ಹಾಡು ಹಗಲೇ ಕೋಟಿ ರೂ ದರೋಡೆ

265
Share

ಗುರುಗ್ರಾಮ:
ಸೋಮವಾರ ಹಾಡು ಹಗಲಲ್ಲೆ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು ನಗದು ಸಂಗ್ರಹ ಕಂಪನಿಯ ವ್ಯಾನ್‌ನಿಂದ ಸುಮಾರು 1 ಕೋಟಿ ರೂ. ದರೋಡೆ ಮಾಡಿರುವ ಘಟನೆ ವರದಿಯಾಗಿದೆ.
ಆರೋಪಿಗಳು ಚಾಲಕ ಮತ್ತು ಸಿಬ್ಬಂದಿಯ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾರೆ. ನಂತರ ಅವರನ್ನು ಬಂದೂಕು ತೋರಿಸಿ ಒತ್ತೆಯಾಳಾಗಿ ಇಟ್ಟುಕೊಂಡು ಸುಮಾರು 1 ಕೋಟಿ ರೂಪಾಯಿ ನಗದು ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಧ್ಯಾಹ್ನ 2:45 ರ ಸುಮಾರಿಗೆ ಎಸ್ & ಐಬಿ ಕಂಪನಿಯ ಪಉದ್ಯೋಗಿಗಳು ಸುಭಾಷ್ ಚೌಕ್ ಬಳಿಯ ಸೋಹ್ನಾ ರಸ್ತೆಯಲ್ಲಿರುವ ಮಾರುತಿ ಶೋರೂಮ್‌ನಿಂದ ನಗದು ಸಂಗ್ರಹಿಸಲು ಹೋದಾಗ ಈ ಘಟನೆ ನಡೆದಿದೆ.
ಕಂಪನಿಯ ಉದ್ಯೋಗಿ ಅಖಿಲೇಶ್ ಅವರು ನಗದು ಸಂಗ್ರಹಿಸಲು ಶೋರೂಮ್‌ಗೆ ಹೋದಾಗ ವ್ಯಾನ್ ಶೋರೂಮ್ ಹೊರಗೆ ನಿಂತಿತ್ತು.
ವ್ಯಾನ್ ಚಾಲಕ ರಂಜಿತ್ ಮತ್ತು ಗಾರ್ಡ್ ವಿಪಿನ್ ವ್ಯಾನ್‌ನಲ್ಲಿದ್ದರು, ನಂತರ ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಬಂದು ಅವರನ್ನು ಗನ್ ಪಾಯಿಂಟ್‌ನಲ್ಲಿ ಹಿಡಿದು ನಂತರ ಹಣದೊಂದಿಗೆ ಪರಾರಿಯಾಗಿದ್ದಾರೆ.
ಅಪರಾಧ ನಡೆದ ಸ್ಥಳದಿಂದ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅವರು 10 ಕಡೆ ಹಣವನ್ನು ಸಂಗ್ರಹಿಸಿದ್ದರು ಮತ್ತು ವ್ಯಾನ್‌ನಲ್ಲಿ 1 ಕೋಟಿ ರೂ.ಗೂ ಹೆಚ್ಚು ಹಣವಿತ್ತು, ಅದನ್ನು ಸೆಕ್ಟರ್ 53 ರ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಮಾಡಬೇಕಾಗಿತ್ತು ಎಂದು ಶ್ರೀ ವಿಪಿನ್ ಪೊಲೀಸರಿಗೆ ತಿಳಿಸಿದ್ದಾರೆ.
ಎಸಿಪಿ (ಸದರ್) ಅಮನ್ ಯಾದವ್, “ನಾವು ಕಾರ್ಯಾಚರಣೆ ಮಾಡುತ್ತಿದ್ದೇವೆ ಮತ್ತು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಹೇಳಿದ್ದಾರೆ.


Share