ಮೈಸೂರು ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ .

291
Share

ಸಿ.ಸಿ.ಬಿ ಪೊಲೀಸರಿಂದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ . 31 ಗ್ರಾಂ MDMA , ECSTASY TABLETS ಮತ್ತು LSD ಡ್ರಗ್ಸ್ , ರೂ 5000 / – ನಗದು ಹಣ , ಎರಡು ಮೊಬೈಲ್ ಹಾಗೂ ಒಂದು ಬೈಕನ್ನು ನಗರದ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ಸಿಸಿಬಿ ಪೊಲೀಸರು ದಿನಾಂಕ 23/12/2022 ರಂದು ಮೈಸೂರು ನಗರದ ಕುವೆಂಪುನಗರ ಕೆ.ಬ್ಲಾಕ್ ಆದಿಚುಂಚನಗಿರಿ ರಸ್ತೆಯಲ್ಲಿ ದಾಳಿ ಮಾಡಿ ಸದರಿ ಸ್ಥಳದಲ್ಲಿ ಒಂದು ಬುಲೆಟ್ ಬೈಕ್‌ನ್ನು ನಿಲ್ಲಿಸಿಕೊಂಡು ಅಲ್ಲಗೆ ಗಿರಾಕಿಗಳನ್ನು ಬರಮಾಡಿಕೊಂಡು ಅವರುಗಳಗೆ MDMA , ECSTASY TABLETS ಮತ್ತು LSD ಡ್ರಗ್ಸ್ ಅನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ , ಅವರ ಬಳಿ ಇದ್ದ 31 ಗ್ರಾಂ ತೂಕದ MDMA , ECSTASY TABLETS ಮತ್ತು LSD ಪೇಪರ್ , ರೂ 5000 / – ನಗದು ಹಣ , ಎರಡು ಮೊಬೈಲ್ ಫೋನ್‌ಗಳು ಹಾಗೂ ಒಂದು ಬೈಕ್ ವಶಪಡಿಸಿಕೊಂಡಿರುತ್ತಾರೆ . ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಈ ಇಬ್ಬರು ಆರೋಪಿಗಳ ಪೈಕಿ 1 ನೇ ಆರೋಪಿ ಮೈಸೂರಿನ ಜೆ.ಎಸ್.ಎಸ್ . ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು , 2 ನೇ ಆರೋಪಿ ವಕೀಲ ವೃತ್ತಿ ಮಾಡುತ್ತಿರುವುದು ವಿಚಾರಣಾ ಕಾಲದಲ್ಲಿ ತಿಳಿದು ಬಂದಿರುತ್ತದೆ . ಆರೋಪಿತರು ಸದರಿ ಮಾದಕ ವಸ್ತುವನ್ನು ಎಲ್ಲಿಂದ ತೆಗೆದುಕೊಂಡು ಬರುತ್ತಿದ್ದರು ಹಾಗೂ ಮೈಸೂರಿನಲ್ಲಿ ಯಾರು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ . -2 ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ , ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಶ್ರೀಮತಿ ಗೀತ ಎಂ.ಎಸ್ . ಐ.ಪಿ.ಎಸ್ ರವರ ಹಾಗೂ ಸಿ.ಸಿ.ಬಿ ಘಟಕದ ಎ.ಸಿ.ಪಿ ರವರಾದ ಶ್ರೀ . ಸಿ.ಕೆ. ಅಶ್ವತ್ಥನಾರಾಯಣ ರವರುಗಳ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್‌ ಶ್ರೀ . ಮಲ್ಲೇಶ್ , ಎ , ಪಿ.ಎಸ್.ಐ ಶ್ರೀಮತಿ ಪ್ರತಿಭಾ ಅಂಗವಾಡ ಸಿಬ್ಬಂದಿಗಳಾದ ಅನಿಲ್ ಎಂ , ಸುಭಾನಲ್ಲಾ ಬಾಲದಾರ , ಗಣೇಶ್ , ಶ್ರೀನಿವಾಸ್ ಪ್ರಸಾದ್ , ಜೋಸೆಫ್ ನರೋನಾ , ರಾಧೇಶ್ , ಶ್ರೀನಿವಾಸ್ , ಅರುಣ್ ಕುಮಾರ್‌ , ಮಮತ ರವರು ಮಾಡಿರುತ್ತಾರೆ . ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಶ್ರೀ ಬಿ . ರಮೇಶ್ ಐ.ಪಿ.ಎಸ್ . ರವರು ಪ್ರಶಂಸಿಸಿರುತ್ತಾರೆ

Share