಣ ಸಂಸ್ಥೆಗೆ ಅವರ ಕೊಡುಗೆ ಅಪಾರ ಮೈಸೂರು ಸಂಸ್ಥಾನಕ್ಕೆ ಅಭಿವೃದ್ಧಿ ಆಡಳಿತಾತ್ಮಕವಾಗಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು ಇಂದು ನಗರಪಾಲಿಕೆ ಅವರ ಜನ್ಮದಿನೋತ್ಸವವನ್ನು ಅರ್ಥಪೂರ್ಣವಾಗಿ ಸ್ಮರಿಸುವ ಮೂಲಕ ಆಚರಿಸುತ್ತಿದೆ ಬಹಳ ದಿನಗಳಿಂದ ತಾತಯ್ಯ ಬಡಾವಣೆ ಮೂಡ ವತಿಯಿಂದ ನಿರ್ಮಿಸಬೇಕೆನ್ನುವ ಮನವಿಯಿದೆ ಅದನ್ನು ಕರ್ನಾಟಕ ಸರ್ಕಾರದ ಗಮನಕ್ಕೆ ತಂದು ಯೋಜನೆ ರೂಪಿಸಲಾಗುವುದು ಎಂದರು,

ತಾತ್ಯಯ್ಯ ನವರ 176ನೇ ಜಯಂತಿಯ ಆಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಶಾಸಕರಾದ ಎಲ್. ನಾಗೇಂದ್ರ, ಮೂಡಾ ಅಧ್ಯಕ್ಷ ಹೆಚ್. ವಿ ರಾಜೀವ್, ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಾಕಾಶ್, ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ, ಬ್ರಾಹ್ಮಣ ಮಂಡಳಿ ಸದಸ್ಯ ಎಂ.ಆರ್ ಬಲಕೃಷ್ಣ,ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್. ಎನ್ ಶ್ರೀಧರಮೂರ್ತಿ, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಕಡಕೊಳ ಜಗದೀಶ್, ಸುಚೀಂದ್ರ, ಚಕ್ರಪಾಣಿ, ಅರುಣ್, ಪ್ರಶಾಂತ್, ಮುಂತಾದವರು ಇದ್ದರು.


Share