ಮೈಸೂರು- ದೀಪಾಲಂಕಾರ ವಂಚಿತ ಗಾಂಧೀ ಚೌಕ(ಸ್ಕ್ವೇರ್) ವೀಕ್ಷಿಸಿ

232
Share

 

ಮೈಸೂರು- ವಿಶ್ವವಿಕ್ಖ್ಯಾತ ಮೈಸೂರು ದಸರಾ ಇನ್ನು ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗುತ್ತದೆ ಆದರೆ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಚೌಕ ಅಥವಾ ಗಾಂಧೀ ಸ್ಕ್ವೇರ್ ಈವರೆಗೆ ಯಾವುದೇ ದೀಪಾಲಂಕಾರವಿಲ್ಲದೆ ಸ್ವರಗಿ ನಿಂತಿದೆ. ಈ ಚೌಕದ ಸುತ್ತ ಹಲವಾರು ವಾಣಿಜ್ಯ ಕೇಂದ್ರಗಳಿದ್ದು ಸ್ಥಳ ಪರಿಸ್ಥಳಗಳಿಂದ ಅನೇಕರು ಇಲ್ಲಿ ವಾಣಿಜ್ಯ ಚಟುವಟಿಕೆಗಳಿಗಾಗಿ ನಿತ್ಯ ಬಂದು ಹೋಗುವರು ಇರುತ್ತಾರೆ. ಇದೊಂದು ಸದಾ ಜನನಿಬೀಡು ಸ್ಥಳವಾಗಿದೆ ಸಮೀಪದಲ್ಲಿ ಪ್ರಸಿದ್ಧ ಕ್ಲಾಕ್ ಟವರ್ ಅರಮನೆ ದ್ವಾರ ಐತಿಹಾಸಿಕ ಕಟ್ಟಡ ಟೌನ್ ಹಾಲ್ ಎಲ್ಲವೂ ಇದ್ದಾಗಿಯೂ ಈ ಚೌಕಕ್ಕೆ ಮಾತ್ರ ಯಾವುದೇ ರೀತಿಯಲ್ಲೂ ದೀಪಾಲಂಕಾರಗಳನ್ನು ಮಾಡದೆ ಏಕೆ ಕೈ ಬಿಡಲಾಗಿದೆ ಎಂದು ಪ್ರಶ್ನೆಯಾಗಿದೆ.


Share