ಮೈಸೂರು ಜಿಲ್ಲೆ ಅಂತಿಮ ಮತದಾನ ವಿವರ-ಹಾಗೂ ಮತಗಟ್ಟೆಗಳ ವಿಶೇಷ

37
Share

 

 

ಮೈಸೂರು ಶೇ. ಮತದಾನ
ಒಟ್ಟು ಜಿಲ್ಲೆ- ಶೇ.75.04
ಪಿರಿಯಾಪಟ್ಟಣ:ಶೇ.84.42
ಕೃಷ್ಣರಾಜನಗರ:ಶೇ. 85.01
ಹುಣಸೂರು: ಶೇ.82.16
ಎಚ್.ಡಿ.ಕೋಟೆ:ಶೇ.79.85
ನಂಜನಗೂಡು: ಶೇ.80.67
ಚಾಮುಂಡೇಶ್ವರಿ:ಶೇ.74.05
ಕೃಷ್ಣರಾಜ:ಶೇ.59.34
ಚಾಮರಾಜ:ಶೇ.61.12
ನರಸಿಂಹರಾಜ:ಶೇ.63.44
ವರುಣ:ಶೇ.84.39
ತಿ.ನರಸೀಪುರ:ಶೇ.78.77

 

ಮೈಸೂರು ಜಿಲ್ಲೆಯ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ
ಅಂತಿಮ ಮತದಾನದ ವರದಿಯ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 74.05% ಮತದಾನವಾಗಿದೆ.

ವಿಶೇಷ ಮತಗಟ್ಟೆಗಳ್ಳಿ ಮತ ಚಲಾಯಿಸಿದ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಸ್ಥಾಪಿಸಲಾಗಿದ್ದ ವಿಶೇಷ ಮತಗಟ್ಟೆಗಳಲ್ಲಿ ಬುಧವಾರ ನಡೆದ ಮತದಾನದಲ್ಲಿ ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಹರ್ಷ ವ್ಯಕ್ತಪಡಿಸಿದರು.

ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ 11 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅವುಗಳಲ್ಲಿ ಬುಡಕಟ್ಟು ಜನರನ್ನು ಸೆಳೆಯಲು ಬಸವನಗಿರಿ ಎ ಹಾಡಿ, ಭೀಮನಹಳ್ಳಿ ಹಾಗೂ ಪೆಂಜಹಳ್ಳಿ ಕಾಲೋನಿಯ ಗಿರಿಜನ ಆಶ್ರಮ ಶಾಲೆಗಳಲ್ಲಿ ಸ್ಥಾಪಿಸಲಾಗಿದ್ದ ಸಾಂಪ್ರದಾಯಿಕ ಮತಗಟ್ಟೆಗಳ್ಳಿ ಆದಿವಾಸಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಚುನಾವಣೆ ಹಬ್ಬದಲ್ಲಿ ಭಾಗಿಯಾದರು.

ಭೀಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಡಕಟ್ಟು ಗಿರಿಜನ ಆಶ್ರಮ ಶಾಲೆಯಲ್ಲಿ ಮತದಾನ ಮಾಡಲು ಬಂದಿದ್ದ ಮಾಸ್ತಿಗುಡಿ ಹಾಡಿಯ ಆದಿವಾಸಿ ಮಹಿಳೆ ಕಾಳಮ್ಮ ಮಾತನಾಡಿ, ನನಗೆ ವೋಟ್ ಮಾಡಿರುವುದಕ್ಕೆ ತುಂಬಾ ಖುಷಿ ಆಗಿದೆ. ನಾವು ನಮ್ಮ ಕುಟುಂಬ ಸಮೇತವಾಗಿ ಬಂದು ಮತದಾನ ಮಾಡಿದ್ದೇವೆ. ಹಾಗೆಯೇ ನಮ್ಮ ಹಾಡಿ ಎಲ್ಲಾ ಜನರು ಸ್ವಯಂ ಪ್ರೇರಿತರಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.

ಇನ್ನೂ ಅಂತರಸಂತೆ -163, ಮಾದಾಪುರ ಗ್ರಾ.ಪಂ.ನ ಕೋಳಗಾಲ-89 ಹಾಗೂ ಹೆಚ್.ಡಿ.ಕೋಟೆ ಪಟ್ಟಣ ಸ.ಮಾ.ಹಿ.ಪ್ರಾ.ಮಹಿಳಾ ಶಾಲೆ-106 ಕೇಂದ್ರದಲ್ಲಿ ಸಖಿ ಮತಗಟ್ಟೆ ತೆರೆಯಲಾಗಿತ್ತು. ಈ ಕೇಂದ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಮತದಾನ ಮಾಡಿದರು.

ಸಖಿ ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಮಹಿಳಾ ಯುವ ಮತದಾದರು ತುಂಬಾ ಉತ್ಸಾಹದಿಂದ ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಕೆಲವು ಯುವ ಮತದಾರರು ಪ್ರಜಾಪ್ರಭುತ್ವ ಹಬ್ಬದಲ್ಲಿ ಮೊದಲ ಬಾರಿಗೆ ಭಾಗವಹಿಸಿ ಮತ ಹಾಕಿದ್ದೇವೆ. ನಮ್ಮನ್ನಾಳುವ ಸರಕಾರವನ್ನು ನಾವೇ ಆಯ್ಕೆ ಮಾಡುವ ಅಧಿಕಾರ ನಮಗೆ ಸಿಕ್ಕಿದೆ. ಇದು ಸಂವಿಧಾನ ಬದ್ಧ ಹಕ್ಕಾಗಿದೆ ತುಂಬಾ ಸಂತಸ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬಾಚೇಗೌಡನಹಳ್ಳಿ ಗ್ರಾ.ಪಂ ನ ಜೊಂಪನಹಳ್ಳಿ-45 ಹಾಗೂ ಹೆಚ್.ಡಿ.ಕೋಟೆ ಪಟ್ಟಣ ಸ.ಮಾ.ಹಿ.ಪ್ರಾ.ಮಹಿಳಾ ಶಾಲೆ-107 ಯುವ ಮತಗಟ್ಟೆ ಕೇಂದ್ರಗಳಲ್ಲಿ ಯುವ ಮತದಾರರು ಭಾಗವಹಿ ಮತದಾನ ಮಾಡಿ ತಮ್ಮ ಕರ್ತವ್ಯ ನಿರ್ವಹಿಸದರು.

ವಿಕಲಚೇತನ ಮತಗಟ್ಟೆಯಲ್ಲಿ ಶೇ.72 ರಷ್ಟು ಮತದಾನ : ಹೆಚ್.ಡಿ.ಕೋಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಕಲ ಚೇತನ ಸ್ನೇಹಿ ಸ್ಥಾಪಿಸಲಾಗಿತ್ತು, ಈ ಮತಗಟ್ಟೆಯಲ್ಲಿ 405 ಮಹಿಳಾ ಹಾಗೂ 383 ಪುರುಷರು ಸೇರಿ ಒಟ್ಟು 788 ವಿಶೇಷ ಚೇತನ ಮತದಾರರು ನೋಂದಣಿಯಾಗಿದ್ದರು.ಪುರಸಭೆ ವತಿಯಿಂದ ದಿವ್ಯಾಂಗ ಚೇತನರಿಗೆ ವೀಲ್ ಛೇರ್, ವಾಹನ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಎಲ್ಲಾ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡ ವಿಶೇಷ ಚೇತನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಈ ಮತಗಟ್ಟೆಯಲ್ಲಿ ಒಟ್ಟು 566 ವಿಕಲಚೇತನರು ಮತ ಚಲಾಯಿಸಿದ್ದು, ಶೇ.72 ರಷ್ಟು ಮತದಾನ ನಡೆದಿದೆ. ವಿಕಲಚೇತನರು ಪ್ರತ್ಯೇಕವಾಗಿ ಮತಗಟ್ಟೆ ಸ್ಥಾಪಿಸಿರುವುದರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರ ಶೀರ್ಷಿಕೆ: ಹೆಚ್.ಡಿ.ಕೋಟೆ ತಾಲ್ಲೂಕಿನ ಭೀಮನಹಳ್ಳಿ ಬುಡಕಟ್ಟು ಗಿರಿಜನ ಆಶ್ರಮ ಶಾಲೆಯಲ್ಲಿ ಬುಡಕಟ್ಟು ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದು.


Share