ಮೈಸೂರು-ಎನ್ ಟಿ ಎಂ (NTM)-ಶಾಲೆ ಉಳಿಸಿ ಪತ್ರ ಚಳುವಳಿ

392
Share

 

ಮೈಸೂರು ನಗರದ ಹೃದಯಭಾಗದಲ್ಲಿರುವ ಮಹಾರಾಣಿಯವರ ಸರ್ಕಾರಿ ಮಾದರಿ ಹಿರಿಯ ಪ್ರಾಮಿಕ ಶಾಲೆ ಎನ್ ಟಿಎಂಎಸ್

ಉಳಿಸಿಕೊಡಿ ಎಂದು ರಾಮಕೃಷ್ಣಾಶ್ರಮದ ಬೇಲೂರು ಮಠಕ ಪತ್ರ ಬರೆಯುವ ಚಳುವಳಿಯನ್ನು ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಶನಿವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಒಕ್ಕೂಟದ ಮುಖಂಡ ಮತ್ತು ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಅವರು ಅಂಚೆಪೆಟ್ಟಿಗೆಗೆ ಶಾಲೆ ಉಳಿಸಿ ಎಂಬ ಬರೆದಿರುವ ಪತ್ರವನ್ನು ಹಾಕುವುದರಮಲಕ ಚಳುವಳಿಗೆ ಚಾಲನೆ ನೀಡಿದರು.
ಇಂದು ಸಾಂಕೇತಿಕವಾಗಿ ಪತ್ರ ಬರೆಯುವ ಚಳುವಳಿ ಆರಂಭಗೊಂಡಿದ್ದು ನಗರದಾದ್ಯಂತ ಶಾಲೆ ಉಳಿಸಿ ಎಂಬ ಲಕ್ಷಕ್ಕೂ ಹೆಚ್ಚು ಪತ್ರವನ್ನು ಬರೆಯುವ ಕಾರ್ಯಕ್ರಮ ಒಕ್ಕೂಟದ ನಿರ್ಧಾರವಾಗಿದೆ ಎಂದು ಅವರು ತಿಳಿಸಿದರು
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೋಹನ್ ಕುಮಾರ್ ಗೌಡ ಅವರು ಕೋಲ್ಕೊತ್ತಾದ ಬೇಲೂರು ಮಠದ ರಾಮಕೃಷ್ಣ ಆಶ್ರಮ ಪ್ರಮುಖರು ಮೈಸೂರು ರಾಮಕೃಷ್ಣ ಆಶ್ರಮದ ಪ್ರಮುಖರಿಗೆ ಬುದ್ಧಿವಾದ ಹೇಳುವಂತೆ ಅವರು ಮಠದ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ. ರಾಮಕೃಷ್ಣ ಆಶ್ರಮಕ್ಕೆ ಈಗಾಗಲೇ ಸ್ಥಳ ಬೇಕಾದಷ್ಟು ಇದು ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಮತ್ತು ಸಾಹಿತಿ ಬನ್ನೂರು ರಾಜು ಅವರು ಭಾಗವಹಿಸಿದ್ದರು

Share